25.9 C
Bengaluru
Wednesday, January 22, 2020

ಗುರಿ ತಲುಪುವ ಬಗೆ ಹೇಗೆ?

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಮೃತ ಸಂಜೀವಿನಿ ವಿದ್ಯೆ ತಿಳಿದಿರುವುದು ದೇವತೆಗಳಿಗೆಲ್ಲ ದೊಡ್ಡ ತಲೆನೋವಾಗಿತ್ತು. ಯಾಕೆಂದರೆ ಅವರು ಕೊಂದ ರಾಕ್ಷಸರನ್ನು ಶುಕ್ರಾಚಾರ್ಯರು ತಮ್ಮ ವಿದ್ಯೆ ಸಹಾಯದಿಂದ ಮತ್ತೆ ಬದುಕಿಸುತ್ತಿದ್ದರು. ಅಷ್ಟೇ ಅಲ್ಲ ಇದರಿಂದ ದೇವತೆಗಳ ಸಂಖ್ಯೆ ಕ್ಷೀಣಿಸುವ ಅಪಾಯವೂ ಇತ್ತು. ಶುಕ್ರಾಚಾರ್ಯರಿಂದ ಹೇಗಾದರೂ ಮಾಡಿ ಆ ವಿದ್ಯೆಯನ್ನು ಪಡೆದುಕೊಳ್ಳಬೇಕೆಂದು ದೇವತೆಗಳೆಲ್ಲ ವಿಚಾರ ಮಾಡಿದರು. ಆಚಾರ್ಯ ಬೃಹಸ್ಪತಿಯ ಪುತ್ರನಾದ ಕಚನು ತೀಕ್ಷ್ಣಮತಿಯೂ, ವ್ಯವಹಾರ ಜ್ಞಾನ ಉಳ್ಳವನೂ, ನಂಬಿಕೆಗೆ ಅರ್ಹನೂ ಆಗಿದ್ದನು.

ದೇವತೆಗಳೆಲ್ಲ ಆತನನ್ನೇ ಆಯ್ಕೆ ಮಾಡಿ ಶುಕ್ರಾಚಾರ್ಯರ ಬಳಿ ಕಳುಹಿಸಿದರು. ಕಚನ ಕಾರ್ಯ ಸುಲಭವಾಗಿರಲಿಲ್ಲ. ಯಾಕೆಂದರೆ ಕಡುವೈರಿಗಳಾದ ರಾಕ್ಷಸರ ಪಾಳಯ ಹೊಕ್ಕು, ಶುಕ್ರಾಚಾರ್ಯರ ವಿಶ್ವಾಸವನ್ನು ಗೆಲ್ಲದ ಹೊರತು ಆ ಕಾರ್ಯ ಸಾಧ್ಯವಿರಲಿಲ್ಲ. ಕಚನ ನಿರ್ಧಾರ ದೃಢವಾಗಿತ್ತು. ಆತ ವಿನಯದಿಂದ ಶುಕ್ರಾಚಾರ್ಯರ ಸೇವೆ ಗೈದು ಅವರ ಪ್ರಿಯ ಶಿಷ್ಯನಾದ. ಸ್ಪುರದ್ರೂಪಿಯಾದ ಕಚನನ್ನು ನೋಡಿ ಶುಕ್ರಾಚಾರ್ಯರ ಮಗಳಾದ ದೇವಯಾನಿಗೆ ಅವನ ಮೇಲೆ ಮನಸಾಯಿತು. ಉದ್ದೇಶಿತ ಕಾರ್ಯದ ಮುಂದೆ ಕಚನಿಗೆ ಅವಳ ಪ್ರೇಮವೂ ಲಘುವೆನಿಸಿತು. ಆದರೂ ತನ್ನ ಕಾರ್ಯಸಾಧನೆಗೆ ಅನುಕೂಲಕರವಾಗುವ ಅವಳ ಪ್ರೇಮವನ್ನು ಜಾಗರೂಕತೆಯಿಂದ ಬಳಸಿಕೊಂಡ. ಅನುಮಾನಗೊಂಡ ರಾಕ್ಷಸರಿಂದ ಕಚನು ಕೊಲ್ಲಲ್ಪಟ್ಟರೂ ಅವನು ಸಂಪಾದಿಸಿದ್ದ ದೇವಯಾನಿಯ ಪ್ರೇಮ, ಶುಕ್ರಾಚಾರ್ಯರ ವಾತ್ಸಲ್ಯ ಮತ್ತು ಆ ಮೃತ ಸಂಜೀವಿನಿ ವಿದ್ಯೆ ಅವನನ್ನು ಮರಳಿ ಬದುಕುವಂತೆ ಮಾಡಿತ್ತು.

ಮೇಲಿಂದ ಮೇಲೆ ರಾಕ್ಷಸರಿಂದ ಅವನ ಹನನವಾದರೂ ಅವನು ಹಿಂದಡಿಯಿಡಲಿಲ್ಲ. ಕೊನೆಗೆ ರಾಕ್ಷಸರ ಹುನ್ನಾರದಿಂದ ಬೂದಿಯಾಗಿ ಶುಕ್ರಾಚಾರ್ಯರ ದೇಹವನ್ನು ಸೇರಿ, ಅವರೇ ಅನಿವಾರ್ಯವಾಗಿ ಆತನಿಗೆ ಮೃತ ಸಂಜೀವಿನಿ ವಿದ್ಯೆ ಹೇಳಿ ಕೊಡುವ ಸನ್ನಿವೇಶ ನಿರ್ವಣವಾಯಿತು. ಬಂದ ಕಾರ್ಯ ನೆರವೇರಿತು. ಅರೆ ಘಳಿಗೆ ವಿಚಲಿತನಾಗಿದ್ದರೂ ಕರ್ತವ್ಯಭ್ರಷ್ಟನಾಗುತ್ತಿದ್ದನೇನೋ, ದೇವಯಾನಿಯ ನಿವೇದನೆಯನ್ನು ಪುರಸ್ಕರಿಸಲಿಲ್ಲ. ಶುಕ್ರಾಚಾರ್ಯರನ್ನೂ ಮರು ಮಾತನಾಡದಂತೆ ಮಾಡಿ ಕಚನು ಅಲ್ಲಿಂದ ಹೊರಟು ಬಿಟ್ಟ.

ಮಾಡುವ ಪ್ರತಿ ಕಾರ್ಯದಲ್ಲಿಯೂ ಒಂದಿಲ್ಲೊಂದು ತೊಂದರೆ ಇದ್ದೇ ಇರುವುದು. ಹಾಗೆಂದ ಮಾತ್ರಕ್ಕೆ ವಿಘ್ನಗಳಿಗೆ ಹೆದರಿ ಕಾರ್ಯವನ್ನೇ ತೊರೆದರೆ ವ್ಯಕ್ತಿ ಉನ್ನತ ಸ್ಥಾನ ತಲುಪಲು ಸಾಧ್ಯವೇ ಇಲ್ಲ. ನಡೆಯುವಾತ ಮುಂದಡಿಯಿಡಬೇಕೇ ಹೊರತು ಹಿಂದಲ್ಲ. ಧ್ಯೇಯ ಸ್ಪಷ್ಟವಾಗಿರಬೇಕು. ಗುರಿ ತಲುಪುವವರೆಗೂ ನಿಶ್ಚಿತ ಕಾರ್ಯಕ್ಕೆ ಬದ್ಧರಾಗಿ ಮುನ್ನಡೆಯಬೇಕು. ಅಂದಾಗಲೇ ವ್ಯಕ್ತಿಗೆ ಘನತೆ ಬರುವುದು.

ಸಂನ್ಯಾಸಿಯೋರ್ವನಿಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಜಾ ವಿಕ್ರಮಾದಿತ್ಯ, ಸಂದಿಗ್ಧ ಪರಿಸ್ಥಿತಿಯಲ್ಲೂ ಧೃತಿಗೆಡದೆ, ಬೇತಾಳ ಮತ್ತೆ ಮತ್ತೆ ಹೆಗಲನ್ನು ಬಿಟ್ಟು ಹೋದರೂ ಬೇಸರ ಪಡದೆ, ಅದನ್ನು ಕರೆದುಕೊಂಡು ಬಂದು ಛಲಬಿಡದ ತ್ರಿವಿಕ್ರಮನೆನಿಸಿದ. ಏನೇ ಬರಲಿ ‘ನಾನು ಎದುರಿಸುವೆ’ ಎಂಬ ಧೈರ್ಯ ಮತ್ತು ಕಾರ್ಯವನ್ನು ಪೂರ್ತಿಗೊಳಿಸುವ ವಿಶ್ವಾಸವಿದ್ದರೆ ಎದುರಾಗುವ ಸವಾಲುಗಳು ದೊಡ್ಡದಲ್ಲ ಎನಿಸುತ್ತವೆ. ಸ್ಪಷ್ಟ ಧ್ಯೇಯ, ದಿಟ್ಟ ಹೆಜ್ಜೆ, ದೃಢಸಂಕಲ್ಪ, ಸಾಧಿಸುವ ಛಲ, ಭರವಸೆಯನ್ನು ಉಳಿಸಿಕೊಳ್ಳುವ ಮನೋಬಲ ಇವುಗಳೇ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡುತ್ತವೆ ಎಂಬುದನ್ನು ಮರೆಯದಿರೋಣ.

|ಡಾ. ಗಣಪತಿ ಆರ್. ಭಟ್, (ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...