ಬೆಂಗಳೂರು: ಇತ್ತೀಚೆಗೆ ಬಹಳಷ್ಟು ತಾರಾಜೋಡಿಗಳು ವಿಚ್ಛೇದನ ಪಡೆಯುತ್ತಿರುವುದು ಹೆಚ್ಚಾಗಿದೆ. ಮೊನ್ನೆಮೊನ್ನೆಯಷ್ಟೇ ಧನುಷ್-ಐಶ್ವರ್ಯಾ ಜೋಡಿ ಡೈವೋರ್ಸ್ ಪಡೆದಿದ್ದು ಅದಕ್ಕೆ ತಾಜಾ ಉದಾಹರಣೆ. ಇವರಿಬ್ಬರ ವಿಚ್ಛೇದನದ ಬೆನ್ನಿಗೇ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಟ್ವೀಟ್ ಮಾಡಿ, ಮದುವೆ ಎಂಬ ವ್ಯವಸ್ಥೆಯನ್ನೇ ಟೀಕಿಸಿದ್ದರು.
ಮಾತ್ರವಲ್ಲ, ಈ ವಿಚ್ಛೇದನಗಳು ಯುವಕರಿಗೆ ಮದುವೆಯ ಅಪಾಯದ ಕುರಿತ ಎಚ್ಚರಿಕೆ ಗಂಟೆಗಳು ಎಂದೂ ಹೇಳಿದ್ದರು. ಹೀಗೆ ಮದುವೆಯನ್ನು ವಿರೋಧಿಸಿ ಅವರು ಸರಣಿ ಟ್ವೀಟ್ ಮಾಡಿದ್ದರು. ಅದರ ಬೆನ್ನಿಗೇ ಇದೀಗ ಮ್ಯಾರೇಜ್ ಸ್ಟ್ರೈಕ್ (#MarriageStrike) ಎಂಬ ಹೆಸರಲ್ಲಿ ಮದುವೆ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ವಿಶೇಷವೆಂದರೆ ಈ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಇದು ಟ್ವಿಟರ್ನಲ್ಲಿ ಇಂಡಿಯಾ ಟ್ರೆಂಡಿಂಗ್ ಕೂಡ ಆಗಿದೆ.
ಮೆನ್ಸ್ ರೈಟ್ಸ್ ಆ್ಯಕ್ಟಿವಿಸ್ಟ್ಸ್ ಮತ್ತು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಮದುವೆಯಾಗಿ ಅನ್ಯಾಯವಾಗಿ ಸಮಸ್ಯೆಗೆ ಸಿಲುಕಿಕೊಳ್ಳುವ ಬದಲು ಮದುವೆ ಆಗದಿರುವುದೇ ಒಳಿತು ಎಂಬ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಜೀವನಾಂಶಕ್ಕಾಗಿ ಪುರುಷರ ವಿರುದ್ಧ ಸುಳ್ಳುಕೇಸ್ಗಳನ್ನು ಹಾಕಲಾಗುತ್ತಿದೆ. ಮತ್ತೊಂದೆಡೆ ಕಾನೂನು-ವ್ಯವಸ್ಥೆಯಲ್ಲೂ ಪುರುಷರ ರಕ್ಷಣೆಗೆ ಆದ್ಯತೆ ಇಲ್ಲ. ಅದಕ್ಕಾಗಿ ಮದುವೆಯನ್ನೇ ವಿರೋಧಿಸೋಣ ಎಂದು ಬಹಳಷ್ಟು ಪುರುಷರು #MarriageStrike ಹ್ಯಾಷ್ಟ್ಯಾಗ್ನೊಂದಿಗೆ ತಮ್ಮ ಅಭಿಪ್ರಾಯ, ಅನಿಸಿಕೆ, ಅಭಿಮತಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಇದು ಟ್ರೆಂಡಿಂಗ್ ಆಗಿದೆ.
2014ರಲ್ಲಿ ದೆಹಲಿ ಮಹಿಳಾ ಆಯೋಗ ಸಲ್ಲಿಸಿದ ವರದಿ ಪ್ರಕಾರ 2013 ಏಪ್ರಿಲ್ನಿಂದ 2014ರ ಜುಲೈ ವರೆಗೆ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ಶೇ.53.2 ಸುಳ್ಳು ದೂರುಗಳು ಎಂದು ಉಲ್ಲೇಖಿಸಲಾಗಿದೆ. ಇನ್ನು ಇತ್ತೀಚಿನ ಎನ್ಸಿಆರ್ಬಿ ವರದಿ ಪ್ರಕಾರ ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಬ್ಬ ಪುರುಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಇನ್ನು ಎನ್ಸಿಆರ್ಬಿ ಮಾಹಿತಿ ಪ್ರಕಾರ ದೇಶದಲ್ಲಿ ದಾಖಲಾಗಿರುವ 38,947 ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚೂಕಡಿಮೆ ಕಾಲುಭಾಗ ಅಂದರೆ 10,068 ಕೇಸ್ಗಳಲ್ಲಿ ಮದುವೆಯ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇದಲ್ಲಿ ಪಾಲಕರು ತಮ್ಮ ಪುತ್ರಿಯ ಅನೈತಿಕ ಸಂಭೋಗ ಮುಚ್ಚಿಡುವ ಸಲುವಾಗಿ ಹೀಗೆ ಸುಳ್ಳು ದೂರು ದಾಖಲಿಸಿರುವುದೇ ಹೆಚ್ಚು ಎಂಬಿತ್ಯಾದಿ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತ ಈ ಅಭಿಯಾನ ನಡೆಸಲಾಗುತ್ತಿದೆ. ಮತ್ತೊಂದೆಡೆ ಕೆಲವರು ಅದೇ ಹ್ಯಾಷ್ಟ್ಯಾಗ್ ಮೂಲಕ ಈ ಅಭಿಯಾನ ನಡೆಸುತ್ತಿರುವವರ ಕುರಿತು ವ್ಯಂಗ್ಯವಾಡಿದ್ದೂ ಅಲ್ಲಲ್ಲಿ ಕಂಡುಬಂದಿದೆ.
https://twitter.com/oDW7utnv2gNnUKv/status/1483741238922981376?s=20
Even Batman is scared of marriage #MarriageStrike#विवाह_बहिष्कार
— Veer Bhadra MRA (@SilverCavill) January 18, 2022
to avoid marital rape. pic.twitter.com/vfEn04I5JU