Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಮೂರು ಲಕ್ಷ ಹುದ್ದೆ ಖಾಲಿ !

Thursday, 15.02.2018, 3:06 AM       No Comments

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಉದ್ಯೋಗಸೃಷ್ಟಿ, ನಿರುದ್ಯೋಗ ಸಮಸ್ಯೆ ನಿವಾರಣೆ ವಿಚಾರದಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ನಡುವೆ ಮಾತಿನ ಹೊಯ್ಕೈ ನಡೆಯುತ್ತಿರುವ ನಡುವೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 3 ಲಕ್ಷ ಹುದ್ದೆಗಳು ನೇಮಕಾತಿ ಭಾಗ್ಯವನ್ನೇ ಕಾಣದೆ ಖಾಲಿ ಬಿದ್ದಿರುವ ಸಂಗತಿ ಬೆಳಕಿಗೆ ಬಂದಿದೆ.

ಆಡಳಿತ ಸುಧಾರಣೆ ನೆಪದಲ್ಲಿ ಸಿಬ್ಬಂದಿ ನೇಮಕದ ಕಡೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವರ್ಷಾಂತ್ಯಕ್ಕೆ ಖಾಲಿ ಉಳಿದಿರುವ ಹುದ್ದೆಗಳ ಸಂಖ್ಯೆ 3 ಲಕ್ಷ ದಾಟಲಿದೆ. ನೌಕರರ ಸಂಖ್ಯೆಯನ್ನು ಮಂಜೂರಾದ ಹುದ್ದೆಗಳಿಗೆ ಸಮಾನವಾಗಿ ತುಂಬದ ಕಾರಣ, ಕೆಲಸದ ಒತ್ತಡ ಹೆಚ್ಚಾಗಿ ಆಡಳಿತಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ.

ನೇಮಕಾತಿ: ಸಿದ್ದು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೆಲ ಇಲಾಖೆಗಳಲ್ಲಿ ನೇಮಕಾತಿ ನಡೆದಿದೆ ಯಾದರೂ ಸಾಕಷ್ಟು ಪ್ರಮಾಣದಲ್ಲಾಗಿಲ್ಲ. ಹೈ-ಕಕ್ಕೆ ವಿಶೇಷ ಸ್ಥಾನಮಾನ ಬಂದು ಆ ಭಾಗಕ್ಕೆ ಸುಮಾರು 40 ಸಾವಿರ ಹುದ್ದೆಗಳು ಲಭ್ಯವಾಗಬೇಕಾಗಿದೆ. ಆದರೆ ನೇಮಕಾತಿ ನಿಧಾನವಾಗಿರುವುದರಿಂದ ಆ ಭಾಗಕ್ಕೆ ಅನ್ಯಾಯವಾದಂತಾಗಿದೆ.

ಎಷ್ಟು ಹುದ್ದೆ ಖಾಲಿ?

ರಾಜ್ಯ ಸರ್ಕಾರದಲ್ಲಿ ಮಂಜೂರಾದ ಹುದ್ದೆ 7.20 ಲಕ್ಷ ಇದೆ. ಸರ್ಕಾರ ಹೇಳುವ ಪ್ರಕಾರ ಖಾಲಿ ಹುದ್ದೆಗಳ ಪ್ರಮಾಣ ಸದ್ಯ 2.85 ಲಕ್ಷ ಇದೆ. ಈ ವರ್ಷ ನಿವೃತ್ತರಾಗುವ ನೌಕರರು ಸೇರಿದ ಬಳಿಕ ಈ ಸಂಖ್ಯೆ 3 ಲಕ್ಷ ದಾಟಲಿದೆ. ರಾಜ್ಯದ ಜನಸಂಖ್ಯೆ 4 ಕೋಟಿಯೂ ಇಲ್ಲದ ಸಂದರ್ಭದಲ್ಲಿ 7.20 ಲಕ್ಷ ಮಂಜೂರಾದ ಹುದ್ದೆಗಳಿದ್ದವು. ಆದರೆ ಈಗ ಜನಸಂಖ್ಯೆ 6 ಕೋಟಿ ದಾಟಿರುವುದರಿಂದ ಸೇವೆಯಲ್ಲಿರುವ ನೌಕರರ ಸಂಖ್ಯೆ 4.20 ಲಕ್ಷಕ್ಕೆ ತಲುಪುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳೇ ತಿಳಿಸುತ್ತವೆ.

ಖಾಲಿ ಹುದ್ದೆಗಳನ್ನು ನೇಮಕ ಮಾಡ ಬೇಕಾಗಿದೆ. ಈಗ ಬಜೆಟ್​ನಲ್ಲಿ ಬಿಜಿಯಾಗಿದ್ದೇವೆ. ಬಜೆಟ್ ಮಂಡನೆ ಮುಗಿದ ನಂತರ ಈ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ.

| ಕೆ.ರತ್ನಪ್ರಭಾ ಸರ್ಕಾರದ ಮುಖ್ಯ ಕಾರ್ಯದರ್ಶಿ

ಅಧಿಕಾರಿಗಳಿಗೆ ಹೊರ ಗುತ್ತಿಗೆಯೇ ಬೇಕು

ಅಧಿಕಾರಿಗಳಿಗೆ ಖಾಲಿ ಹುದ್ದೆಯ ನೇಮಕಕ್ಕಿಂತ ತಮಗೆ ಲಾಭ ತರುವ ಹೊರಗುತ್ತಿಗೆಗೆ ಆದ್ಯತೆ ನೀಡುವುದೇ ಬೇಕಾಗಿದೆ. ಈಗ ಮುಖ್ಯ ಕಾರ್ಯದರ್ಶಿ ಹೊರಗುತ್ತಿಗೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಆದರೆ ಇದು ಹಿರಿಯ ಅಧಿಕಾರಿಗಳ ಕಣ್ಣು ಕೆಂಪಾಗಿಸಿರುವುದರಿಂದ ಎಷ್ಟರ ಮಟ್ಟಿಗೆ ಅವರ ಉದ್ದೇಶ ಈಡೇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ನಿವೃತ್ತಿ ಎಷ್ಟು?

2017ರಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ, ಒಟ್ಟು 25 ಸಾವಿರ ನೌಕರರು ನಿವೃತ್ತರಾಗಿದ್ದರು. 2018ರ ಕೊನೆಯ ವೇಳೆೆಗೆ ನಿವೃತ್ತ ನೌಕರರ ಸಂಖ್ಯೆ 15 ಸಾವಿರಕ್ಕೆ ತಲುಪಲಿದೆ. ಇದರ ಜತೆಗೆ ಮೃತರಾಗುವ ಹಾಗೂ ಸ್ವಯಂ ನಿವೃತ್ತಿ ಪಡೆಯುವ ನೌಕರರು ಬೇರೆ ಇರುತ್ತಾರೆ.

ಪರಿಣಾಮವೇನು?

ಸಾಕಷ್ಟು ಸಂಖ್ಯೆಯಲ್ಲಿ ನೌಕರರಿದ್ದರಷ್ಟೇ ಜನತೆಗೆ ಸರ್ಕಾರದಿಂದ ಉತ್ತಮ ಸೇವೆ ದೊರಕಿಸಿಕೊಡಲು ಸಾಧ್ಯ. ಆದರೆ ನೌಕರರು ಒತ್ತಡದಲ್ಲಿ ಕೆಲಸ ಮಾಡಬೇಕಾಗಿರುವ ಪರಿಣಾಮ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಇದು ಆಡಳಿತ ನಿಧಾನಗತಿಗೆ ಕಾರಣವಾಗಿದೆ. ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆಗಳಲ್ಲಷ್ಟೇ ಆಗಾಗ ನೇಮಕಾತಿ ನಡೆಯುತ್ತಿರುತ್ತದೆ. ಉಳಿದ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಿಧಾನವಾಗಿದೆ.

ವೇತನ ಉಳಿತಾಯ

ನೌಕರರ ವೇತನದಲ್ಲಿ ಸರ್ಕಾರಕ್ಕೆ ಹಣ ಉಳಿತಾಯವಾಗುತ್ತಿದೆ. ಈಗ 22 ಸಾವಿರ ಕೋಟಿ ರೂ.ಗಳನ್ನು ವೇತನಕ್ಕಾಗಿ ಮೀಸಲಿಟ್ಟಿದೆ. ವೇತನ ಪರಿಷ್ಕರಣೆಯ ನಂತರ 10,580 ಕೋಟಿ ರೂ. ಹೆಚ್ಚಳವಾಗುತ್ತದೆ. ಆದರೆ ಈಗ ಅದರಲ್ಲಿ ಸುಮಾರು 3000 ಕೋಟಿ ರೂ.ಗಳಷ್ಟು ಉಳಿತಾಯವಾಗುತ್ತಿದೆ.

ಸಚಿವಾಲಯದಲ್ಲೇ ಖಾಲಿ

ಸರ್ಕಾರದ ಆಡಳಿತ ಯಂತ್ರ ಇರುವ ಸಚಿವಾಲಯದಲ್ಲಿಯೇ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಟೈಪಿಸ್ಟ್ 310 ಮಂಜೂರಾದ ಹುದ್ದೆಗಳಿದ್ದರೆ, 33 ಜನರಷ್ಟೇ ಕೆಲಸ ಮಾಡುತ್ತಿದ್ದಾರೆ. 251 ಡಿ ಗ್ರೂಪ್ ಹುದ್ದೆಗಳು ಖಾಲಿ ಇವೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಈ ಬಗ್ಗೆ ಹೋರಾಟ ಮಾಡಬೇಕಾಗಿದೆ.

| ಪಿ.ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

 

ಖಾಲಿ ಹುದ್ದೆಗಳ ಪರಿಣಾಮ ಸರ್ಕಾರದ ಆಡಳಿತ ಎಂಬುದು ಇನ್ನು ಮುಂದೆ ಪ್ರೖೆವೇಟ್ ಲಿಮಿಟೆಡ್ ಕಂಪನಿ ಆಡಳಿತದಂತಾಗುತ್ತದೆ. ಅದಕ್ಕೂ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

| ಮಹದೇವಯ್ಯ ಮಠಪತಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟ

Leave a Reply

Your email address will not be published. Required fields are marked *

Back To Top