More

    ಅಮೃತಬಿಂದು| ನಿಷಿದ್ಧ ವಿಷಯಗಳಲ್ಲಿ ಪ್ರವೃತ್ತವಾಗುವ ಕಾಮವು ಅರಿಷಡ್ವೈರಿಗಳಲ್ಲಿ ಮೊದಲನೆಯದು

    ಕಾಮಂ ಭಕ್ತಿರಸೌ ಕುರ್ಯಾದವಿಷಯೇಷು ನ ಜಾತುಚಿತ್ | ಏಕತ್ರಿಂಶಮಿದಂ ಶೀಲಂ ನಿಷ್ಕಾಮತ್ತ್ವಂ ಪ್ರಕೀರ್ತಿತಮ್ ||

    ಕಾಮವನ್ನು ಶಿವಭಕ್ತಿಯಲ್ಲಿ ಮಾಡಬೇಕೆ ಹೊರತು ಪರಸ್ತ್ರೀ ಮುಂತಾದ ನಿಷಿದ್ಧ ವಿಷಯಗಳಲ್ಲಲ್ಲ. ಇದು ನಿಷ್ಕಾಮತ್ತ್ವವೆಂದು ಕರೆಯಲ್ಪಡುವ ಮೂವತ್ತೊಂದನೆಯ ಶೀಲ. ನಿಷಿದ್ಧ ವಿಷಯಗಳಲ್ಲಿ ಪ್ರವೃತ್ತವಾಗುವ ಕಾಮವು ಅರಿಷಡ್ವೈರಿಗಳಲ್ಲಿ ಮೊದಲನೆಯದು. ‘ಸಂಗಾತ್ ಸಂಜಾಯತೇ ಕಾಮಃ’ ಎಂಬ ಗೀತೋಕ್ತಿಯಂತೆ ಸ್ತ್ರೀಪುರುಷರಲ್ಲಿ ಪರಸ್ಪರ ಸಂಕಲ್ಪ ಮತ್ತು ಸಾಮೀಪ್ಯದಿಂದ ಮನದಲ್ಲಿ ಕಾಮ ಜಾಗೃತವಾಗುತ್ತದೆ. ಶಿವಚಿಂತನೆ ಶಿವಧ್ಯಾನಾದಿಗಳನ್ನು ಪ್ರೇಮಪೂರ್ವಕ ಮಾಡುತ್ತ ಸಾಗಿದಾಗ ಆ ಕಾಮವಾಸನೆ ಕ್ರಮೇಣ ಇಳಿಮುಖವಾಗಿ ಭಕ್ತಿರೂಪ ತಾಳುತ್ತದೆ.

    | ಚಂದ್ರಜ್ಞಾನಾಗಮ (9.89) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts