PHOTOS| ನಟ ಶ್ರೀಮುರಳಿಯಿಂದ 15 ವರ್ಷದ ಬಳಿಕ ಆತ್ಮೀಯ ಸ್ನೇಹಿತೆಯ ಭೇಟಿ: ಎಂದೆಂದಿಗೂ ನಮ್ಮ ಸ್ನೇಹ ಹೀಗೆ ಇರುತ್ತದೆ ಎಂದ ಮಾನ್ಯ!

ಬೆಂಗಳೂರು: ಸಿನಿಮಾ ಕೆಲಸಗಳ ನಡುವೆ ಆತ್ಮೀಯರನ್ನು ಮಿಸ್​ ಮಾಡಿಕೊಳ್ಳುವ ನಟ-ನಟಿಯರಿಗೆ ತಮ್ಮ ಪ್ರೀತಿಪಾತ್ರದವರನ್ನು ಮತ್ತೆ ಭೇಟಿ ಮಾಡುವ ಅವಕಾಶ ಬಂದಾಗ ಎಷ್ಟು ಖುಷಿಯಾಗುತ್ತಾರೆ ಎಂಬುದಕ್ಕೆ ನಟ ಶ್ರೀಮುರಳಿ ಉದಾಹರಣೆಯಾಗಿದ್ದಾರೆ.

ಹೌದು, ಅಂದಾಜು 15 ವರ್ಷಗಳ ಬಳಿಕ ನಟ ಶ್ರೀಮುರಳಿ ಅವರು ತಮ್ಮ ಆತ್ಮೀಯ ಗೆಳತಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಅವರು ಬೇರೆ ಯಾರು ಅಲ್ಲ ಇದೇ ಮುರಳಿ ಜತೆಯಲ್ಲಿ ಶಂಭು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ. ಅವರು ಯಾರೆಂದು ಈಗ ನೀವು ಊಹಿಸಿರಬಹುದಲ್ಲವೇ? ಹೌದು, ಅವರೇ ನಟಿ ಮಾನ್ಯ ನಾಯ್ಡು.

ಸಾಹಸಸಿಂಹ ವಿಷ್ಣುವರ್ಧನ್​ ಅಭಿನಯದ ವರ್ಷ ಚಿತ್ರ, ನಟ ದರ್ಶನ್​ ಜತೆಯಲ್ಲಿ ಶಾಸ್ತ್ರಿ ಹಾಗೂ ನಟ ಆದಿತ್ಯ ಜತೆ ಅಂಬಿ ಚಿತ್ರದಲ್ಲಿ ತೆರೆ ಹಂಚಿಕೊಂಡು ಕನ್ನಡಿಗರಿಗೆ ಹತ್ತಿರವಾಗಿದ್ದ ಮಾನ್ಯ ನಂತರ ಮದುವೆಮಾಡಿಕೊಂಡು ಚಿತ್ರರಂಗದಿಂದ ದೂರ ಉಳಿದಿದ್ದು, ಅಮೆರಿಕಾದಲ್ಲಿ ವಾಸವಿದ್ದಾರೆ. ಇದೀಗ ಶ್ರೀಮುರಳಿ ಜತೆ ಕಾಣಿಸಿಕೊಂಡು ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

15 ವರ್ಷಗಳ ಬಳಿಕ ನ್ಯೂಯಾರ್ಕ್​​ ನಗರದಲ್ಲಿ ಶ್ರೀಮುರಳಿ ಮಾನ್ಯರನ್ನು ಭೇಟಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಶ್ರೀಮುರಳಿ ಪತ್ನಿ ವಿದ್ಯಾ ಶ್ರೀಮುರಳಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರೆ, ನಟಿ ಮಾನ್ಯ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸುಂದರ ಫೋಟೊಗಳನ್ನು ಶೇರ್​ ಮಾಡಿಕೊಂಡಿದ್ದಾರೆ. 15 ವರ್ಷಗಳ ನಂತರ ಮತ್ತೆ ಮುರಳಿ ಭೇಟಿ ಮಾಡಿದ್ದು, ಇಂದಿಗೂ ನಮ್ಮ ಸ್ನೇಹ ಹಾಗೇ ಇದೆ. ಮುಂದೆಯೂ ಹೀಗೆ ಇರುತ್ತದೆ ಎಂದು ಮಾನ್ಯ ತಿಳಿಸಿದ್ದಾರೆ.

ಮಾನ್ಯ ಅವರನ್ನು ನೋಡಲು ಮುಂಬೈಗೆ ತೆರಳಿದ್ದ ಶ್ರೀಮುರಳಿ ಅವರು ಮಾನ್ಯ ಕುಟುಂಬದ ಜತೆಯಲ್ಲಿಯೇ ಕೆಲಕಾಲ ಕಳೆದಿದ್ದಾರೆ. ಮಾನ್ಯ ಮಗಳೊಂದಿಗೆ ಆಟವಾಡಿದ್ದಾರೆ. ಅಲ್ಲದೆ, ಮಾನ್ಯ ಅವರ ತಾಯಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಶ್ರೀಮುರಳಿಗಾಗಿ ಮಾನ್ಯ ಕುಟುಂಬ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದರು. (ದಿಗ್ವಿಜಯ ನ್ಯೂಸ್​)

15 years after we first met – friends like family ❤️

Manya Naidu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಆಗಸ್ಟ್ 18, 2019

Sunsets 🌝

Manya Naidu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಆಗಸ್ಟ್ 18, 2019

Missing Vidya SriMurali – our love ❤️❤️

Manya Naidu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಆಗಸ್ಟ್ 18, 2019

Love him! Friends forever ❤️🙏🏼

Manya Naidu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಆಗಸ್ಟ್ 18, 2019

Mommy loves him too!

Manya Naidu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಆಗಸ್ಟ್ 18, 2019

Leave a Reply

Your email address will not be published. Required fields are marked *