ಮಾನ್ವಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆಗೆ ಪೋತ್ನಾಳ, ನಂದಿಹಾಳ, ಗವಿಗಟ್ಟು ಸೇರಿ ಇತರೆ ಹಳ್ಳಗಳು ತುಂಬಿ ಹರಿದವು.
ಪಟ್ಟಣದ ಹೊರವಲಯದ ಬಾಷಮೀಯಾ ಡಿಗ್ರಿ ಕಾಲೇಜು ಹತ್ತಿರ ರಾಯಚೂರು-ಸಿಂಧನೂರು ಹೆದ್ದಾರಿ ಬದಿಯಲ್ಲಿ ವಾಹನ ಸಂಚರಿಸಲು ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆಯು ಮಳೆಗೆ ಕೊಚ್ಚಿ ಹೋದ ಪರಿಣಾಮ ಸಾರಿಗೆ ಬಸ್ ಸಿಲುಕಿ ಎರಡ್ಮೂರು ತಾಸು ಸಂಚಾರಕ್ಕೆ ಅಡಚಣೆಯಾಯಿತು.
ನಂತರ ಜೆಸಿಬಿಯಿಂದ ಬಸ್ ತೆರವು ಮಾಡಿದಾಗ ವಾಹನಗಳ ಸಂಚಾರ ಪ್ರಾರಂಭವಾಯಿತು.
ರಾತ್ರಿಯಿಂದ ಸುರಿದ ಮಳೆಗೆ ಹೊಲ-ಗದ್ದೆಗಳಲ್ಲಿ ನೀರು ನಿಂತಿವೆ. ಬಿತ್ತನೆ ಮಾಡಿದ ಹತ್ತಿಗೆ ಮಳೆಯ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಮಳೆಯಿಂದ ತಾಲೂಕಿನಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.