More

    ಅಮೃತಬಿಂದು| ಧನ, ಕನಕ ಮೊದಲಾದ ಲೌಕಿಕ ವಿಷಯಗಳಲ್ಲಿ ಲೋಭ ಇರಬಾರದು ಯಾಕೆ?

    ನ ಧನಾದೌ ವಹೇಲ್ಲೋಭಂ ಶಿವಸ್ಯಾರಾಧನೇ ವಹೇತ್ | ಅಲೋಭಾಖ್ಯಮಿದಂ ಶೀಲಂ ತ್ರಯತ್ರಿಂಶಂ ಸಮೀರಿತಮ್ ||

    ಶಿವನ ಆರಾಧನೆಯ ವಿಷಯದಲ್ಲಿ ಲೋಭ ತಾಳಬೇಕೇ ಹೊರತು ಧನ, ಕನಕ ಮೊದಲಾದ ಲೌಕಿಕ ವಿಷಯಗಳಲ್ಲಿ ಇರಬಾರದು. ಈ ವಿಧವಾದ ಆಚರಣೆ ಅಲೋಭವೆಂದು ಕರೆಯಲ್ಪಡುವ ಮೂವತ್ಮೂರನೆಯ ಶೀಲ. ಮನುಷ್ಯನ ಎಲ್ಲ ಪಾಪಗಳಿಗೆ ಲೋಭವೇ ಮೂಲ ಕಾರಣ. ಮನಸ್ಸೇ ಮೊದಲಾದ ಎಲ್ಲ ಇಂದ್ರಿಯಗಳಿಗೆ ಸುಖವನ್ನುಂಟುಮಾಡುವ ಎಲ್ಲ ಪ್ರಕಾರದ ವಸ್ತು-ವ್ಯಕ್ತಿಗಳು ತನಗೆ ಬೇಕೇ ಬೇಕೆಂದು ಬಯಸುವ ಮನೋವೃತ್ತಿಗೆ ಲೋಭವೆನ್ನುತ್ತಾರೆ. ಈ ಮನೋವೃತ್ತಿಯು ಮೇಲ್ನೋಟಕ್ಕೆ ಸುಖದ ಮಾರ್ಗ ಎನಿಸಿದರೂ, ವಸ್ತುತಃ ಬಯಸಿದ್ದೆಲ್ಲ ದೊರೆಯದೆ ಇರುವುದರಿಂದ ದುಃಖಕ್ಕೇ ಕಾರಣವಾಗುತ್ತದೆ.

    | ಚಂದ್ರಜ್ಞಾನಾಗಮ (9.91) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts