ಸೆ.30ಕ್ಕಿಲ್ಲ ಮಾರ್ಟಿನ್: ಧ್ರುವ ಅಭಿನಯದ ಚಿತ್ರದ ಬಿಡುಗಡೆ ಮುಂದೂಡಿಕೆ

ಬೆಂಗಳೂರು: ಧ್ರುವ ಸರ್ಜಾ ಅಭಿಮಾನಿಗಳಿಗೆ ಒಂದು ನಿರಾಸೆಯ ಸುದ್ದಿ. ಸೆ. 30ಕ್ಕೆ ಧ್ರುವ ಅಭಿನಯದ ‘ಮಾರ್ಟಿನ್’ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣದಲ್ಲಿ ಒಂದಿಷ್ಟು ವಿಳಂಬವಾಗಿರುವುದರಿಂದ ಬಿಡುಗಡೆ ಮುಂದೂಡಲ್ಪಟ್ಟಿದೆ. ಹೊಸ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದಂತೆ. ಎ.ಪಿ. ಅರ್ಜುನ್ ನಿರ್ದೇಶನದ ’ಮಾರ್ಟಿನ್’ ಕಳೆದ ವರ್ಷವೇ ಆರಂಭವಾಗಿತ್ತು. ಚಿತ್ರತಂಡದವರು ಕೆಲವು ತಿಂಗಳುಗಳ ಹಿಂದೆ ಕಾಶ್ಮೀರ, ಹೈದರಾಬಾದ್ ಮುಂತಾದ ಕಡೆ ಹಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿದಿದ್ದರು. ಅಂದುಕೊಂಡಂತೆ ಚಿತ್ರ ಮುಗಿಯಲಿದೆ ಎಂಬ ನಂಬಿಕೆಯಿಂದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡದವರು ಘೋಷಿಸಿದ್ದರು. ಆದರೆ, ಈಗ ಸ್ವಲ್ಪ … Continue reading ಸೆ.30ಕ್ಕಿಲ್ಲ ಮಾರ್ಟಿನ್: ಧ್ರುವ ಅಭಿನಯದ ಚಿತ್ರದ ಬಿಡುಗಡೆ ಮುಂದೂಡಿಕೆ