ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ನವದಂಪತಿ; ಕೇಸರಿ ಶಾಲು ಬದಲಿಸಿಕೊಂಡು ಮೋದಿಗೆ ಜೈ

ತುಮಕೂರು: ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದ ನವಜೋಡಿ ಮತದಾನ ಮಾಡಿ ಬದ್ಧತೆ ತೋರಿದ್ದಾರೆ.

ಡಿಎನ್​ಡಿಎಸ್​ ಕಲ್ಯಾಣ ಮಂಟಪದಲ್ಲಿ ಇಂದು ಅಪೂರ್ವ ಮತ್ತು ಪ್ರವೀಣ್​ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ, ಆ ದಂಪತಿ ಕಲ್ಯಾಣ ಮಂಟಪದಿಂದ ನೇರವಾಗಿ ಭಾಗ್ಯನಗರದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ನವವಧು ಅಪೂರ್ವ ಅವರು ಕೆಎಸ್​ಆರ್​ಟಿಸಿ ಡಿಸಿ ಗಜೇಂದ್ರ ಅವರ ಪುತ್ರಿ.

ಮೋದಿ ಹವಾ
ಮಂಗಳೂರಲ್ಲಿ ಸಹ ಮೋದಿ ಹವಾ ಜೋರಾಗಿದೆ. ಕುಲಶೇಖರದ ಹಾಲ್​ನಲ್ಲಿ ಮದುವೆಯಾದ ನೀತಾ ಮತ್ತು ಜಯಂತ್​ ಎಂಬುವರು ಪರಸ್ಪರ ಕೇಸರಿ ಶಾಲು ಬದಲಿಸಿಕೊಂಡು ಮೋದಿ ಘೋಷಣೆ ಕೂಗಿದ್ದಾರೆ.