ತಹಸೀಲ್ದಾರ್ಗೆ ಜನಶಕ್ತಿ ಕೇಂದ್ರ ನೇತೃತ್ವದ ಸಂಘಟಕರ ಮನವಿ
ಮಾನ್ವಿ: ಪಟ್ಟಣದ ಜನತೆಗೆ ಶಾಶ್ವತ ಶುದ್ಧ ಕುಡಿವ ನೀರಿನ ಕೆರೆ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜನಶಕ್ತಿ ಕೇಂದ್ರ ನೇತೃತ್ವದ ಸಂಘಟಕರು ಪುರಸಭೆ ಕಚೇರಿ ಮುಂದೆ ಗುರುವಾರ ಸೆಗಣಿ ನೀರು ಮೈಮೇಲೆ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
ಜನಶಕ್ತಿ ಕೇಂದ್ರ ಪ್ರಧಾನ ಸಂಚಾಲಕ ಪ್ರಭುರಾಜ್ ಕೊಡ್ಲಿ ಮಾತನಾಡಿ, ರಬ್ಬಣಕಲ್ ಬಳಿ ಕುಡಿವ ನೀರಿನ ಕೆರೆ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ಮೇಲ್ತೊಟ್ಟಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು, ಪಹಣಿಯಲ್ಲಿ ವಕ್ಫ್ ಭೂಮಿಗಳನ್ನು ಸರ್ಕಾರದ ವಕ್ಫ್ ಭೂಮಿಯೆಂದು ಸೇರಿಸಬೇಕು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಸಿದರು.
ನಂತರ ತಹಸೀಲ್ದಾರ್ ಅಮರೇಶ ಬಿರಾದಾರ್ಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಪದಾಧಿಕಾರಿಗಳಾದ ಎಸ್.ಎಂ.ಶಹನವಾಜ್, ನುರಸತ್, ಮೈನುದ್ದೀನ್, ಹನುಮಂತ ಕೋಟೆ, ಸಾಬೀರ್ಪಾಷಾ, ಈರಣ್ಣ ಗವಿಗಟ್, ದೇವರಾಜ, ಮೇಜರ್ ಶನವಾಜ್ಖಾನ್ ಸೇರಿ ಜಾಂಬವ ಯುವಸೇನೆ ಸಂಘಟನೆಗಳ ಮುಖಂಡರು ಇದ್ದರು.