ಕರ್ನಾಟಕ ಟಿ20 ತಂಡಕ್ಕೆ ಮನೀಷ್ ಸಾರಥ್ಯ

ಬೆಂಗಳೂರು: ಫೆಬ್ರವರಿ 21ರಿಂದ ಮಾರ್ಚ್ 2ರವರೆಗೆ ಒಡಿಶಾದ ಕಟಕ್​ನಲ್ಲಿ ನಡೆಯಲಿರುವ ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿನ ಕೊನೆ ಟೂರ್ನಿಯಾದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ.

ರಾಷ್ಟ್ರೀಯ ತಂಡದ ಆಟಗಾರ ಮನೀಷ್ ಪಾಂಡೆ ರಾಜ್ಯ ತಂಡದ ನಾಯಕನಾಗಿ ಮುಂದುವರಿದಿದ್ದಾರೆ. ಉಳಿದಂತೆ, ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಂಡ: ಮನೀಷ್ ಪಾಂಡೆ (ನಾಯಕ), ಕರುಣ್ ನಾಯರ್ (ಉಪನಾಯಕ), ಮಯಾಂಕ್ ಅಗರ್ವಾಲ್, ರೋಹನ್ ಕದಂ, ಶರತ್ ಬಿಆರ್ (ವಿಕೀ), ಸುಚಿತ್ ಜೆ, ಶ್ರೇಯಸ್ ಗೋಪಾಲ್, ವಿನಯ್ ಕುಮಾರ್, ಪ್ರಸಿದ್ಧ ಕೃಷ್ಣ, ಮಿಥುನ್, ಕೆಸಿ ಕಾರ್ಯಪ್ಪ, ಕೌಶಿಕ್ ವಿ, ಸಿದ್ಧಾರ್ಥ್ ಕೆವಿ, ಮನೋಜ್ ಭಾಂಡಗೆ, ಲವ್ನಿತ್ ಸಿಸೋಡಿಯಾ (ವಿಕೀ).