ವಡ್ಡಂಬಾಳು ಗ್ರಾಮದಲ್ಲಿ ಶ್ರೀ ಅಂಗಳದ ಮಾರಮ್ಮದೇವಿ ಉತ್ಸವ

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ವಡ್ಡಂಬಾಳು ಗ್ರಾಮದಲ್ಲಿ ಬುಧವಾರ ಗೋಂಧಳಿ ಸಮಾಜದವರು ಶ್ರೀ ಅಂಗಳದ ಮಾರಮ್ಮದೇವಿಯ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉತ್ಸವದ ಅಂಗವಾಗಿ ಹಿಂದಿನ ದಿನ (ಮಂಗಳವಾರ) ಸಂಜೆ ದೇವಾಲಯ ಆವರಣದಲ್ಲಿ ಗಣಪತಿ ಹೋಮ, ಕಳಸ ಪೂಜೆ, ಪ್ರಾಣಪ್ರತಿಷ್ಠೆ, ಜೀವಾದಿ ತತ್ವಹೋಮ, ಅಷ್ಟಬಂಧನ ಇನ್ನಿತರ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಬುಧವಾರ ಬೆಳಗ್ಗೆ ಗ್ರಾಮದ ಕೆರೆಯಲ್ಲಿ ಉತ್ಸವ ಮೂರ್ತಿಗೆ ಪೂಜಾ ವಿಧಿವಿಧಾನ ನೆರವೇರಿಸಿ, ಕಳಸ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು.

ನಂತರ ಪ್ರಧಾನ ಹೋಮ, ಕಳಸ ಪೂಜೆ, ಪ್ರಾಣಪ್ರತಿಷ್ಠೆ, ಮಹಾಪೂರ್ಣಾಹುತಿ, ಪಂಚಾಮೃತ ಅಭಿಷೇಕ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು. ಗೋಂಧಳಿ ಸಮುದಾಯದ ಹಿರಿಯರು, ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *