11 ತಿಂಗಳ ವೇತನ ಪಾವತಿಗೆ ಕಾರ್ಮಿಕರ ಪಟ್ಟು

ಮಾನ್ವಿ: 11 ತಿಂಗಳ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ (ಟಿಯುಸಿಐ) ಪಟ್ಟಣ ಮತ್ತು ಹಿರೇಕೊಟ್ನೆಕಲ್ ಕರ್ನಾಟಕ ನೀರಾವರಿ ಇಲಾಖೆ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿತು.

ಟಿಯುಸಿಐ ಅಧ್ಯಕ್ಷ ಆರ್.ಮಾನಸಯ್ಯ ನೇತೃತ್ವದಲ್ಲಿ ಸಿರವಾರ ವಿಭಾಗದ ಕಚೇರಿ ಮುಂದೆ ಈಚೆಗೆ ಧರಣಿ ನಡೆಸಿದಾಗ ಇಇ ರಾಯಪ್ಪ ಅವರು, 2-3 ದಿನದೊಳಗೆ ಕಾರ್ಮಿಕರಿಗೆ 5 ತಿಂಗಳ ವೇತನ ಮತ್ತು ಉಳಿದ 6 ತಿಂಗಳ ವೇತನ ಪಾವತಿಗಾಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವ ಲಿಖಿತ ಭರವಸೆ ನೀಡಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಮಾ.30ರಂದು ಯರಮರಸ್‌ನಲ್ಲಿ ಕರೆದಿದ್ದ ಸಭೆಯಲ್ಲಿ ಸಹ ಭರವಸೆ ಹುಸಿಯಾಗಿದೆ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆ ಎಂದು ಕಾರ್ಮಿಕರು ಎಚ್ಚರಿಸಿದರು.

ಸದ್ಯ ಕಾರ್ಮಿಕರಿಗೆ 5 ತಿಂಗಳ ವೇತನ ಪಾವತಿ ಮಾಡಬೇಕು. ಕಾಲುವೆಗೆ ನೀರು ಇಲ್ಲದಿರುವ ವೇಳೆ ಕಾರ್ಮಿಕರಿಗೆ ಕೆಲಸ ನೀಡುವುದು ಸೇರಿ ಇತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಮಾನ್ವಿ ಮತ್ತು ಹಿರೇಕೊಟ್ನೆಕಲ್ ಸಿರವಾರ ವಿಭಾಗದ ಅಧ್ಯಕ್ಷ ರಮೇಶ ಭೋವಿ, ಸಮಿತಿ ಸದಸ್ಯ ರಾಮಣ್ಣ ಮಡಿವಾಳ, ಕೊಟ್ನೆಕಲ್ ವಿಭಾಗದ ಅಧ್ಯಕ್ಷ ರಾಮಣ್ಣ ಪೋತ್ನಾಳ್, ಕಾರ್ಯದರ್ಶಿ ಬಸವರಾಜ ಬಾಗಲವಾಡ, ಅಮರೇಶ ಕರೇಗುಡ್ಡ, ಲಕ್ಷ್ಮಣ್ ಭೋವಿ, ಬಸವರಾಜ ಅಂಗಡಿ, ನರಸಿಂಹನಾಯಕ, ಆಮೀನ್‌ಪಾಷಾ, ಅಮರೇಶ ಮಡಿವಾಳ, ಹನುಮಂತ ಭೋವಿ, ಗೋಪಾಲರಾವ್, ಪರಶುರಾಮ, ಸೈಯದ್ ಗೌಸ್, ಶಫಿ, ವೀರಯ್ಯಸ್ವಾಮಿ, ಶಿವಕುಮಾರಸ್ವಾಮಿ ಇದ್ದರು.

Leave a Reply

Your email address will not be published. Required fields are marked *