ನಿತ್ಯಂ ಯದಿಷ್ಟಲಿಂಗಸ್ಯ ಸ್ಪರ್ಶನಂ ತ್ವವಿಯೋಗತಃ | ತತ್ ಸಪ್ತದಶಕಂ ಪ್ರೋಕ್ತಂ ವಪುಸಾರ್ಥಕತಾಸ್ಪದಮ್ ||
ಇನ್ನು ಚರ್ಮಕ್ಕೆ ಸಂಬಂಧಿಸಿದ ಶೀಲಗಳನ್ನು ಹೇಳಲಾಗುತ್ತದೆ. ಎಂದೂ ಅಗಲದಂತೆ ನಿತ್ಯವೂ ಶರೀರದ ಚರ್ಮಕ್ಕೆ ಸ್ಪರ್ಶವಾಗುವ ರೀತಿಯಲ್ಲಿ ದೇಹದ ಮೇಲೆ ಸದಾ ಇಷ್ಟಲಿಂಗವನ್ನು ಧರಿಸುವುದು ಹದಿನೇಳನೆಯ ಶೀಲವಾಗಿದೆ. ಈ ಶೀಲದ ಆಚರಣೆಯು ಶರೀರದ ಸಾರ್ಥಕತೆಗೆ ಆಸ್ಪದವಾಗಿದೆ. ಇಷ್ಟಲಿಂಗವನ್ನು ದೇವರ ಜಗುಲಿಯ ಮೇಲೆ ಇಡುವುದು, ಗೂಟಕ್ಕೆ ಹಾಕುವುದು ಅಥವಾ ಇನ್ನೊಬ್ಬರ ಕೈಯಲ್ಲಿ ಕೊಡುವುದು ಇವನ್ನೆಲ್ಲ ಮಾಡಬಾರದು. ಇದಕ್ಕೆ ನಮ್ಮ ದೇಹವೇ ಜಗುಲಿ. ಕಾರಣ ಇಷ್ಟಲಿಂಗಧಾರಿಯ ದೇಹವು ದೇವಾಲಯಕ್ಕೆ ಸಮಾನ.
| ಚಂದ್ರಜ್ಞಾನಾಗಮ (9.72) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು