ಕಿಕ್ಕೇರಿ: ಹೋಬಳಿಯ ಆನೆಗೊಳ ಗ್ರಾಪಂ ನೂತನ ಉಪಾಧ್ಯಕ್ಷರಗಿ ಮಂಜಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಧನಲಕ್ಷ್ಮೀ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತು. ಮಂಜುಶೆಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದರು. ಮುಖಂಡರಾದ ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಿ.ಎಸ್ ಮಂಜುನಾಥ್, ಶಿಶುಪಾಲ, ದಾನಶೇಖರ, ಮಂಜು, ಗ್ರಾಪಂ ಅಧ್ಯಕ್ಷೆ ವೈ.ಎಲ್. ರುಕ್ಮಿಣಿ, ಸದಸ್ಯರಾದ ಜಗನ್ನಾಥ್, ಯೋಗೇಶ್, ಕಡಹೆಮ್ಮಿಗೆ ರಮೇಶ್, ನಂಜೇಶ್, ಮಹಾಲಕ್ಷ್ಮೀ, ಧನಲಕ್ಷ್ಮೀ, ಭಾಗ್ಯಮ್ಮ, ಎಂ.ಎಂ. ರಂಜಿತಾ ಮತ್ತಿತರರಿದ್ದರು.