ಹುತಾತ್ಮ ಯೋಧರಿಗೆ ಮಹಿಳೆಯರ ಕಂಬನಿ

ಸಿಂಧನೂರು: ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿ ಹಚ್ಚಿ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಬಸವವೃತ್ತದಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮೇಣದ ಬತ್ತಿ ಹಚ್ಚಿಕೊಂಡು ಮೆರವಣಿಗೆ ಮೂಲಕ ಗಾಂಧಿವೃತ್ತಕ್ಕೆ ಆಗಮಿಸಿ ಹುತಾತ್ಮ ವೀರಯೋಧರಿಗೆ ನಮನ ಸಲ್ಲಿಸಿದರು. ರಾಜೇಂದ್ರಕುಮಾರ ಶಾಲೆ ಮುಖ್ಯಶಿಕ್ಷಕಿ ತುಳಜಾರಾಣಿ, ಚಂದ್ರಕಲಾ ಪ್ರಕಾಶ, ಭಾರತಿ ತಿವಾರಿ, ಸುಜಾತ ಚೌಹಾಣ್, ಚಂದ್ರಕಲಾ, ದೇವಿರಮ್ಮ, ಲಕ್ಷ್ಮಿ ಪತ್ತಾರ ಇತರರಿದ್ದರು.

ಮಲ್ಲಾಪುರ: ಗ್ರಾಮದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೈನಿಕ ಲಿಂಗನಗೌಡ ಗುಡದೂರರಿಂದ ಗಿಡ ನೆಡಲಾಯಿತು. ವನಸಿರಿ ಫೌಂಡೇಷನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ, ವೀರೇಶ ವಕೀಲ, ಶಿವರಾಜ ಪಾಟೀಲ್ ಗುಂಜಳ್ಳಿ, ಅಮರೇಶ ರೈತನಗರ ಕ್ಯಾಂಪ್, ವಿಶ್ವನಾಥ ಪಾಟೀಲ್, ಮಂಜು ಗಾಣಗೇರ, ಆನಂದ, ದೇವರೆಡ್ಡಿ ಕೆಸರಟ್ಟಿ, ಪರಶುರಾಮ ಮಲ್ಲಾಪುರ ಇತರರಿದ್ದರು.