More

  ಮಂಗಳೂರು ಬಾಂಬ್​​ ಪತ್ತೆ ಪ್ರಕರಣ: ಪೊಲೀಸರಿಗೆ ಶರಣಾದ ಆರೋಪಿ ಆದಿತ್ಯರಾವ್ ಕುರಿತ ಸ್ಫೋಟಕ ಮಾಹಿತಿ ಇಲ್ಲಿದೆ…​​

  ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಿರುವ ಶಂಕಿತ ಆರೋಪಿ ಆದಿತ್ಯರಾವ್​ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

  ಬಾಂಬ್​ ಇಟ್ಟಿದ್ದು ನಾನೇ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಆದಿತ್ಯರಾವ್​ ಯೂಟ್ಯೂಬ್​ ನೋಡಿ ಬಾಂಬ್​ ತಯಾರಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ಕಳೆದ ಒಂದು ವರ್ಷದಿಂದ ತಯಾರಿ ನಡೆಸಿದ್ದ ಎಂದು ತಿಳಿದುಬಂದಿದೆ.

  ಉಡುಪಿಯ ಮಣಿಪಾಲ್​ ಮೂಲದ ಆದಿತ್ಯರಾವ್​ 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬಾಂಬ್​ ಬೆದರಿಕೆ ಹಾಕಿದ್ದ. ಇದೇ ಆರೋಪದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದ.

  ಉಡುಪಿಯ ಕೆ.ಎಚ್​.ಬಿ ಕಾಲನಿ ಸಮೀಪದ ಆದಿತ್ಯರಾವ್​ ಮನೆ ಇದೆ. ಎಂಬಿಯ ಪದವೀಧರ ಆಗಿರುವ ಆದಿತ್ಯರಾವ್​, ಮಂಗಳೂರಿನ ಹೋಟೆಲ್​ ಒಂದರಲ್ಲಿ ಬಾರ್​ ಆ್ಯಂಡ್​ ರೆಸ್ಟೋರೆಂಟ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈತ ಪದೇ ಪದೆ ಕೆಲಸ ಬದಲಾಯಿಸುತ್ತಿದ್ದ. 2008ರಲ್ಲಿ ಬ್ಯಾಂಕ್​ ಕೆಲಸ ಮಾಡುತ್ತಿದ್ದ. ಬಳಿಕ ಅದನ್ನು ಬಿಟ್ಟು ಸೆಕ್ಯುರಿಟಿ ಗಾರ್ಡ್​ ಆಗಿಯೂ ಕೆಲಸ ಮಾಡುತ್ತಿದ್ದ. ಆದರೆ, ಯಾರೊಂದಿಗೂ ಹೆಚ್ಚು ಮಾತನಾಡದೇ ಒಂಟಿಯಾಗಿರುತ್ತಿದ್ದ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts