17.8 C
Bengaluru
Wednesday, January 22, 2020

ಉಲ್ಬಣಗೊಂಡ ಕಡಲ್ಕೊರೆತ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಭಾಗ್ಯವಾನ್ ಸನೀಲ್ ಹಳೆಯಂಗಡಿ
ಅಂತಾರಾಷ್ಟ್ರೀಯ ಸರ್ಫಿಂಗ್ ಕೇಂದ್ರವಾಗಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಪ್ರಸಿದ್ಧಿಯಾಗಿರುವ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಕಡಲ್ಕೊರೆತ ಉಲ್ಬಣಿಸಿ ಅಂಗಡಿ ಕಟ್ಟಡ ಧರಾಶಾಯಿಯಾಗಿದೆ.

ಶಾಂಭವಿ ಮತ್ತು ನಂದಿನಿ ನದಿ ಸಂಗಮಗೊಂಡು ಸಮುದ್ರ ಸೇರುವ ಅಳಿವೆ ಪ್ರದೇಶವಾದ ಮುಂಡಾ ಬೀಚ್ ಪ್ರದೇಶ ಸಾಹಸ ಕ್ರೀಡೆಗಳಿಗೆ ಹೇಳಿ ಮಾಡಿಸಿದಂತಹ ಪ್ರಕೃತಿ ರಮ್ಯ ಪ್ರದೇಶವಾಗಿದ್ದರೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಅವಕೃಪೆಯ ಕಾರಣ ಸಂಪೂರ್ಣ ಬೀಚ್ ಪ್ರದೇಶವನ್ನು ನದಿ ಮತ್ತು ಕಡಲು ಆಪೋಷನಗೈಯ್ಯುತ್ತಿವೆ.

ಎಚ್ಚರಿಸಿದ್ದ ವಿಜಯವಾಣಿ: ವಿಜಯವಾಣಿ ದಿನಪತ್ರಿಕೆಯು ‘ನೈಪಥ್ಯಕ್ಕೆ ಸೇರಲಿದೆ ಮುಂಡಾ ಬೀಚ್’ ಎಂಬ ವಿಶೇಷ ವರದಿಯಲ್ಲಿ ಈ ಪ್ರದೇಶದ ಸಮಸ್ಯೆ ಕುರಿತು ಬೆಳಕು ಚೆಲ್ಲಿತ್ತು. ಆದರೂ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಇದೀಗ ಅಂಗಡಿ ಮುಂಗ್ಗಟ್ಟು ನಾಶವಾಗಿದೆ.

ಸುಮ್ಮನಿರುವ ಜಿಲ್ಲಾಡಳಿತ: 2017ರಲ್ಲಿ ಕಡಲ್ಕೊರೆತ ಸಂಭವಿಸಿದಾಗ ಅಂದಿನ ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರಾಗಿದ್ದ ಅಭಯಚಂದ್ರ ಜೈನ್ ತಕ್ಷಣ ಸ್ಪಂದಿಸಿ ಇಲಾಖೆ ವತಿಯಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಸಂದರ್ಭ ಸ್ಥಳೀಯ ಮೀನುಗಾರರು ಯೋಜನೆ ಸಂಪೂರ್ಣಗೊಳಿಸಿ ಬ್ರೇಕ್ ವಾಟರ್ ನಿರ್ಮಿಸುವಂತೆ ಆಗ್ರಹಿಸಿದ್ದರು. ಆದರೂ ಸ್ಪಂದನೆ ಶೂನ್ಯವಾಗಿದೆ.

ಬ್ರೇಕ್ ವಾಟರ್ ಬೇಕು: ಶಾಂಭವಿ ನದಿ ಹರಿವು ತೀಕ್ಷ್ಣಗೊಂಡಿರುವ ಕಾರಣ ಸಸಿಹಿತ್ಲು ಪ್ರದೇಶದಲ್ಲಿ ಕೊರೆತ ಉಂಟಾಗುತ್ತದೆ. ಈ ಬಗ್ಗೆ ತಕ್ಷಣ ತಡೆಗೋಡೆ ನಿರ್ಮಿಸಿ ಬ್ರೇಕ್ ವಾಟರ್ ದಂಡೆ ಹಾಕಿದರೆ ನೀರಿನ ಹರಿವು ತಿರುಗಿ ಪ್ರದೇಶ ಸಂರಕ್ಷಣೆಗೊಳ್ಳಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಅಂಗಡಿಗಳು ನದಿ ಪಾಲು: ಈ ಪ್ರದೇಶಕ್ಕೆ ಬರುವ ಪ್ರವಾಸಿಗರ ಸಹಾಯಕ್ಕಾಗಿ ಹಳೆಯಂಗಡಿ ಪಂಚಾಯಿತಿ ವತಿಯಿಂದ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆ ರೂಪದಲ್ಲಿ ಕೊಡಲಾಗಿತ್ತು. ಇದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಹಕಾರಿಯಾಗಿತ್ತು. ಇದೀಗ ನದಿ ಕೊರೆತದ ಕಾರಣ ಒಂದೊಂದೇ ಅಂಗಡಿಗಳು, ವಿದ್ಯುತ್ ಕಂಬಗಳು, ಸಿಮೆಂಟ್ ಹಾಸು ಕಲ್ಲುಗಳು, ಸಿಮೆಂಟ್ ಬೆಂಚುಗಳು, ಆಕರ್ಷಣೆಯ ಮುಖ್ಯ ಕೇಂದ್ರವಾದ ಗಾಳಿಮರ ತೋಪುಗಳು ನದಿ ಮತ್ತು ಸಮುದ್ರ ಪಾಲಾಗುತ್ತಿವೆ.

ನದಿಯ ಒತ್ತಡ ಕಡಿಮೆ ಕಾರಣ: ನದಿಯ ಒತ್ತಡ ಕಡಿಮೆಯಾಗಿರುವ ಕಾರಣ ಸಮುದ್ರದ ಅಲೆಗಳು ನದಿ ಪಾತ್ರದಲ್ಲಿ ಒಳಪ್ರವೇಶಿಸಿ ಹಾನಿಗೆ ಕಾರಣವಾಗುತ್ತದೆ. ಸಮುದ್ರ ಅಲೆಗಳನ್ನು ನಿಯಂತ್ರಿಸಲು ಸೂಕ್ತ ರೀತಿಯಲ್ಲಿ ಡ್ರೆಜ್ಜಿಂಗ್ ನಡೆಸಿ ತಡೆಗೋಡೆ ನಿರ್ಮಿಸಬೇಕು. ಇಲ್ಲವಾದರೆ ಸಸಿಹಿತ್ಲು ಪ್ರದೇಶಕ್ಕೆ ಸೇರಿರುವ ಬಹು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೀನುಗಾರಿಕಾ ಜೆಟ್ಟಿ ಕೂಡ ಕೊರೆತಕ್ಕೆ ಒಳಗಾಗಿ ನಾಶವಾಗಬಹುದು ಎನ್ನುವುದು ಮೀನುಗಾರರ ಅಭಿಪ್ರಾಯ.

ಉಪಯೋಗಕ್ಕೆ ಬಾರದ ಅನುಭವ: ಸ್ಥಳೀಯ ಮೀನುಗಾರರರು ಹತ್ತು ಹಲವು ದಶಕಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಕಡಲಿನ ಉಬ್ಬರ ಇಳಿತ ಕಂಡವರು. ಅವರ ಅಪಾರ ಅನುಭವದ ಮಾತುಗಳನ್ನು ಅಂದೇ ಬಂದರು ಮತ್ತು ಮೀನುಗಾರಿಕೆ ಇಲಾಖೆ ಇಂಜಿನಿಯರ್‌ಗಳು ಕಿವಿಗೆ ಹಾಕಿಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ. ಕದಿಕೆ ಮತ್ತು ಪಾವಂಜೆ ಸೇತುವೆ ನಿರ್ಮಾಣ ಸಂದರ್ಭ ನದಿಗೆ ಹಾಕಿದ್ದ ಮಣ್ಣು ತೆರವು ಮಾಡದಿರುವ ಕಾರಣ ನದಿ ಕೊರೆತ ಸಂಭವಿಸುತ್ತದೆ ಎಂದು ಖಚಿತವಾಗಿ ತಿಳಿಸಿದ್ದರೂ ಇಂಜಿನಿಯರ್‌ಗಳು ಸ್ಪಂದಿಸದ ಕಾರಣ ಇದೀಗ ಪರಿಸರವೇ ನಾಶವಾಗುವ ಭೀತಿ ಇದೆ.

ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸಲಾದ ಅಂಗಡಿ ಇದೀಗ ಕಡಲ್ಕೊರೆತಕ್ಕೆ ತುತ್ತಾಗಿದೆ. ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು.
|ವಸಂತ ಬೆರ್ನಾಡ್, ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ

ನಂದಿನಿಯ ಹರಿವಿನ ವೇಗ ಕಡಿಮೆಯಾಗಿ ಸಮಸ್ಯೆಯಾಗಿದೆ. ಸೇತುವೆಯಡಿ ಹೂಳು ತೆಗೆಯಬೇಕು ಮತ್ತು ತಡೆಗೋಡೆ ಸಂಪೂರ್ಣಗೊಳಿಸಿ ಬ್ರೇಕ್ ವಾಟರ್ ನಿರ್ಮಿಸಿದರೆ ಪ್ರದೇಶ ಉಳಿಯಲು ಸಾಧ್ಯ.
|ಚಂದ್ರ ಕುಮಾರ್, ಅನುಭವಿ ಮೀನುಗಾರರು

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...