ಮಂತ್ರಾಲಯದಲ್ಲಿ ರಾಯರ ಆರಾಧನೆ, ಚಿನ್ನದ ರಥೋತ್ಸವ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 347 ನೇ ಆರಾಧನಾ ಮಹೋತ್ಸವದಲ್ಲಿ ಇಂದು ಮಧ್ಯಾರಾಧನೆ ಸಂಭ್ರಮದಿಂದ ನಡೆಯಿತು.

ರಾಯರು ವೃಂದಾವನಸ್ಥರಾಗಿ ಇಂದಿಗೆ 347 ವರ್ಷವಾಗಿದ್ದು, ಮುಂಜಾನೆಯೇ ತಿರುಪತಿ ತಿಮ್ಮಪ್ಪ ದೇಗುಲದಿಂದ ರಾಯರ ವೃಂದಾವನಕ್ಕೆ ಶೇಷವಸ್ತ್ರ ಸಮರ್ಪಣೆ ಮಾಡಲಾಯಿತು. ಮಠಾಧಿಪತಿ ಶ್ರೀ ಸುಬುಧೇಂ ದ್ರ ತೀರ್ಥ ಯತಿಗಳು ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಸಿದ್ದಾರೆ. ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ಟಿಟಿಡಿ ಅಧಿಕಾರಿಗಳು ತಂದ ಶೇಷ ವಸ್ತ್ರವನ್ನು ಶ್ರೀ ಸುಬುಧೇಂದ್ರ ತೀರ್ಥರು ತಲೆ ಮೇಲೆ ಹೊತ್ತು ಕೊಂಡು ಹೋಗಿ ರಾಯರಿಗೆ ಅರ್ಪಿಸಿದರು. ನಂತರ ಚಿನ್ನದ ರಥೋತ್ಸವ ಜರುಗಿತು. ಸಂಜೆ 6 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.