ಏಮ್ಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌

ನವದೆಹಲಿ: ಮೇದೋಜಿರಕಾಂಗದ ಕಾಯಿಲೆಯಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಅವರು ಹಲವು ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಏಮ್ಸ್‌ ಮೂಲಗಳ ಪ್ರಕಾರ, ಭಾನುವಾರ ಮುಂಜಾನೆ ಪರಿಕ್ಕರ್‌ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಪರಿಣಾಮ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಕೆಲ ಸಮಯದ ನಂತ ವೈದ್ಯರು ಅವರನ್ನು ಡಿಸ್‌ಚಾರ್ಜ್‌ ಮಾಡಲು ತೀರ್ಮಾನಿಸಿದ್ದಾರೆ.

62 ವರ್ಷದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ಸೆಪ್ಟೆಂಬರ್‌ 15ರಿಂದಲೂ ಆಲ್‌ ಇಂಡಿಯಾ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವಿಶೇಷ ವಿಮಾನದಲ್ಲಿ ಅವರನ್ನು ಗೋವಾಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದ್ದು, ತವರು ರಾಜ್ಯ ಗೋವಾಗೆ ತೆರಳಲು ಪರಿಕ್ಕರ್ ಸದೃಢರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ದೃಢಪಡಿಸಿದ್ದಾರೆ.

ಗೋವಾಗೆ ಹಿಂತಿರುಗಿದ ಬಳಿಕ ಪರಿಕ್ಕರ್‌ ಅವರು ಪಣಜಿಯಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)