ಸಿರವಾರ: ತಾಲೂಕಿನಲ್ಲಿ ಹಾದು ಹೋಗಿರುವ ಎನ್‌ಎಚ್ ರಸ್ತೆ ಕಾಮಗಾರಿಗೆ ಅಗತ್ಯವಿರುವ ಮರಂಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ನಿರ್ದೇಶಕ, ಮುಖ್ಯ ಇಂಜಿನಿಯರ್ ವೇಣುಗೋಪಾಲ ಅವರು ಶನಿವಾರ ಸರ್ಕಾರಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಸ್ಪರ್ಶ
ಎನ್.ಎಚ್.748-ಎ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸುವ ಸಲುವಾಗಿ ಅಮೃತ ಸರೋವರ ಮಿಷನ್ ಅಡಿ ಸರ್ಕಾರಿ ಜಮೀನಿನಲ್ಲಿರುವ ಮರಂ ತೆಗೆದು ಕೆರೆ ನಿರ್ಮಾಣ ಮಾಡಿ, ಮರಂ ಅನ್ನು ರಸ್ತೆ ಕೆಲಸಕ್ಕೆ ಬಳಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ.
ಅದಕ್ಕಾಗಿ ತಾಲೂಕಿನ ಮಲ್ಲಟ ಹಾಗೂ ಪಟಕನದೊಡ್ಡಿ, ಚಿಕ್ಕಹಣಿಗಿ ಗ್ರಾಮಗಳಲ್ಲಿ ಜಮೀನುಗಳಿಗೆ ತೆರಳಿ ಪರಿಶೀಲಿಸಿದರು. ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರ, ಎನ್.ಎಚ್.ಅಧಿಕಾರಿ ಭೀಮರಾವ್, ಜಿಪಂ ಎಡಿಪಿಸಿ ಮಲ್ಲಮ್ಮ, ತಾಂತ್ರಿಕ ಸಂಯೋಜಕ ಶಿವು, ತಾಂತ್ರಿಕ ಸಹಾಯಕ ನರಸಪ್ಪ ಇತರರಿದ್ದರು.