ದೇಶದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಕ್ರಮಕ್ಕೆ ಒತ್ತಡ

ತಹಸೀಲ್ದಾರ್‌ಗೆ ಕರವೇ ಕಾರ್ಯಕರ್ತರ ಮನವಿ

ಮಾನ್ವಿ:  ಭಾರತದಲ್ಲಿದ್ದು ದೇಶದ್ರೋಹದ ಹೇಳಿಕೆ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಅಮರೇಶ ಬಿರಾದಾರ್‌ಗೆ ಕರವೇ (ಜನಪರ ಬಣ) ಕಾರ್ಯಕರ್ತರು ಮನವಿ ಸಲ್ಲಿಸಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿನ ಸೋಮವಾರ ಪ್ರಧಾನ ಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ವೇದಿಕೆ ರಾಜ್ಯ ಅಧ್ಯಕ್ಷ ಶ್ರೀಕಾಂತ ಪಾಟೀಲ್ ಗೂಳಿ ಮಾತನಾಡಿ, ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಸೈನಿಕರ ಹತ್ಯೆ ಘಟನೆಗೆ ಇಡೀ ದೇಶದ ಜನರು ಕಂಬನಿ ಮಿಡಿಯುತ್ತಿದೆ. ಆದರೆ, ಕೆಲ ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಹರಿಬಿಟ್ಟು ವಿಕೃತಿ ಮೆರೆಯುತ್ತಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮುಂಬರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜತೆ ಪಂದ್ಯ ಆಡಬಾರದು. ಸರ್ಕಾರಗಳು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯ ಇಬ್ರಾಹಿಂ ಖುರೇಶಿ, ಇಮಾಮ್‌ಸಾಬ್, ಸಿದ್ದರಾಮ, ವಿಶ್ವನಾಥ ಪವಾರ, ನೂರುಲ್ಲಾಖಾನ್, ಹನುಮಂತ ಭೋವಿ, ರವಿರಾಜ್, ಗಂಗಾಧರ ಪವಾರ, ಬಸವ, ಜೆ.ಹನುಮಂತ, ಶಿವರಾಜ್, ಇಸ್ಮಾಯಿಲ್, ಜಾವಿದ್, ಮಹ್ಮದ್ ಹುಸೇನ್, ಶಿವು ನಾಯಕ ಇತರರಿದ್ದರು.