ಜೈಲಿನಲ್ಲಿ ಹೃದಯಾಘಾತದಿಂದ ಹೋಮ್‌ಗಾಡ್ಸ್ ಸಾವು

ಮಾನ್ವಿ: ಪಟ್ಟಣದ ಬಂದಿಖಾನೆಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಹುಸೇನ್‌ಬಾಷಾ (46) ಹೃದಯಾಘಾತದಿಂದ ಗುರುವಾರ ನಿಧನರಾದರು. ಬಂಧಿಖಾನೆಯಲ್ಲಿ ಹುಸೇನ್‌ಬಾಷಾ ನಿದ್ರೆ ಮಾಡುವಾಗ ಹೃದಯಾಘಾತ ಸಂಭವಿಸಿದೆ. ಬೆಳಗ್ಗೆ ತಡವಾದರೂ ಹುಸೇನ್‌ಬಾಷಾ ಎದ್ದೇಳದಿರುವುದಕ್ಕೆ ಸಿಬ್ಬಂದಿ ಎಬ್ಬಿಸಲು ಹೋದಾಗ ಮೃತಪಟ್ಟಿದ್ದು ಗೊತ್ತ್ತಾಗಿದೆ. ಮೃತನಿಗೆ ಪತ್ನಿ, ಐವರು ಮಕ್ಕಳು ಇದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ರಂಗಪ್ಪ ದೊಡ್ಡಮನಿ ಆಗಮಿಸಿ ಪರಿಶೀಲಿಸಿದರು. ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *