Wednesday, 12th December 2018  

Vijayavani

Breaking News

ಧರ್ಮ ವಿಭಜನೆಯ ಜಿಜ್ಞಾಸೆ

Tuesday, 20.03.2018, 3:06 AM       No Comments

ಧರ್ಮ ವಿಭಜನೆ ವಿಚಾರದಲ್ಲಿ ಕೆಲವು ತಿಂಗಳಿನಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರಚನೆಯಾಗಿದ್ದ ನ್ಯಾಯಮೂರ್ತಿ ನಾಗಮೋಹನ್​ದಾಸ್ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಸಚಿವ ಸಂಪುಟ ಸಭೆ ಯುಗಾದಿಯ ಮಾರನೇ ದಿನ ಯಥಾವತ್ತಾಗಿ ಒಪ್ಪಿಕೊಂಡಿರುವುದಕ್ಕೆ ನಾಡಿನ ಪ್ರಮುಖ ಸ್ವಾಮೀಜಿಗಳು ಏನಂತಾರೆ?

ಲಿಂಗಾಯತ ಮೂಲ ವೀರಶೈವ. ವೀರಶೈವ-ಲಿಂಗಾಯತ ಧರ್ಮ ಪ್ರತಿಪಾದನೆ ಒಳ್ಳೆಯ ಶಿಸ್ತು. ಮಗ ದೊಡ್ಡವನಾದ ತಕ್ಷಣ ತಂದೆಯ ಹೆಸರು ಮರೆಯುವಂತಿಲ್ಲ. ಹಾಗೆಯೇ, ವೀರಶೈವ-ಲಿಂಗಾಯತ ಧರ್ಮ.

| ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಕಾಡಸಿದ್ದೇಶ್ವರ ಮಠ, ನೊಣವಿನಕೆರೆ

 

 


ಬಸವಣ್ಣನನ್ನು ಗುರು ಅಂತ ಒಪ್ಪಿಕೊಂಡವರು ಲಿಂಗಾಯತ ಧರ್ಮ ಸೇರಬಹುದೆಂಬ ದ್ವಂದ್ವ ಸರ್ಕಾರದ ನಿಲುವಾಗಿದೆ. ಧರ್ಮದ ವಿಚಾರವನ್ನು ಧಾರ್ವಿುಕ ಮುಖಂಡರು ನಿರ್ಣಯಿಸಬೇಕಾಗಿತ್ತು. ಅದನ್ನು ಬಿಟ್ಟು ರಾಜಕೀಯ ಮುಖಂಡರು ನಿರ್ಣಯಿಸಿದ ಫಲ ನಿವೃತ್ತ ನ್ಯಾ.ನಾಗಮೋಹನದಾಸ್ ವರದಿ. ಇದೊಂದು ರಾಜಕೀಯಪ್ರೇರಿತ. ಕಾಂಗ್ರೆಸ್ ಇದನ್ನು ಅನುಭವಿಸಲಿದೆ.

| ಡಾ.ಯತೀಶ್ವರ ಸ್ವಾಮೀಜಿ ಕುಪ್ಪೂರು ಗದ್ದಿಗೆ ಮಠ

 


ರಾಜ್ಯ ಸರ್ಕಾರವು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದಕ್ಕೆ ನಮ್ಮ ಬೆಂಬಲಿವಿದೆ. ನಮ್ಮ ಮನಸಿನಲ್ಲಿದ್ದನ್ನು ಸರ್ಕಾರ ಕಾರ್ಯಗತಗೊಳಿಸಲು ಮುಂದಾಗಿದೆ.

| ಶ್ರೀ ಸಿದ್ದರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ ಸ್ಥಿರಪಟ್ಟಾಧ್ಯಕ್ಷರು, ಗೋಡೆಕೆರೆ ಮಠ

 

 


ಸಿದ್ಧಗಂಗಾಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಅಗತ್ಯವಿಲ್ಲವೆಂದು ತೀರ್ಮಾನ ನೀಡಿದ್ದಾರೆ. ಸುತ್ತೂರು ಶ್ರೀಗಳು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಆದರೂ ಪ್ರತ್ಯೇಕಧರ್ಮಕ್ಕಾಗಿ ಶಿಫಾರಸು ಮಾಡುವ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಫಲ ಅನುಭವಿಸಲೇಬೇಕಾದೀತು. ಶಿಫಾರಸ್ಸನ್ನು ಕೇಂದ್ರಸರ್ಕಾರ ತಿರಸ್ಕರಿಸಬೇಕು.

| ಶ್ರೀ ಮಹದೇವಸ್ವಾಮೀಜಿ ಅಧ್ಯಕ್ಷ, ಶ್ರೀ ಬಸವಕಲ್ಯಾಣಮಠ, ವಿಜಯಪುರ, ದೇವನಹಳ್ಳಿ

 


ಧರ್ಮ ವಿಭಜಿಸುವ ಕೆಲಸ ಸಮಾಜದಲ್ಲಿ ನಡೆಯುತ್ತಿದೆ. ತತ್ವ ಸಿದ್ಧಾಂತ ಆಚರಣೆಯೇ ವೀರಶೈವ- ಲಿಂಗಾಯತ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಶಿಫಾರಸು ಮಾಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ.

| ಶ್ರೀ ಚಂದ್ರಶೇಖರ ಸ್ವಾಮೀಜಿ ಗವಿಮಠ, ಬೆಟ್ಟದಹಳ್ಳಿ, ಗುಬ್ಬಿ ತಾಲೂಕು

 


ಲಿಂಗಾಯತ/ ವೀರಶೈವ ಈ ಧರ್ಮದ ಪ್ರಸ್ತಾವನೆ ರಾಜಕೀಯ ಪ್ರೇರಿತವಾಗಿ ನಿರ್ವಿುತವಾದ ಸಮಿತಿಯಿಂದ ಮಾಡಲ್ಪಟ್ಟಿದೆ. ತಮಗೆ ಬೇಕಾದ ರೀತಿ ವರದಿ ತಯಾರಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಕೇವಲ ಮತಕ್ಕಾಗಿ ಧರ್ಮ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸಮ್ಮತಿ ಇಲ್ಲ.

| ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಬಾಳೆಹೊನ್ನೂರು ಖಾಸಾ ಶಾಖಾ ಮಠ, ಯಡಿಯೂರು

 


ಲಿಂಗಾಯತ- ವೀರಶೈವ ಧರ್ಮ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಗೊಂದಲ ಮಯವಾಗಿದೆ. ಇದರಿಂದ ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ವಾಪಸ್ ಕಳುಹಿಸುವ ಸಾಧ್ಯತೆಗಳು ಹೆಚ್ಚು. ಪುನರ್ ಪರಿಶೀಲಿಸಲು ಈ ಸರ್ಕಾರ ಇರುವುದಿಲ್ಲ.

| ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಟ್ಟಹಳ್ಳಿ ಮಠ, ಕುಣಿಗಲ್

 


ಮೊದಲಿನಿಂದಲೋ ಲಿಂಗಾಯತ ಧರ್ಮಕ್ಕೆ ಆಗ್ರಹವಿದೆ. ಪೂಜಾ ವಿಧಾನಗಳನ್ನು ಹೊರತು ಪಡಿಸಿದರೆ ಬೇರೆಲ್ಲಾ ವಿಚಾರಧಾರೆಗಳಲ್ಲಿ ಎರಡೂ ವಿಭಿನ್ನ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಲೇಬೇಕು. ಸಿದ್ದರಾಮಯ್ಯ ನಿರ್ಧಾರ ಸ್ವಾಗತಾರ್ಹ.

| ಶ್ರೀ ಬಸವ ಮಹಾಲಿಂಗ ಸ್ವಾಮೀಜಿ ತಿಮ್ಮಪ್ಪಸ್ವಾಮಿ ಮಠ, ತಂಗನಹಳ್ಳಿ, ಕೊರಟಗೆರೆ

 


ವೀರಶೈವ ಲಿಂಗಾಯತ ಎರಡು ಒಂದೇ ಧರ್ಮ. ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಿದ್ದಗಂಗಾ ಶ್ರೀಗಳು, ಸುತ್ತೂರು ದೇಶಿಕೇಂದ್ರ ಶ್ರೀಗಳು, ಚಿತ್ರದುರ್ಗದ ಮುರುಘಾ ಶ್ರೀಗಳು ಮತ್ತು ನಮ್ಮ ಸಮಾಜದ ಹಿರಿಯ ಮಠಾಧೀಶರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ.

| ಶ್ರೀ.ಡಾ.ಮುಮ್ಮಡಿ ಶಿವರುದ್ರಮಹಾಸ್ವಾಮಿ ಮರಳೆಗವಿ ಮಠ, ಕನಕಪುರ

 


ವೀರಶೈವ, ಲಿಂಗಾಯತ ಪ್ರತ್ಯೇಕ ಎನ್ನುವ ವಿಚಾರವೇ ಅಪ್ರಸ್ತುತ. ಇಬ್ಬರೂ ಒಂದೇ. ಇದು ರಾಜಕೀಯ ಪ್ರೇರಿತ ಹುನ್ನಾರವೇ ಹೊರತು ಬೇರೇನೂ ಅಲ್ಲ.

| ಶಿವರುದ್ರ ಸ್ವಾಮೀಜಿ ವಿರಕ್ತಮಠ, ಚನ್ನಪಟ್ಟಣ

 

 


ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನ ಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಡಿರುವುದು ಸ್ವಾಗತಾರ್ಹ.

| ಶ್ರೀ ಬಸವರಾಜ ಸ್ವಾಮಿ ಪೀಠಾಧ್ಯಕ್ಷ, ಖಾನಿಮಠ, ದೊಡ್ಡಬಳ್ಳಾಪುರ

 

 


ಸಿದ್ಧಗಂಗಾ ಶ್ರೀಗಳು ಹೇಳಿದಂತೆ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆ. ಧರ್ಮ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ವಿಪರ್ಯಾಸ.

| ಶ್ರೀ ಬಸವಲಿಂಗಸ್ವಾಮಿಗಳು ಅಧ್ಯಕ್ಷರು, ಜಂಗಮಮಠ, ಚಿಕ್ಕಮಸ್ಕಲ್

 


ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತರ ಧರ್ಮ ಸ್ಥಾಪನೆ ವಿಚಾರವಾಗಿ ತಮ್ಮ ಕೃಪಾಪೋಷಿತ ತಜ್ಞರ ಸಮಿತಿ ನೀಡಿದ ವರದಿ ಆಧರಿಸಿ ತೆಗೆದುಕೊಂಡಿರುವ ತೀರ್ಮಾನ ನೋವುಂಟು ಮಾಡಿದೆ. ಬಸವಣ್ಣನವರು ಸಮ ಸಮಾಜ ನಿರ್ಮಾಣ ಪ್ರಚಾರಕ್ಕಾಗಿದ್ದರೇ ಹೊರತು ಧರ್ಮ ಸ್ಥಾಪಕರಾಗಿರಲಿಲ್ಲ. ವೀರಶೈವ ಮಹಾಸಭಾ ಕಾನೂನು ಹೋರಾಟ ಮೂಲಕ ತಕ್ಕಪಾಠ ಕಲಿಸಲಿದೆ.

| ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಹಾಸಂಸ್ಥಾನ ಮಠ, ಬೆಳ್ಳಾವಿ, ಮಾಲೂರು ತಾ.


ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮ ವಿಷಯಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ತಟಸ್ಥನಾಗಿದ್ದೇನೆ. ನಾನು ಯಾರ ಪರ, ವಿರುದ್ಧವಾಗಿಯೂ ಇಲ್ಲ. ಆದ್ದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

| ಶ್ರೀಚನ್ನಮಲ್ಲ ವೀರಭದ್ರ ಸ್ವಾಮೀಜಿ ನಿಡುಮಾಮಿಡಿ ಮಠ

 

 


ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸು ನಿರ್ಧಾರ ಖಂಡನೀಯ. ವೀರಶೈವ ಮನುಕುಲಕ್ಕೆ ಅವಮಾನ ಮಾಡಿದ್ದು, ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ.

| ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ದೊಡ್ಡಗುಣಿ ಶಾಖಾ ಮಠ, ದೊಡ್ಡಗುಣಿ

 

 


ರಾಜಕೀಯಕ್ಕಾಗಿ ಧರ್ಮ ಒಡೆಯುವುದನ್ನು ಶಿವ ಮೆಚ್ಚಲಾರ. ತಜ್ಞರ ಸಮಿತಿಯಲ್ಲಿ ಬಸವಣ್ಣನವರ ನಿಜವಾದ ಅನುಯಾಯಿಗಳು ಯಾರೂ ಇಲ್ಲದ ಕಾರಣ ರಾಜಕೀಯ ಪ್ರೇರಿತ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೂಡಲೇ ಶಿಫಾರಸ್ಸು ವಾಪಸ್ ಪಡೆದು ಘರ್ಷಣೆ ತಪ್ಪಿಸಲು ವಿವೇಚನೆ ತೋರಬೇಕು.

| ಶ್ರೀ ತೇಜೇಶಲಿಂಗಶಿವಾಚಾರ್ಯ ಸ್ವಾಮೀಜಿ ನಾಗಲಾಪುರ ಸಂಸ್ಥಾನ ಮಠ, ಕೋಲಾರ

 


ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಸಂಪುಟದ ತೀರ್ವ ನಕ್ಕೆ ಯಾವುದೇ ಮಹತ್ವ ಕೊಡುವ ಅಗತ್ಯವಿಲ್ಲ. ಎಂದಿಗೂ ಧರ್ಮವನ್ನು ಪ್ರತ್ಯೇಕ ಮಾಡುವುದು ಸಾಧ್ಯವಿಲ್ಲ. ರಾಜಕೀಯ ವ್ಯಕ್ತಿಗಳು ಬೇಕಾದಂತೆ ನಿರ್ಧಾರ ಕೈಗೊಂಡರೆ ಅದಕ್ಕೆ ಬೆಲೆ ಇಲ್ಲ, ಧರ್ಮ ಒಡೆಯಲು ಪ್ರಯತ್ನಿಸಿದರೆ ಅವರಿಗೇ ನಷ್ಟ.

| ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಲ್ಲಿಕಾರ್ಜುನ ಮಠ, ಚನ್ನಪಟ್ಟಣ


ಜನರ ಹಿತ ಕಾಯಬೇಕಾದ ಸರ್ಕಾರ ರಾಜಕೀಯ ಹಿತದೃಷ್ಟಿಗಾಗಿ ಸಮಾಜವನ್ನು ಗೊಂದಲಕ್ಕೀಡುಮಾಡುತ್ತಿದೆ. ನಿಯಮಾನುಸಾರ ವಿರೋಧವಿಲ್ಲದ, ಕಾನೂನು ತೊಡಕಿಲ್ಲದ ನೈಜ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆನ್ನುವ ಕನಿಷ್ಠ ಜ್ಞಾನ ಸಿಎಂ ಮತ್ತು ಸಚಿವರಿಗಿಲ್ಲ.

| ಶ್ರೀ ಮಲಯಶಾಂತಮುನಿಶಿವಾಚಾರ್ಯ ದೇಶಿಕೇಂದ್ರ ಸ್ವಾಮೀಜಿ ಮೇಲಣಗವಿಮಠ ಶಿವಗಂಗೆ, ನೆಲಮಂಗಲ

 


ವೀರಶೈವ ಲಿಂಗಾಯತರೆಂಬ ಬಹುದೊಡ್ಡ ಪರಂಪರೆ ಹಾಗೂ ಆಚಾರ್ಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಮಾನಿಸಿದ್ದಾರೆ. ಮಾನವತೆ ನೆಲೆಗಟ್ಟಿನಲ್ಲಿ ಸಮಾಜದ ಎರಡು ಕಣ್ಣುಗಳಂತೆ ಧರ್ವಚರಣೆ ಮಾಡಿಕೊಂಡು ಬಂದಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಬಹುದೊಡ್ಡ ಪೆಟ್ಟುಬಿದ್ದಂತಾಗಿದೆ. ಇದನ್ನು ಅಖಂಡ ವೀರಶೈವಲಿಂಗಾಯತರು ಖಂಡಿಸಬೇಕು.

| ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮೀಜಿ ಹೊನ್ನಮ್ಮಗವಿಮಠ ಶಿವಗಂಗೆ, ನೆಲಮಂಗಲ

 


ಸಮಾಜದಲ್ಲಿ ಎಷ್ಟೆಲ್ಲ ಸಮಸ್ಯೆಗಳು ಹಾಸಿಹೊದ್ದು ಮಲಗಿರುವಾಗ ಲಿಂಗಾಯತ-ವೀರಶೈವ ಎಂಬ ಗೊಂದಲ ನಿರ್ವಿುಸುವ ಅವಶ್ಯಕತೆ ಈ ಸರ್ಕಾರಕ್ಕೆ ಇತ್ತೆ? ಇದಕ್ಕೆ ಕೆಲವು ಮಠಾಧೀಶರು ಕೈಜೋಡಿಸಿರುವುದು ಬೇಸರ. ಏಕತೆ ಕೆಡೆಸಿಯೇ ಈ ನಾಡನ್ನು ಅಭಿವೃದ್ಧಿ ಆಗದಂತೆ ಮಾಡಿದ್ದು ಎಂಬುದನ್ನು ಇತಿಹಾಸ ಸಾಕಷ್ಟು ಬಾರಿ ಸಾಕ್ಷಿ ಸಮೇತ ತಿಳಿಸಿದ್ದರೂ ಇನ್ನೂ ಬುದ್ಧಿ ಬಂದಿಲ್ಲ ಎಂದರೆ ನಿಜಕ್ಕೂ ನಾಜಿಕೆಗೇಡು.

| ಶ್ರೀ ಬಸವಲಿಂಗಸ್ವಾಮೀಜಿ ಅಧ್ಯಕ್ಷರು, ಕಂಚುಗಲ್ ಬಂಡೇಮಠ

Leave a Reply

Your email address will not be published. Required fields are marked *

Back To Top