ಸೌಮ್ಯಾ ಮಂಟೂರ ಗ್ರಾಪಂ ಅಧ್ಯಕ್ಷೆ

ಮುಧೋಳ: ತಾಲೂಕಿನ ಮಂಟೂರ ಗ್ರಾಪಂ ಅಧ್ಯಕ್ಷೆಯಾಗಿ ಸೌಮ್ಯಾ ರವೀಂದ್ರ ಕೋಲೂರ, ಉಪಾಧ್ಯಕ್ಷರಾಗಿ ಮಲ್ಲಪ್ಪ ಗದಿಗೆಪ್ಪ ಚಿಕರಡ್ಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ವಿ.ಅಡವಿಮಠ ತಿಳಿಸಿದ್ದಾರೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿಮೂಲಿಮನಿ ಹಾಗೂ ಸೌಮ್ಯಾ ಕೋಲೂರ, ಉಪಾಧ್ಯಕ್ಷ ಸ್ಥಾನಕ್ಕೆ ಮುತ್ತಪ್ಪ ಕೊಡಬಾಗಿ, ಮಲ್ಲಪ್ಪ ಚಿಕರಡ್ಡಿ ಸ್ಪರ್ಧಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರು ಸಮನಾಗಿ 14 ಮತ ಪಡೆದಿದ್ದರಿಂದ ಚೀಟಿ ಎತ್ತಿ ಆಯ್ಕೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಹಲವು ವರ್ಷಗಳ ಬಳಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಮಂಟೂರ ಹಾಗೂ ಬುದ್ನಿ ಪಿ.ಎಂ. ಗ್ರಾಮದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಮುಖಂಡ ಕುಮಾರ ಹುಲಕುಂದ, ಸುಭಾಷ ಕೋರಡ್ಡಿ, ಗಂಗಯ್ಯ ಮರೆಗುದ್ದಿ, ಶ್ರೀಕಾಂತ ಬಟಕುರ್ಕಿ, ರಾಚಪ್ಪ ಕಣಬೂರ, ರಾಜೇಂದ್ರ ದೊಡಮನಿ, ಅಪ್ಪಸಿ ತಿಮಸಾನಿ, ರಾಜೇಂದ್ರ ಪಾಟೀಲ, ಕಾಡಪ್ಪ ನಾಗನ್ನವರ, ಲಕ್ಷ್ಮಣ ಉದಪುಡಿ, ನಿಂಗಪ್ಪ ಜಗದಾಳ, ಲಕ್ಕಪ್ಪಗೌಡ ಪಾಟೀಲ, ಹನುಮಂತ ನಾಯಕ, ಜಗದೀಶ ಮರೆಗುದ್ದಿ, ಗೋಲಪ್ಪ ಗೋಲಶೆಟ್ಟಿ, ಹನುಮಂತ ಹಿಪ್ಪಲಿ ಇದ್ದರು.