ದೇಶದ ಸುಭದ್ರತೆಗೆ ಮೋದಿ ಬೆಂಬಲಿಸಿ – ಕುಡುಚಿ ಶಾಸಕ ಪಿ.ರಾಜೀವ್

ಮಾನ್ವಿ: ದೇಶದ ಸುಭದ್ರತೆಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ದೇಶದ ಪ್ರಧಾನಿಯನ್ನಾಗಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕುಡುಚಿ ಶಾಸಕ ಪಿ.ರಾಜೀವ್ ಹೇಳಿದರು. ಪಟ್ಟಣದ ಆದಿನಾರಾಯಣ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲದಿಂದ ಮಂಗಳವಾರ ಏರ್ಪಡಿಸಿದ್ದ ಪ್ರಭುದ್ಧರ ಸಭೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಉಚಿತ ಗ್ಯಾಸ್ ಯೋಜನೆ ಹಾಗೂ ನೈರ್ಮಲೀಕರಣಕ್ಕಾಗಿ ವೈಯಕ್ತಿಕ ಶೌಚಗೃಹಗಳ ನಿರ್ಮಾಣ, ಮುದ್ರಾ, ಕೌಶಲ, ಪ್ರಧಾನ ಮಂತ್ರಿ ಆವಾಜ್, ಜನಧನ್, ಆಯುಷ್ಮಾನ್, ಫಸಲ್ ಭಿಮಾ ಯೋಜನೆ, ಜನರಿಕ್ ಔಷಧ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು.
ಈ ದೇಶದಲ್ಲಿ 60 ವರ್ಷಕ್ಕಿಂತ ಹೆಚ್ಚು ಆಳ್ವಿಕೆ ನಡೆಸಿರುವ ಕಾಂಗ್ರೆಸ್ ದೇಶದ ಪ್ರಗತಿಗೆ ಹಾಗೂ ಇಲ್ಲಿನ ನೆಲ, ಜಲ, ನಿಸರ್ಗ, ಉದ್ಯೋಗ, ತ್ಯಾಗ ಮನೋಭಾವನೆಗಳಿಗೆ ಒತ್ತು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ನಡೆಸಿದ ಏರ್‌ಸರ್ಜಿಕಲ್ ಸ್ಟ್ರೈಕ್‌ನಿಂದ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದಲ್ಲದೆ. ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಲ್ಲುವಂತೆ ದಿಟ್ಟತನ ಕ್ರಮಗಳೇ ಕಾರಣವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರೈತರು, ಎಲ್ಲ ವರ್ಗದ ಜನರು, ವೈದ್ಯರು, ವಕೀಲರು, ಉದ್ದಿಮೆದಾರರು, ವ್ಯಾಪಾರಿಗಳು, ಪ್ರಗತಿಪರರು ಸೇರಿ ಎಲ್ಲ ಪ್ರಭುದ್ಧರು ಮತ್ತೊಮ್ಮೆ ಯೋಚನೆ ಮಾಡಿ ದೇಶದ ಭವಿಷ್ಯಕ್ಕಾಗಿ ಮತ್ತು ಸುಭದ್ರೆತೆಗಾಗಿ ಮೋದಿ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಅಧ್ಯಕ್ಷ ಜೆ.ಶರಣಪ್ಪಗೌಡ ಸಿರವಾರ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಸಂಗಾಪುರ, ಪ್ರಕಾಶ ದೇಶಪಾಂಡೆ, ಸಂಚಾಲಕ ಶರಣಪ್ಪಗೌಡ ನಕ್ಕುಂದಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಬಿಜೆಪಿ ಮುಖಂಡರಾದ ಉಮೇಶ ಸಜ್ಜನ್, ಡಾ.ಶರಣಪ್ಪ ಬಲ್ಲಟಗಿ, ಮಲ್ಲನಗೌಡ ನಕ್ಕುಂದಿ ಇತರರಿದ್ದರು.

ನರೇಂದ್ರ ಮೋದಿಯವರು 5 ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲಿಯೂ ಮಸೀದಿ, ಚರ್ಚ್‌ಗಳ ಮೇಲೆ ದಾಳಿಯಾಗಿಲ್ಲ, ಎಲ್ಲಿಯೂ ಗಲಭೆ, ದೊಂಬಿಗಳು, ಹಿಂಸಾಚಾರಗಳಂತಹ ಘಟನೆಗಳು ಜರುಗಿಲ್ಲ. ದೇಶದ ಮೇಲಿನ ಅರ್ಧದಷ್ಟು ಸಾಲವನ್ನು ತೀರಿಸಿ ಸಾಲ ಪಡೆಯದೆ ದೇಶವನ್ನು ಸಮರ್ಥವಾಗಿ ಮುನ್ನೆಡಿಸಿದ ಶ್ರೇಯಸ್ಸು ಮೋದಿ ಅವರಿಗೆ ಸಲ್ಲುತ್ತದೆ.
| ಪಿ.ರಾಜೀವ್ ಶಾಸಕ, ಕುಡಚಿ