ಮಾನ್ವಿ: ಪಟ್ಟಣದ ಕಲ್ಮಠ ಪೂಜ್ಯ ಶ್ರೀವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಆವರಣದಲ್ಲಿ ಭಾನುವಾರ ಭಾರತೀಯ ಆಯುರ್ವೇದ ದಿನ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮ ನಡೆಯಿತು. ಧನ್ವಂತರಿ ಮೂರ್ತಿಗೆ ಕಾಲೇಜಿನ ಪ್ರಾಚಾರ್ಯ ಡಾ.ವೇದಮೂರ್ತಿ ಹಿರೇಮಠ ಮಾಲಾರ್ಪಣೆ ಮಾಡಿದರು.
ಆಯುರ್ವೇದಿಕ್ ಔಷಧಗಳಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದಾಗಿದೆ. ಋಷಿ-ಮುನಿಗಳು ಗಿಡಮೂಲಿಕೆಗಳಿಂದ ಅನೇಕ ರೋಗಳು ಗುಣಪಡಿಸುತ್ತಿದ್ದರು. ಪ್ರಸ್ತುತ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದರು. ಉಪ ಪ್ರಾಚಾರ್ಯೆ ಡಾ.ಸುಮಂಗಲಾ ಹಿರೇಮಠ, ಉಪನ್ಯಾಸಕರು, ವೈದ್ಯರು, ವೈದ್ಯ ವಿದ್ಯಾರ್ಥಿಗಳು ಇದ್ದರು.