ಐಎಂಎ ನಂಟು ದಾಖಲೆ ಉಂಟು: ಪ್ರಭಾವಿಗಳ ಜತೆಗಿನ ವ್ಯವಹಾರದ ಗುಟ್ಟು ಬಿಚ್ಚಿಟ್ಟ ಆರೋಪಿ ಮನ್ಸೂರ್

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳಿಗೂ ಪಾಲು ಹೋಗಿದೆಯೆಂದು ಪುನರುಚ್ಚರಿಸಿರುವ ಪ್ರಮುಖ ಆರೋಪಿ ಮನ್ಸೂರ್ ಖಾನ್, ಗಣ್ಯರ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ತನ್ನ ಬಳಿ ಇರುವುದಾಗಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಪ್ರಕರಣ ಸಂಬಂಧ ಇ.ಡಿ. ಅಧಿಕಾರಿಗಳು ಭಾನುವಾರವೂ ಮನ್ಸೂರ್​ನನ್ನು ವಿಚಾರಣೆಗೊಳ ಪಡಿಸಿದರು. ಈ ವೇಳೆ ಕೆಲ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಜತೆ ಹೊಂದಿದ್ದ ಒಡನಾಟದ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆಂದು ತಿಳಿದು ಬಂದಿದೆ. ಐಎಂಎಗೆ ಬಂದ ಲಾಭಾಂಶದಿಂದ ಪ್ರಭಾವಿ ರಾಜಕಾರಣಿಗಳಿಗೂ ಕೋಟ್ಯಂತರ ರೂ. ನೀಡಿರುವುದಾಗಿ ಮನ್ಸೂರ್ ಹೇಳಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆತ ಹೇಳಿರುವ ಅಧಿಕಾರಿಗಳು ಹಾಗೂ ರಾಜಕಾರಣಿ

ಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ತೀರ್ವನಿಸಲಾಗಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ. ಮನ್ಸೂರ್ ಖಾನ್​ನ ಹೇಳಿಕೆ ಗಳನ್ನು ವಿಡಿಯೋ ಮೂಲಕ ದಾಖಲು ಮಾಡಲಾಗಿದೆ.

ಈಗಾಗಲೇ ಈ ಪ್ರಕರಣದಲ್ಲಿ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ನಾಗರಾಜ್, ಜಿಲ್ಲಾಧಿಕಾರಿ ವಿಜಯ ಶಂಕರ್ ಬಂಧನವಾಗಿದೆ. ಶಾಸಕ ರೋಷನ್ ಬೇಗ್ ಅವರನ್ನು 2 ಬಾರಿ ವಿಚಾರಣೆಗೊಳಪಡಿಸಲಾಗಿದೆ.

ಮನ್ಸೂರ್​ಗೆ ಎದೆನೋವು

ಮನ್ಸೂರ್​ನನ್ನು ಆರೋಗ್ಯ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದಾಗ ಎದೆನೋವು ಎಂದು ಹೇಳಿದ್ದಾನೆ. ನಂತರ ಇಸಿಜಿ ಪರೀಕ್ಷೆ ಮಾಡಿದ ವೈದ್ಯರು ಒಂದು ಗಂಟೆ ವೈದ್ಯಕೀಯ ಪರೀಕ್ಷೆ ನಡೆಸಿದರು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Leave a Reply

Your email address will not be published. Required fields are marked *