ನವದೆಹಲಿ: ಪುಲ್ವಾಮಾ ಉಗ್ರದಾಳಿಯಲ್ಲಿ ಮೃತಪಟ್ಟಿರುವ ಯೋಧರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಹಾಗೂ ಕುಟುಂಬದ ಜೀವನದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಫೌಂಡೇಶನ್ ಹೇಳಿದೆ.
ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಉದ್ಯೋಗ ಕೊಡಿಸುವ ಜವಾಬ್ದಾರಿ ನಮ್ಮದು. ಹಾಗೇ ಅವರ ಕುಟುಂಬಕ್ಕೆ ಅಗತ್ಯ ಸೌಕರ್ಯ ನೀಡುತ್ತೇವೆ. ಅಲ್ಲದೆ, ಗಾಯಾಳು ಯೋಧರ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಾಣ ಮಾಡಿದ್ದಾಗಿ ತಿಳಿಸಿದೆ.
ನಮ್ಮ ಪ್ರೀತಿಯ ಸೈನಿಕರಿಗಾಗಿ ಯಾವುದೇ ಸೇವೆ ನೀಡಲು ಸಿದ್ಧ ಎಂದು ರಿಲಯನ್ಸ್ ಹೇಳಿದೆ.