ಯಡಿವಾಳದಲ್ಲಿ ರೈತ ಆತ್ಮಹತ್ಯೆ

ಮಾನ್ವಿ: ಯಡಿವಾಳ ಗ್ರಾಮದ ರೈತ ಹುಸೇನಪ್ಪ (50) ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 6 ಎಕರೆ ಜಮೀನು ಹೊಂದಿದ್ದ ರೈತ ಹುಸೇನಪ್ಪ 2014ರಲ್ಲಿ ಪಟ್ಟಣದ ವಿಜಯ ಬ್ಯಾಂಕ್‌ನಲ್ಲಿ 4.24 ಲಕ್ಷ ರೂ. ಸಾಲ ಪಡೆದಿದ್ದರು. ಬರದಿಂದ ಬೆಳೆ ಬಾರದಿದ್ದರಿಂದ ಸಾಲ ತೀರಿಸಲಾಗದೆ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತ್ನಿ ಅಯ್ಯಮ್ಮ ನೀಡಿದ ದೂರಿನ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *