ಲಂಡನ್: ಹದಿಮೂರು ವರ್ಷದ ಬಾಲಕನನ್ನು ತನ್ನ ಬಲೆಗೆ ಬೀಳಿಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಆತನ ಮಗುವಿಗೆ ತಾಯಿಯಾಗಿದ್ದ ವಿವಾಹಿತೆ ನರ್ಸರಿ ಉದ್ಯೋಗಿಗೆ ಲಂಡನ್ ನ್ಯಾಯಾಲಯ 30 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಲಿಯಾ ಕೊರ್ಡೈಸ್ (20) ಶಿಕ್ಷೆಗೆ ಗುರಿಯಾದ ವಿವಾಹಿತೆ. ವಿಂಡ್ಸರ್ ನಿವಾಸಿಯಾಗಿರುವ ಲಿಯಾ, 2017ರ ಜನವರಿಯಲ್ಲಿ ರಾತ್ರಿ ಕಂಪ್ಯೂಟರ್ ಗೇಮ್ ಆಡುತ್ತಿದ್ದ ಬಾಲಕನ ಬೆಡ್ರೂಮ್ಗೆ ತೆರಳಿ ಬಲವಂತವಾಗಿ ಸೆಕ್ಸ್ಗೆ ಒತ್ತಾಯಿಸಿ, ಆತನ ಪ್ಯಾಂಟ್ ಕೆಳಗೆ ಜಾರಿಸಿ ಕಾಮದಾಹಕ್ಕೆ ಬಳಸಿಕೊಂಡಿದ್ದಳು. ಈ ವೇಳೆ ಆಕೆ ಪಾನಮತ್ತಳಾಗಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್ ಟ್ರಂಪ್…!
ಬಳಿಕ ಬಾಲಕನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಲಿಯಾ, ಆತನನ್ನು ಹೊಗಳುವುದು ಹಾಗೂ ಮೀನು ಮತ್ತು ಚಿಪ್ಸ್ ಮುಂತಾದ ವಸ್ತುಗಳನ್ನು ಕೊಂಡು ತರುವುದು ಮಾಡುತ್ತಿದ್ದಳು. ಯಾವುದೇ ರಕ್ಷಣಾ ಕ್ರಮಗಳನ್ನು ಅನುಸರಿಸದೇ ತಿಂಗಳಿಗೆ ಎರಡು ಬಾರಿಯಂತೆ ವರ್ಷಪೂರ್ತಿ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯು ಆಗಿದ್ದು, ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾಳೆ. ತನ್ನ ಗಂಡನಿಗೆ ಯಾವುದೂ ಗೊತ್ತಾಗದಂತೆ ರಹಸ್ಯವಾಗಿಯೇ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದ್ದಾಳೆ.
ಪ್ರಾರಂಭದಲ್ಲಿ ಆರೋಪಿ ಲಿಯಾ ಪತಿಯು ಮಗು ತನ್ನದೆಂದು ನಂಬಿದ್ದ. ಆದರೆ, ನಂತರದಲ್ಲಿ ನಡೆದ ಡಿಎನ್ಎ ಪರೀಕ್ಷೆಯಿಂದ ಮಗು ಶಾಲಾ ಬಾಲಕನಿಗೆ ಹುಟ್ಟಿದ್ದು ಎಂದು ಬಹಿರಂಗವಾಗಿದೆ. ಆಘಾತಕಾರಿಯೆಂದರೆ, ಬಾಲಕನೊಂದಿಗಿನ ಸಂಬಂಧವನ್ನು ನಿರಾಕರಿಸಿರುವ ಲಿಯಾ, ಆತನಿಂದ ನಾನೇ ಅತ್ಯಾಚಾರಕ್ಕೆ ಒಳಗಾದೆ ಎಂದು ಕೋರ್ಟ್ ಮುಂದೆ ಹೇಳಿಕೊಂಡಿದ್ದಳು. ಆದರೆ, ಆಕೆಯ ಹೇಳಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ, ಸಾಕ್ಷ್ಯಾಧಾರಗಳನ್ನು ಆಧರಿಸಿ ಶಿಕ್ಷೆಯನ್ನು ವಿಧಿಸಿದೆ.
ಇದನ್ನೂ ಓದಿ: ಉರುಳಿಬಿದ್ದ ಟ್ರಕ್: ಮೂವರು ಮಹಿಳಾ ಕಾರ್ಮಿಕರ ಸಾವು, 12 ಮಂದಿಯ ಸ್ಥಿತಿ ಗಂಭೀರ
ಚೈಲ್ಡ್ ಕೇರ್ ಅಧ್ಯಯನ ಮಾಡಿರುವ ಕೊರ್ಡೈಸ್, ಸ್ಥಳೀಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಬಾಲಕ ಹಾಗೂ ಲಿಯಾ ಒಂದೇ ಏರಿಯಾದವರು. 17 ಮತ್ತು 18ನೇ ವರ್ಷದಲ್ಲಿ ಬಾಲಕನೊಂದಿಗೆ ಅನೇಕ ಬಾರಿ ಲೈಂಗಿಕ ಕ್ರಿಯೆ ನೆಡೆಸಿದ್ದಾಳೆ. ಕಾನೂನಾತ್ಮಕ ಕಾರಣಗಳಿಂದ ಬಾಲಕನ ಗುರುತನ್ನು ಬಹಿರಂಗಗೊಳಿಸಿಲ್ಲ. ಆದರೆ, ಪೊಲೀಸ್ ವಿಚಾರಣೆ ವೇಳೆ ಬಾಲಕ ಮಾತನಾಡಿದ್ದು, ಅವರು ನನ್ನೊಂದಿಗೆ ಅದನ್ನು ಮಾತ್ರ ಬಯಸುತ್ತಿದ್ದರು. ಆರಂಭದಲ್ಲಿ ತಬ್ಬಿಕೊಳ್ಳುತ್ತಿದ್ದಳು ಮತ್ತು ಮುತ್ತು ನೀಡುತ್ತಿದ್ದಳು ಹಾಗೂ ನನ್ನ ಪ್ಯಾಂಟ್ ಕೆಳಗೆ ಜಾರಿಸಿ ಸೆಕ್ಸ್ಗೆ ಒತ್ತಾಯಿಸುತ್ತಿದ್ದಳು ಎಂದ ಪೊಲೀಸ್ ವಿಚಾರಣೆ ವೇಳೆ ಬಾಲಕ ಹೇಳಿಕೊಂಡಿದ್ದಾನೆ. ನನ್ನ ಬಗ್ಗೆ ಆಕೆ ಯೋಚಿಸುತ್ತಿರಲಿಲ್ಲ ಎಂದು ನನಗೀಗ ಭಾಸವಾಗುತ್ತಿದೆ ಎಂದಿದ್ದಾನೆ.
ಇದನ್ನೂ ಓದಿ: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಕೋರ ವೈದ್ಯ!
ನ್ಯಾಯಾಲಯ ಮುಂದೆಯೂ ಹೇಳಿಕೆ ನೀಡಿರುವ ಬಾಲಕ, ಇತ್ತೀಚಿನಿಂದ ಲಿಯಾರೊಂದಿಗೆ ನಾನು ಸಂಪರ್ಕದಲ್ಲಿಲ್ಲ. ನಾನು ನನ್ನ ಮಗುವನ್ನು ಸಹ ನೋಡಿಲ್ಲ. ನನ್ನ ಮಗಳನ್ನು ನೋಡಿದ ನಂತರ ಅವಳನ್ನು ನನ್ನ ಜೀವನದಿಂದ ಹೊರಗೆ ಕರೆದೊಯ್ಯುವುದು ತುಂಬಾ ಕಷ್ಟಕರವಾಗಿದೆ. ಇದೇ ನನಗೆ ಶಿಕ್ಷೆ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ನಾನು ನನ್ನ ಮಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಬಹುದು ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾನೆ.
ಘಟನೆ ಕುರಿತು ಬಾಲಕನ ತಾಯಿ ಮಾತನಾಡಿ, ನನ್ನ ಮಗ ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಾಗಿದ್ದಾನೆ. ಮಗಳೊಂದಿಗೆ ಸಂಪರ್ಕಕ್ಕೆ ಬಂದಾಗಿನಿಂದ ತುಂಬಾ ಚೆನ್ನಾಗಿದ್ದಾನೆ. ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಲಿಯಾ ಬಗ್ಗೆ ಮಾತನಾಡಿರುವ ಮಾಜಿ ಪತಿ ಡ್ಯಾನಿಯಲ್, ಅಪ್ರಾಪ್ತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ನನಗೆ ದ್ರೋಹ ಬಗೆದಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಗಂಡ ಹೆಂಡತಿಯಾಗಲು ಅಡ್ಡಿಯಾದ ಕರ್ನಾಟಕ-ಕೇರಳ ಬಾರ್ಡರ್!
ಮಗು ತನ್ನದೇ ಅಂದುಕೊಂಡಿದ್ದ ಪತಿಗೆ ಡಿಎನ್ಎ ಪರೀಕ್ಷೆ ಶಾಕ್: ವಿವಾಹಿತೆಯ ಬಲೆಯಲ್ಲಿ 13ರ ಬಾಲಕ