28.5 C
Bengaluru
Monday, January 20, 2020

ಹೊಸತನವೇ ಬಾಳು

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು |

ರಸವು ನವನವತೆಯಿಂದನುದಿನವು ಹೊಮ್ಮಿ ||

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |

ಪಸರುತಿರೆ ಬಾಳ್ ಚೆಲುವು – ಮಂಕುತಿಮ್ಮ ||

‘ಹೊಸತನವೇ ಬಾಳು. ಹಳತಾಗಿರುವುದೆಲ್ಲ ಸಾವು. ನವನವೀನವಾಗಿರುವುದರಿಂದಲೇ ಆನಂದವು ಸದಾ ಕಾಲವು ಹೊಮ್ಮುತ್ತದೆ. ನಡೆ, ನುಡಿ, ನೋಟದಲ್ಲಿ ಒಳಿತನ್ನು ಹರಡುತ್ತಿದ್ದರೆ ಅದರಿಂದಲೇ ಈ ಬದುಕು ಸುಂದರ’ ಎನ್ನುತ್ತದೆ ಈ ಕಗ್ಗ.

ಮನುಷ್ಯನು ಜೀವನದಲ್ಲಿ ಸುಖವಾಗಿರಬೇಕು ಎಂಬ ಗುರಿಯನ್ನು ಇರಿಸಿಕೊಳ್ಳುತ್ತಾನೆ. ಆದರೂ ಆತ ದುಃಖಕ್ಕೆ ಕೊಟ್ಟಷ್ಟು ಪ್ರಾಧಾನ್ಯವನ್ನು ಸುಖದ ಕ್ಷಣಗಳಿಗೆ ಕೊಡುವುದಿಲ್ಲ. ಕಳೆದ ದಿನಗಳನ್ನು, ಕೈತಪ್ಪಿದ ಅವಕಾಶಗಳನ್ನು ನೆನೆದು ಕೊರಗುತ್ತಾನೆ, ತನ್ನ ಪಾಲಿಗೆ ಲಭ್ಯವಾದ ಮಧುರ ದಿನಗಳನ್ನು ಗಮನಿಸುವುದೇ ಇಲ್ಲ. ಪಡೆದುದಕ್ಕಿಂತ ಸಿಗದುದರ ಚಿಂತೆ, ಹತಾಶೆ ಮನುಷ್ಯನ ಸಾಮಾನ್ಯ ಸ್ವಭಾವ. ಹೀಗೆ ನಕಾರಾತ್ಮಕ ಭಾವಗಳನ್ನು ಪೋಷಿಸುವುದರಿಂದ, ವರ್ತಮಾನದ ಹರ್ಷ ಕಾಣದೆ ಉಳಿಯುತ್ತದೆ.

ನಡೆದುಬಂದ ದಾರಿಯನ್ನು ತಿರುಗಿ ನೋಡಿದರೆ ಅಲ್ಲಿ ಸೋತ, ಮೋಸಹೋದ, ಅಪಮಾನಿತರಾದ ಸನ್ನಿವೇಶಗಳ ನೆನಪು ಎದ್ದು ಕಾಣುತ್ತದೆಯೇ ಹೊರತು ನಕ್ಕು ನಲಿದ, ಪ್ರೀತಿ ಪಡೆದ ಕ್ಷಣಗಳ ನೆನಹು ಅಸ್ಪಷ್ಟವಾಗಿರುತ್ತದೆ. ನಿನ್ನೆಗಳನ್ನು ನೆನೆಯುತ್ತ ನಾಳೆಗಳನ್ನು ರೂಪಿಸಲು ಹೊರಟ ನಮಗೆ ಈ ದಿನದ ಸಂತೋಷ ಕಾಣುವುದಿಲ್ಲ. ಹಾಗಾಗಿ ನಾಳೆಗಳೂ ಸುಂದರವಾಗಿರುವುದಿಲ್ಲ. ಪ್ರಾಣಿ-ಪಕ್ಷಿಗಳು, ಮರ-ಗಿಡಗಳು ಆಯಾಯ ಋತುಮಾನಗಳಿಗೆ, ಕಾಲಧರ್ಮಕ್ಕೆ ಹೊಂದಿಕೊಂಡು ಜೀವನೋತ್ಸಾಹದಿಂದ ಬಾಳುತ್ತವೆ. ಮನುಷ್ಯನೂ ಇದನ್ನು ಅನುಸರಿಸಬೇಕು. ಜೀವನವೆಂದರೆ ನಿರಂತರ ಹೋರಾಟ, ಹೊಸ ಅನುಭವಗಳ ಮೂಲಕ ಅರಿವನ್ನು ವಿಸ್ತರಿಸಿಕೊಳ್ಳುವ ಪ್ರಕ್ರಿಯೆ. ಹೊಸತನದ ಹುಡುಕಾಟವೆಂದರೆ ಆಮೋದಪ್ರಮೋದಗಳಲ್ಲಿ ಕಳೆದುಹೋಗಲು ಹೊಸ ದಾರಿಗಳನ್ನು ಹುಡುಕುವುದಲ್ಲ. ಅದರಿಂದ ಆಯುಷ್ಯ, ಹಣ, ಆರೋಗ್ಯ ವ್ಯಯವಾದೀತೇ ಹೊರತು ವ್ಯಕ್ತಿತ್ವದ ನ್ನತ್ಯವು ಸಾಧ್ಯವಿಲ್ಲ. ಕಾಲನನ್ನು ಅನುಸರಿಸಿ ಮುನ್ನಡೆಯಬೇಕಾದ ನಾವು ಹಿಂತಿರುಗಿ ನೋಡುತ್ತ ನಡೆದರೆ ಮುಂದಿಡುವ ಹೆಜ್ಜೆಗಳು ಮುಗ್ಗರಿಸಬಹುದು. ಆದದ್ದು ಆಯಿತೆಂದುಕೊಂಡು ಆ ನೋವು ಕಲಿಸಿದ ಪಾಠದಿಂದ ಎಚ್ಚೆತ್ತು, ಕಣ್ಣೆದುರಿರುವ ನಲಿವನ್ನು ನಿರಾಕರಿಸದೆ ಉತ್ಸಾಹದಿಂದಿರುವುದೇ ಅರ್ಥಪೂರ್ಣ ಜೀವನ. ಹಳೆಯ ನೋವು, ಕಹಿನೆನಪುಗಳನ್ನು ನೆನೆದು ಕೊರಗುವುದು ಜೀವವಿದ್ದೂ ಸತ್ತಂತೆ. ಇದರಿಂದ ಜೀವ ನರಳುತ್ತದೆ, ಜತೆಗಿದ್ದವರಿಗೂ ದುಃಖ ತಗಲುತ್ತದೆ.

ನಾವೀನ್ಯವನ್ನು ಕಾಪಿಟ್ಟುಕೊಳ್ಳುವ ಸಹಜ ಪ್ರಯತ್ನದಿಂದ ಮನಸ್ಸು ಉಲ್ಲಸಿತವಾಗುತ್ತದೆ. ಬದುಕಿನ ಪ್ರತಿ ಕ್ಷಣವೂ ಆನಂದಮಯವಾಗಿರುತ್ತದೆ. ಇನ್ನೊಬ್ಬರನ್ನು ನೋಯಿಸುವ ಕೊಂಕು ಮಾತು ಒಡಮೂಡದು. ಅಂಥ ಸಂದರ್ಭದಲ್ಲಿ ಮೌನ ತಾಳುವ, ಸಂಯಮದಿಂದ ವರ್ತಿಸುವ ಶಕ್ತಿ ಮೈಗೂಡುತ್ತದೆ. ಸಮಾಜದ ನೋವು-ನಲಿವಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ನಡೆನುಡಿಗಳೊಂದಿಗೆ ದೃಷ್ಟಿಕೋನವೂ ಉದಾತ್ತವಾಗಿರುವುದರಿಂದ ಎಲ್ಲರೊಳಗೊಂದಾಗಿ ಬಾಳಲು ಸಾಧ್ಯ. ಎಲ್ಲೆಡೆ, ಎಲ್ಲರಲ್ಲೂ ಒಳಿತನ್ನೇ ಕಾಣುತ್ತ, ಒಳಿತನ್ನೇ ಹಾರೈಸುತ್ತ ಸಾಮರಸ್ಯದಿಂದ ಬಾಳುವದರಿಂದ ಸಂತೃಪ್ತ ಬಾಳ್ವೆ ಸಿದ್ಧಿಸುತ್ತದೆ. ಅನುಭವಿಸಿದ ಅಥವಾ ಅನುಭವಿಸುವ ನೋವುಗಳ ತೀವ್ರತೆ ಕಡಿಮೆಯಾಗಲು ನಿಸ್ವಾರ್ಥಭಾವದಿಂದ ಸ್ಪಂದಿಸುವವರ ಒಡನಾಟ ಬೇಕು. ಇತರರಿಂದ ಏನನ್ನು ನಿರೀಕ್ಷಿಸುತ್ತೇವೋ ಅದನ್ನು ನೀಡಲು ನಮ್ಮ ಮನಸ್ಸು ಹದವಾಗಬೇಕು. ಕೆಲವೊಮ್ಮೆ ಕೆಡುಕೂ ಒಳಿತಿನ ಪ್ರಭಾವಕ್ಕೆ ಒಳಗಾಗಬಲ್ಲುದು. ಜೀವನದ ಪ್ರತಿ ಸನ್ನಿವೇಶವನ್ನೂ ಅನುಭವದ ನೆಲೆಯಲ್ಲೇ ಪರಿಭಾವಿಸಿದರೆ ಯಾವ ಸಮಸ್ಯೆಯೂ ಕಂಗೆಡಿಸದು. ಹೊಸ ಅರಿವನ್ನು ಪಡೆದ ಸಂತಸದಲ್ಲಿ ಬದುಕು ಚೆಲುವಾಗುತ್ತದೆ, ಜೀವನೋತ್ಸಾಹವು ಚಿಮ್ಮುತ್ತದೆ.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...