ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್ ಮತ್ತು ಮಂತ್ರಿ ಸ್ಕೆ್ವೕರ್ ಮಾಲ್ನ್ನು ಪಾಲಿಕೆಗೆ ಸೇರಿದ 4.29 ಎಕರೆ ಪ್ರದೇಶ ಒತ್ತುವರಿ ಮಾಡಿಕೊಂಡು ನಿರ್ವಿುಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಸಮೀಕ್ಷೆ ನಡೆಸಿದ್ದಾರೆ.
ಜಕ್ಕರಾಯನಕೆರೆಯ 37 ಗುಂಟೆ ಹಾಗೂ ಪಾಲಿಕೆಯ ಕೈಗಾರಿಕಾ ಪ್ರದೇಶದ 3 ಎಕರೆ 31 ಗುಂಟೆ ಒತ್ತುವರಿ ಮಾಡಿಕೊಂಡು ಅಂದಾಜು 400 ಕೋಟಿ ರೂ. ಮೌಲ್ಯದ ಮಂತ್ರಿ ಮಾಲ್, ಮಂತ್ರಿ ಗ್ರೀನ್ ಅಪಾರ್ಟ್ವೆುಂಟ್ ನಿರ್ವಿುಸಲಾಗಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರು ಒತ್ತುವರಿ ಸ್ಥಳವನ್ನು ತೆರವುಗೊಳಿಸಿ ಆಸ್ತಿಯನ್ನು ವಶಕ್ಕೆ ಪಡೆಯಲು ಸೂಚಿಸಿದ್ದರು. ಅದರಂತೆ ಸಿಬ್ಬಂದಿ ಸಮೀಕ್ಷೆ ನಡೆಸಿ ಗುರುತು ಮಾಡಿದ್ದಾರೆ. ಈಗ ನಡೆಸಿದ ಸಮೀಕ್ಷೆ ಜತೆಗೆ ಇನ್ನೊಂದು ವಾರದಲ್ಲಿ (ಮಾ.6ಕ್ಕೆ) ಅಂತಿಮ ಸಮೀಕ್ಷೆ ಮಾಡುವುದಾಗಿ ಬಿಬಿಎಂಪಿಯ ಸಮೀಕ್ಷೆ ಅಧಿಕಾರಿ ತಿಳಿಸಿದರು.
ಫ್ಲ್ಯಾಟ್ ನಿವಾಸಿಗಳಿಗೆ ಆತಂಕ: ಅಧಿಕಾರಿಗಳ ತಂಡ ನಡೆಸಿದ ಸಮೀಕ್ಷೆ ಯಲ್ಲಿ 14 ಫ್ಲ್ಯಾಟ್ಗಳು ಒತ್ತುವರಿ ಜಾಗದಲ್ಲಿ ನಿರ್ವಣವಾಗಿರುವುದು ಪತ್ತೆಯಾಗಿದೆ. ಅವುಗಳ ತೆರವಿಗೆ ನೋಟಿಸ್ ನೀಡಲಾಗುತ್ತದೆ. ನಂತರ ಒತ್ತುವರಿ ಜಾಗದಲ್ಲಿ ವಾಸವಿದ್ದರೆ ಅವರನ್ನು ಹೊರಗೆ ಕಳುಹಿಸಿ ಪಾಲಿಕೆಯಿಂದ ತೆರವು ಮಾಡಿ ಸ್ಥಳವನ್ನು ವಶಕ್ಕೆ ಪಡೆಯಲಾಗುವುದು ಎಂದು ಸಮೀಕ್ಷೆ ನಡೆಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹರಾಜಿನಲ್ಲಿ ಪಡೆದ ಜಾಗದಲ್ಲಿ ಮನೆ: ನ್ಯಾಷನಲ್ ಟೆಕ್ಸ್ಟೈಲ್ಸ್ ಕಾಪೋರೇಷನ್ನಿಂದ ಹರಾಜಿನಲ್ಲಿ ಬಂದ ಜಾಗದಲ್ಲಿ ಮನೆ ಕಟ್ಟಿ ಜೀವನ ನಡೆಸುತ್ತಿದ್ದೇವೆ. ಹೀಗಿದ್ದೂ ಬಿಬಿಎಂಪಿ, ‘ಇದು ಸರ್ಕಾರಿ ಜಾಗ’ ಎಂದು ಸಮೀಕ್ಷೆಗೆ ಮುಂದಾಗುತ್ತಿರುವುದು ಸರಿಯಲ್ಲ. ಸಮೀಕ್ಷೆ ಮಾಡದಂತೆ ಕೋರ್ಟ್ ತಡೆಯಾಜ್ಞೆ ಇದೆ ಎಂದು ಮಂತ್ರಿ ಗ್ರೀನ್ ಅಪಾರ್ಟ್ವೆುಂಟ್ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.