More

  ಬುಡಕಟ್ಟು ಸಮುದಾಯದ ಗರ್ಭಿಣಿಯರಿಗೆ ಸೀಮಂತ

  ಗೋಣಿಕೊಪ್ಪ: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಕಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಡಕಟ್ಟು ಸಮುದಾಯದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.

  ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಧು ಮಾತನಾಡಿ, ಸೀಮಂತ ಕಾರ್ಯಕ್ರಮ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಲಿದೆ ಎಂದರು.

  ಬೊಮ್ಮಾಡು, ಬ್ರಹ್ಮಗಿರಿಪುರ ಹಾಗೂ ಕಾನೂರು ವ್ಯಾಪ್ತಿಯ 10 ಗರ್ಭಿಣಿಯರು ಭಾಗವಹಿಸಿದ್ದರು. ಯತ್ ಮೂವ್‌ಮೆಂಟ್‌ನ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ಆರ್‌ಸಿಎಚ್ ವಿಭಾಗದ ಸಂಯೋಜಕರಾದ ಸೇಲಿನಾ ಡಿಸೋಜ, ಆರೋಗ್ಯ ಸಹಾಯಕರಾದ ಅನಿಲ್ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಪಿಸಿಎಚ್‌ಒ ಶೋಭಾ, ಹರಿಣಾಕ್ಷಿ, ರೀತಾ, ಮಲ್ಲಿಕಾ, ಸುಜಾತಾ ಮತ್ತು ಗೌರಮ್ಮ ಉಪಸ್ಥಿತರಿದ್ದರು.

  See also  ನನಗಿಂತ ನಮ್ಮ ತಾಯಿನೇ ಬಹಳ ಸ್ಟೈಲಿಶ್​: ನೀತು ವನಜಾಕ್ಷಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts