ಕೃಷಿ ಸಾಲ ಕಟ್ಟದ ರೈತನಿಗೆ ಇನ್ಸ್​ಪೆಕ್ಟರ್​ನಿಂದ ಥಳಿತ?

ಮಂಗಳೂರು: ಕೃಷಿ ಸಾಲ ಮರುಪಾವತಿ ಮಾಡಲಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ರೈತ ರವೀಂದ್ರ ಎಂಬುವವರಿಗೆ ಇನ್ಸ್​ಪೆಕ್ಟರ್​ ಹಿಗ್ಗಾಮುಗ್ಗ ಥಳಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸುಳ್ಯದ ಬಾಳೆಂಬಿ ನಿವಾಸಿ ರವೀಂದ್ರ ಅವರು ಅನಧಿಕೃತ ಫೈನಾನ್ಸ್​ನಲ್ಲಿ ಕೃಷಿ ಸಾಲ ಪಡೆದಿದ್ದರು. ಆದರೆ ಸಾಲ ಮರುಪಾವತಿ ಮಾಡಿರಲಿಲ್ಲ. ಈ ಸಂಬಂಧ ಕೋರ್ಟ್​ನಿಂದ ವಾರೆಂಟ್​ ಜಾರಿಯಾಗಿತ್ತು. ಹೈಕೋರ್ಟ್​ ಮೆಟ್ಟಿಲೇರಿದ್ದ ರವೀಂದ್ರ ಅವರು ವಾರೆಂಟ್​ಗೆ ಸ್ಟೇ ತಂದಿದ್ದರು.

ಆದರೆ ಡಿಸೆಂಬರ್​ 4 ರಂದು ಸುಳ್ಯ ಠಾಣೆಯ ಇನ್ಸ್​ಪೆಕ್ಟರ್​ ಮಂಜುನಾಥ್​, ರವೀಂದ್ರ ಅವರನ್ನು ಠಾಣೆಗೆ ಕರೆಸಿಕೊಂಡು ಹಾಕಿ ಸ್ಟಿಕ್​ ಮತ್ತು ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರವೀಂದ್ರ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.