ಬಿಸಿಯೂಟದ ಸಾಮಗ್ರಿ ಕಳ್ಳರ ಬಂಧನ

ಮಾನ್ವಿ: ನೀರಮಾನ್ವಿ ಗ್ರಾಮದ ರೇಣುಕಾ ಬಡವಾಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.3ರಂದು ಬಿಸಿಯೂಟದ ಸಾಮಗ್ರಿ ಕದ್ದು ತಲೆಮರೆಸಿಕೊಂಡಿದ್ದ ಮೂವರನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ರೇಣುಕಾ ಬಡಾವಣೆಯ ಶಿವಧೂತ ಈರಪ್ಪ ಮಲ್ಲಟ, ಮಂಜುನಾಥ ರಾಮಣ್ಣ, ದೇವು ರಾಮಣ್ಣ ಆಲ್ದರ್ತಿ ಬಂಧಿತರು. ಅವರಿಂದ 8 ಕ್ವಿಂಟಾಲ್ ಅಕ್ಕಿ, 1 ಕ್ವಿಂ.ಗೋದಿ, 43 ಕೆಜಿ ತೊಗರಿ ಬೇಳೆೆ, 1 ಗ್ಯಾಸ್ ಸಿಲಿಂಡರ್, 2 ಖಾಲಿ ಸಿಲೆಂಡರ್ ಸೇರಿ ಇತರೆ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಸಿಪಿಐ ವಿನೋದ್ ಎಂ.ಎಂ., ಪಿಎಸ್‌ಐ ಚೈತನ್ಯ ಕುಮಾರ, ಸಿಬ್ಬಂದಿಗಳಾದ ಮಲ್ಲನಗೌಡ, ರಾಮಣ್ಣ, ಹುಸೇನ್ ಪಾಷಾ, ರಹೀಮ್ ಪಾಷಾ, ಸಿದ್ದರಾಮಸ್ವಾಮಿ, ಗೋಪಾಲ್, ಸೂಗಪ್ಪ ಕಾರ್ಯಾಚರಣೆ ನಡೆಸಿದ್ದಾರೆ.