ಐನಾಪುರ: ವಿಜಯಪುರ ನಗರದ 16ನೇ ವಾರ್ಡ್‌ನ ಯೋಗಾಪುರದಲ್ಲಿ ಹನುಮಾನ ಜಾತ್ರಾ ಮಹೋತ್ಸವ ಅಂಗವಾಗಿ ಜ.29ರವರೆಗೆ ನಡೆಯುತ್ತಿರುವ ಮುಗಳಖೋಡ ಸದ್ಗುರು ಯಲ್ಲಾಲಿಂಗ ಮಹಾರಾಜರ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಯಲ್ಲಾಲಿಂಗ ಪ್ರಭುಗಳ ಸಾಂಪ್ರದಾಯಿಕ ಮದುವೆ ಕಾರ್ಯ ನಡೆಯಿತು.
ಮುಗಳಖೋಡ ಯಲ್ಲಾಲಿಂಗ ಪ್ರಭುಗಳ ದಂಪತಿ ವೇಷದಲ್ಲಿ ಚಿಕ್ಕ ಮಕ್ಕಳನ್ನು ಸಾಂಪ್ರದಾಯಿಕವಾಗಿ ವಿಶೇಷ ಅಲಂಕಾರ ಮಾಡಿ ಪ್ರವಚನ ವೇದಿಕೆಯಲ್ಲಿ ಅಕ್ಷತೆ ಹಾಕಲಾಯಿತು. ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪ್ರವಚನಕಾರ ಮಸೂತಿಯ ಡಾ.ಶಿವಲಿಂಗಯ್ಯ ಶರಣರು ಪುರಾಣಿಕಮಠ, ಜೇವರ್ಗಿ ತಾಲೂಕಿನ ಜೇರಟಗಿ ಶಿವಯ್ಯ ಸ್ವಾಮಿಗಳು, ರವಿಕುಮಾರ ಮೋರಟಗಿ ಇತರರಿದ್ದರು.