ಕೊಲೆ ಆರೋಪಿಗಳ ಬಂಧನ

ಮಾನ್ವಿ: ತಾಲೂಕಿನ ಕಪಗಲ್ ಬಳಿ ಸೆ.27ರಂದು ನಡೆದ ಲಿಂಗಸುಗೂರಿನ ಅಯೂಬ್ ಅಲಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಎಸ್.ಬಿ.ಪಾಟೀಲ್ ತಿಳಿಸಿದರು.

ರಿಜ್ವಾನ್, ಅಹ್ಮದ್, ಅಮೀನ್ ಆರೋಪಿಗಳು. ಎರಡು ವರ್ಷಗಳ ಹಿಂದೆ ಅಯೂಬ್ ಅಲಿ, ಆರೋಪಿಗಳ ಮಧ್ಯೆ ಜಗಳವಾಗಿತ್ತು. ಈ ಕುರಿತು ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಮೊದಲು ಅಯೂಬ್ ಅಲಿ ರಾಜಿಗೆ ಯತ್ನಿಸಿದರೂ ರಿಜ್ವಾನ್, ಅಹ್ಮದ್, ಅಮೀನ್ ಸಮ್ಮತಿಸಿರಲಿಲ್ಲ. ಸೆ.27ರಂದು ಅಯೂಬ್ ಅಲಿಯನ್ನು ಮಾನ್ವಿಗೆ ಕರೆ ತಂದ ಆರೋಪಿಗಳು ಬಾರ್‌ನಲ್ಲಿ ಪಾರ್ಟಿ ಮಾಡಿ ಜಗಳವಾಡಿದ್ದಾರೆ. ನಂತರ 8.30ಕ್ಕೆ ಕಪಗಲ್ ಸಮೀಪ ಕರೆದುಕೊಂಡು ಹೋಗಿ ಅಯೂಬ್ ಅಲಿಯನ್ನು ಕೊಲೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ವಿವರಿಸಿದರು.

ಅರೋಪಿಗಳ ಬಂಧನಕ್ಕೆ ಡಿವೈಎಸ್ಪಿ ಎಸ್.ಎಸ್.ಸುಬೇದಾರ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ ನಾಯಕ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದರು. ಡಿವೈಎಸ್‌ಪಿ ಎಸ್.ಎಸ್.ಸುಬೇದಾರ, ಸಿಪಿಐ ಚಂದ್ರಶೇಖರ ನಾಯಕ, ಪಿಎಸ್‌ಐ ವೀರರಡ್ಡಿ, ಸಿಬ್ಬಂದಿ ಗೋವಿಂದರಾಜ್, ರಮೇಶ, ಹುಸೇನ್ ಸಾಬ್, ಚಾಂದಪಾಷಾ, ಅಫ್ಜಲ್ ಪಾಷಾ ಇತರರಿದ್ದರು.