Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ದೇವರಲ್ಲಿ ಅಚಲ ವಿಶ್ವಾಸ

Saturday, 18.08.2018, 3:04 AM       No Comments

| ಡಾ. ಕಾಂತೇಶಾಚಾರ್ಯ ಕದರಮಂಡಲಗಿ

ಒಂದು ಊರಿನಲ್ಲಿ ಒಬ್ಬ ದೊಡ್ಡ ಭಗವದ್ಭಕ್ತರು ಇದ್ದರು. ಬಹಳ ದೊಡ್ಡ ಜ್ಞಾನಿಗಳು. ಅನೇಕ ಗ್ರಂಥಗಳನ್ನು ರಚಿಸಿ ದೊಡ್ಡ ಹೆಸರು ಪಡೆದ ಮಹಾನುಭಾವರು. ಅವರು ಕೇವಲ ಜ್ಞಾನಿಗಳಷ್ಟೇ ಅಲ್ಲ, ಪರಮವಿರಕ್ತರೂ ಹೌದು. ತಮ್ಮ ಕುಟುಂಬ ಮಾತ್ರವಲ್ಲದೆ ವಿದ್ಯೆ ಕಲಿಯಲು ಬಂದ ಹತ್ತಾರು ವಿದ್ಯಾರ್ಥಿಗಳೂ ಅವರ ಮನೆಯಲ್ಲಿ ವಾಸವಾಗಿದ್ದರು. ನಿತ್ಯವೂ ನಿರಂತರವಾಗಿ ಶಿಷ್ಯರಿಗೆ ಪಾಠ ಹೇಳುತ್ತ ಸಾರ್ಥಕಸಾಧನೆ ಮಾಡುವ ಸಾಧಕರು. ವಿಪರ್ಯಾಸವೆಂದರೆ ಕಡು ಬಡತನ. ಒಂದುಹೊತ್ತು ಊಟಕ್ಕೆ ಏನಾದರೂ ದೊರೆತರೆ ಮತ್ತೊಂದುಹೊತ್ತು ಉಪವಾಸ. ಆದರೂ ಯಾರಲ್ಲಿಯೂ ಏನನ್ನೂ ಬೇಡದ ವಿರಕ್ತಶಿಖಾಮಣಿ. ಭಗವಂತನಲ್ಲಿ ಅಚಲವಾದ ವಿಶ್ವಾಸ. ವಿಶ್ವಾಸ ಎಷ್ಟರಮಟ್ಟಿಗೆ ಎಂದರೆ ಅವರ ಮನೆಯಲ್ಲಿ ಅಡುಗೆಸಾಮಾನುಗಳನ್ನು ಶೇಖರಿಸಿ ಇಟ್ಟುಕೊಳ್ಳುವ ಉಗ್ರಾಣವೇ ಇರಲಿಲ್ಲ. ಕಾರಣ- ನಾಳಿನ ಚಿಂತೆ ಏಕೆ? ಹುಟ್ಟಿಸಿದ ಭಗವಂತ ರಕ್ಷಣೆ ಮಾಡಿಯೇ ಮಾಡುತ್ತಾನೆಂಬ ನಂಬಿಕೆ ಅವರಿಗೆ. ಹೀಗಿರುವಾಗ ಒಮ್ಮೆ ಮನೆಯಲ್ಲಿ ಎಲ್ಲರೂ ಉಪವಾಸದಲ್ಲಿದ್ದುದನ್ನು ಕಂಡು ಮನಸ್ಸಿಗೆ ಸ್ವಲ್ಪ ನೋವಾಗಿ

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಎಂಬ ಗೀತೆಯ (ಭಗವಂತ ಹೇಳಿದ) ಮಾತಿನ ಮೇಲೆ ಕೆಂಪುಶಾಯಿಯಿಂದ ಅಡ್ಡಗೆರೆ ಎಳೆದು ಸ್ನಾನಕ್ಕೆ ಹೋದರು.

ಭಗವಂತ ಒಬ್ಬ ಬ್ರಾಹ್ಮಣನ ರೂಪದಲ್ಲಿ ಎತ್ತಿನಬಂಡಿಯ ತುಂಬ ಸಾಮಾನುಗಳನ್ನು ಹಾಕಿಕೊಂಡು ಇವರ ಮನೆಗೆ ಬರುತ್ತಾನೆ. ಸಾಮಾನುಗಳನ್ನು ಇಳಿಸುವಾಗ ಅವನ ನಾಲಿಗೆ ಸೀಳಿ ರಕ್ತ ಬರುತ್ತಿರುವುದನ್ನು ಕಂಡು ಚಕಿತಳಾದ ವಿದ್ವಾಂಸನ ಹೆಂಡತಿ ಅದನ್ನು ಪ್ರಶ್ನಿಸಿದಾಗ, ‘ನಾನು ಸಾಮಾನು ತಂದುಕೊಡುವುದಕ್ಕೆ ಸ್ವಲ್ಪ ತಡ ಮಾಡಿದೆ. ಹಾಗಾಗಿ ನನ್ನ ಒಡೆಯ ನನಗೆ ಹೀಗೆ ಶಿಕ್ಷೆ ನೀಡಿದ್ದಾನೆ’ ಎಂದು ಹೇಳಿದ.

ಘಟನೆ ತಿಳಿದ ಆ ಭಗವದ್ಭಕ್ತರಿಗೆ ತಪ್ಪಿನ ಅರಿವಾಯಿತು. ದೇವರು ರಕ್ಷಿಸಿಯೇ ರಕ್ಷಿಸುತ್ತಾನೆ ಎಂಬ ಅಚಲವಾದ ವಿಶ್ವಾಸ ಸ್ವಲ್ಪ ಚಂಚಲವಾದದ್ದಕ್ಕೆ ಖಿನ್ನಚಿತ್ತರಾಗಿ, ದೇವರಲ್ಲಿ ಕ್ಷಮೆಯಾಚಿಸಿದರು. ಘಟನೆಯಿಂದ ಎಚ್ಚೆತ್ತ ಅವರು ದೇವರ ಮೇಲೆ ತಾವು ಇಟ್ಟುಕೊಂಡಿದ್ದ ವಿಶ್ವಾಸ ಮುಂದೆ ಎಂದೆಂದಿಗೂ ಚಂಚಲವಾಗದಂತೆ ನೋಡಿಕೊಂಡರು. ಹುಟ್ಟಿಸಿದ ಆ ದೇವ ಹುಲ್ಲು ಮೇಯಿಸಲಾರ ಎಂಬ ದೊಡ್ಡ ಸಂದೇಶವನ್ನು ಜಗತ್ತಿಗೆ ತೋರ್ಪಡಿಸಿದರು.

(ಲೇಖಕರು ಸಂಸ್ಕೃತ ಸಂಶೋಧಕರು)

Leave a Reply

Your email address will not be published. Required fields are marked *

Back To Top