25.9 C
Bengaluru
Wednesday, January 22, 2020

ಕಾಲಪ್ರವಾಹ ಮತ್ತು ಮನುಷ್ಯ ಪ್ರಯತ್ನ

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ತೆರಪನರಿಯದೆ ಪರಿವ ಕಾಲಪ್ರವಾಹದಲಿ |

ಪುರುಷರಚಿತಗಳೆನಿತೊ ತೇಲಿಹೋಗಿಹವು ||

ಪುರ ರಾಷ್ಟ್ರ ದುರ್ಗಗಳು, ಮತ ನೀತಿ ಯುಕ್ತಿಗಳು |

ಪುರುಷತನ ನಿಂತಿಹುದು – ಮಂಕುತಿಮ್ಮ ||

ಬಿಡುವಿಲ್ಲದೆ ಹರಿಯುತ್ತಿರುವ ಕಾಲಪ್ರವಾಹದಲ್ಲಿ ಮನುಷ್ಯನ ಪೌರುಷದ ರಚನೆಗಳೆಷ್ಟೋ ತೇಲಿಹೋಗಿವೆ. ಪುರ, ರಾಷ್ಟ್ರ, ದುರ್ಗಗಳು, ಮತ, ನೀತಿ, ಯುಕ್ತಿಗಳೂ ಸರಿದುಹೋಗಿವೆ. ಆದರೆ ಪೌರುಷ ಮಾತ್ರ ಹಾಗೆಯೇ ನಿಂತಿದೆ ಎನ್ನುತ್ತದೆ ಈ ಕಗ್ಗ.

ಕಾಡಿನಲ್ಲಿ ಮೃಗಗಳಂತೆಯೇ ಸಹಜವಾಗಿ ಬದುಕುತ್ತಿದ್ದ ಮಾನವನು ಹೊಸತನಗಳನ್ನು ಹುಡುಕುತ್ತ ನಾಡನ್ನು ನಿರ್ವಿುಸಿದ. ಒಂದೇ ರೀತಿಯ ಜೀವನಶೈಲಿಯೊಳಗೆ ಮಿಳಿತವಾದ ಹಲವರು ಪಂಗಡಗಳಾಗಿ ಬೆಳೆದರು. ಪರಸ್ಪರ ಭಿನ್ನಾಭಿಪ್ರಾಯಗಳು ಮೂಡಿದಾಗ, ನ್ಯಾಯಾನ್ಯಾಯಗಳ ಬಗೆಗೆ ಜಿಜ್ಞಾಸೆ ಎದ್ದಾಗ ಬದುಕಿಗೊಂದಿಷ್ಟು ಮೌಲ್ಯಗಳನ್ನು ಅಳವಡಿಸಿಕೊಂಡರು. ನವ ನಾಗರಿಕನಾಗುವ ಮನುಷ್ಯಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಜಗದ ಪರಿವರ್ತನೆಯನ್ನು ಗಮನಿಸಿದಾಗಲೇ ಕಾಲದ ಓಟವು ಮನಸಿಗಿಳಿಯುತ್ತದೆ.

ಹೀಗೆ ಕಾಲವೆಂಬ ನದಿಯು ಬಿಡುವಿರದೆ ಪ್ರತಿಕ್ಷಣ ಹೊಸದೆನಿಸಿಕೊಳ್ಳುತ್ತ ಹರಿಯುತ್ತಿರಲು, ಅದರ ಸೆಳೆತಕ್ಕೆ ಸಿಲುಕಿದ ಜಗತ್ತು ಕೂಡ ಬದಲಾಗುತ್ತಿರುತ್ತದೆ. ಇರುಳು ಹಗಲಾಗುತ್ತಾ, ಮತ್ತೊಮ್ಮೆ ಇರುಳಿಗೆ ಹೊರಳಿ ದಿನವೆಂಬ ಅಲೆಯು ಸರಿದುಬಿಡುವುದು ಕ್ಷಣಾರ್ಧದಲ್ಲಿ ಎಂಬಂತೆ ನಡೆದುಬಿಡುತ್ತದೆ. ಹೊಸದೊಂದನ್ನು ಅರ್ಥೈಸಿಕೊಳ್ಳುತ್ತಿರುವಂತೆಯೇ ಅದು ಹಳೆಯದೆನಿಸಿ, ಹೊಸದೊಂದು ಪಾದವೂರುತ್ತದೆ. ಇತಿಹಾಸದ ಪುಟಗಳಲ್ಲಿ ಮನುಷ್ಯನಿಂದ ನಿರ್ವಿುಸಲ್ಪಟ್ಟಿರುವ ಅವೆಷ್ಟೋ ವ್ಯವಸ್ಥೆಗಳು, ಸಂಘಟನೆ, ಸಂಸ್ಥೆಗಳು, ನಿರ್ವಿುತಿಗಳು ಕಾಲಪ್ರವಾಹದಲ್ಲಿ ತೇಲಿಹೋಗಿವೆ.

ಎಷ್ಟೋ ರಾಜಮಹಾರಾಜರುಗಳು ಈ ಭೂಮಿಯನ್ನು ಆಳಿದ್ದಾರೆ, ವಿಶಾಲ ಸಾಮ್ರಾಜ್ಯಗಳನ್ನು ರಚಿಸಿದ ಚಕ್ರವರ್ತಿಗಳ ವೀರತನದ ಬಗ್ಗೆಯೂ ಉಲ್ಲೇಖಗಳಿವೆ. ಕೋಟೆ-ಕೊತ್ತಲ, ದುರ್ಗ-ದೇಗುಲ, ವಿಜಯಸ್ತಂಭಗಳು ಗತಕಾಲದ ವೈಭವವನ್ನು ಸಾರುತ್ತಿವೆ. ಇಂತಹ ವೀರ ಚರಿತೆಗಳು ಕೆಲವು ಕಾಲದವರೆಗೆ ಪ್ರಚಲಿತದಲ್ಲಿದ್ದು ಚರಿತ್ರೆಯ ಪುಟಗಳಲ್ಲಿ ಹುದುಗಿಬಿಡುತ್ತವೆ. ಇದೇ ರೀತಿ ಮನುಷ್ಯಜೀವನದ ವಿಕಸನದ ಹಂತದಲ್ಲಿ ಹುಟ್ಟಿಕೊಂಡ ಮತ-ಧರ್ಮಗಳು, ನೀತಿ-ಯುಕ್ತಿಗಳು ಯಾವುವೂ ಶಾಶ್ವತವಾಗಿ ಉಳಿದಿಲ್ಲ.

ಸತ್ತ್ವಹೀನವಾದುದೆಲ್ಲ ನಾಶವಾಗಿವೆ, ಉಳಿದವುಗಳಲ್ಲೂ ಅನೇಕ ಮಾರ್ಪಾಡುಗಳಾಗಿವೆ. ಹೀಗೆ ಕಾಲದ ಓಟದ ರಭಸಕ್ಕೆ ಮಾನವ ರಚಿತವಾದುದೆಲ್ಲ ಉರುಳಿದರೂ, ಆಚಾರ-ವಿಚಾರಗಳು ಅರ್ಥ ಕಳೆದುಕೊಂಡರೂ, ಸಾಮ್ರಾಜ್ಯಗಳೇ ನಾಶವಾದರೂ ಪುರುಷಪ್ರಯತ್ನಕ್ಕೆ ಕುಂದುಂಟಾಗಿಲ್ಲ. ಮತ್ತೆ ಹೊಸ ರೀತಿಯಲ್ಲಿ ಬಾಳಬೇಕೆಂಬ ಛಲವಿದ್ದೇ ಇದೆ. ಚರಿತ್ರೆಯಿಂದ ಪಾಠವನ್ನೂ, ಪ್ರೇರಣೆಯನ್ನೂ ಪಡೆಯುತ್ತ ನಾಳೆಗಳನ್ನು ನಿರ್ವಿುಸಿಕೊಳ್ಳುವ ಕನಸು ಸದಾ ಟಿಸಿಲೊಡೆಯುತ್ತಿರುತ್ತದೆ. ಒಂದುಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದದ್ದು ಮತ್ತೊಂದು ಕಾಲಕ್ಕೆ ಬಲಹೀನವಾಗುವುದು, ಅಥವಾ ಇನ್ನೊಂದು ಸ್ವರೂಪದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ.

ಬದುಕಿನ ಹೊಸ ಧ್ಯೇಯವನ್ನು ‘ಆಗಿಸಿಕೊಳ್ಳುವ’ ಪ್ರಯತ್ನದಲ್ಲಿ ಸಂಸ್ಕೃತಿಯಿರುತ್ತದೆ, ಉನ್ನತವಾದುದನ್ನು ‘ಆಗಿಸಿಕೊಂಡ’ ಮೇಲೆ ಅದೇ ಧ್ಯೇಯೋದ್ದೇಶವು ವಿಕೃತಿಗೆಡೆಮಾಡುತ್ತದೆ. ಆದ್ದರಿಂದಲೇ ಉನ್ನತ ಆದರ್ಶಗಳು, ತತ್ತ್ವ ವಿಚಾರಗಳು, ಪೌರುಷಪ್ರಯತ್ನಗಳು ಹಂತಹಂತವಾಗಿ ನಾಶವಾಗುತ್ತವೆ. ಕಾಲಪ್ರವಾಹಕ್ಕೆ ಸಿಲುಕಿ ಅನಂತ ಸಾಗರದೆಡೆಗೆ ಸರಿಯುತ್ತಿರುವ ತೃಣಮಾತ್ರರು ನಾವು ಎಂಬ ಎಚ್ಚರವು ಅಹಂಕಾರದ ಸುಳಿಗೆ ಸಿಲುಕದಂತೆ ಪಾರುಗಾಣಿಸುತ್ತದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...