More

    ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸ್​ ವಿಚಾರಣೆ ವೇಳೆ ಆರೋಪಿ ಆದಿತ್ಯರಾವ್ ಹೇಳಿದ್ದೇನು?​

    ಬೆಂಗಳೂರು: ಸಮಾಜದ ವ್ಯವಸ್ಥೆಗೆ ಬೇಸತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದಾಗಿ ಆರೋಪಿ ಆದಿತ್ಯರಾವ್​ ಪೊಲೀಸ್​ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.

    ವಿಐಪಿ ಗೆಸ್ಟ್ ಹೌಸ್​ನಲ್ಲಿ ಡಿಸಿಪಿ ನೇತೃತ್ವದಲ್ಲಿ ಆರೋಪಿಯ ವಿಚಾರಣೆ ನಡೆಸಲಾಗಿದ್ದು, ನಾನೇ ಬಾಂಬ್​ ಇಟ್ಟಿದ್ದು ಎಂದು ಒಪ್ಪಿಕೊಂಡಿದ್ದಾನೆ. ಸರಿ ಬಾಂಬ್​ ಇಟ್ಟಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಆದಿತ್ಯ ರಾವ್​, ಸಮಾಜದ ವ್ಯವಸ್ಥೆಗೆ ಬೇಸತ್ತು ಬಾಂಬ್ ಇಟ್ಟಿದ್ದೇನೆ. ಇಲ್ಲಿ ಯಾವ ಸಿಸ್ಟಮ್ ಕೂಡ ಸರಿಯಾಗಿಲ್ಲ ಎಂದು ಹೇಳಿದ್ದಾನೆ.

    ಮಂಗಳವಾರ ರಾತ್ರಿ 8:20ಕ್ಕೆ ಆರೋಪಿ ಆದಿತ್ಯರಾವ್​ ಡಿಜಿ ಐಜಿಪಿ ಕಚೇರಿಗೆ ಬಂದಿದ್ದಾನೆ. ತಕ್ಷಣ ಸ್ವಾಗತ ಕೇಂದ್ರದ ಪೊಲೀಸ್ ಸಿಬ್ಬಂದಿ ಬಳಿ ನಾನು ಆದಿತ್ಯರಾವ್ ಎಂದು ಹೆಸರು ಹೇಳಿದ್ದಾನೆ. ಕರ್ತವ್ಯ ಸಿಬ್ಬಂದಿ ಯಾವ ಆದಿತ್ಯರಾವ್ ಎಂದು ಕೇಳಿದಾಗ, ನಾನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    ಪೊಲೀಸರು ಮೂರು ದಿನಗಳಿಂದ ನನ್ನಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ನಾನೇ ಶರಣಾಗಲು ಬಂದಿದ್ದೇನೆ. ಪೊಲೀಸ್ ಠಾಣೆಗೆ ಹೊದ್ರೆ ನನಗೆ ಭಯ. ಹೀಗಾಗಿ ಡಿಜಿ ಮೇಡಂ ಮುಂದೆ ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ. ಬಳಿಕ ಸ್ವಾಗತ ಕೇಂದ್ರ ಸಿಬ್ಬಂದಿ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ತತ್​​ಕ್ಷಣ ಹಿರಿಯ ಅಧಿಕಾರಿಗಳು ಆರೋಪಿಯನ್ನು ಕೂರಿಸಿ ಫೋಟೋ ಹಾಗೂ ವಿಡಿಯೋ ತೆಗೆದು ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಹಿರಿಯ ಅಧಿಕಾರಿಯ ಮೊಬೈಲ್​ಗೆ ಸಿಬ್ಬಂದಿ ಫೋಟೋ-ವಿಡಿಯೋ ಕಳಿಸಿದ್ದಾರೆ. ಹಿರಿಯ ಅಧಿಕಾರಿ ಈತನೇ ಆದಿತ್ಯ ರಾವ್ ಎಂದು ಖಚಿತಪಡಿಸಿಕೊಂಡಿದ್ದಾರೆ.

    ಇದರ ಬೆನ್ನಲ್ಲೇ ಹಲಸೂರು ಗೇಟ್ ಪೊಲೀಸರು ಡಿಜಿ ಕಚೇರಿಗೆ ಬಂದು ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಆದಿತ್ಯರಾವ್ ಬಳಿ ಇದ್ದ ಬೇಸಿಕ್ ಮೊಬೈಲ್, ಗುರುತಿನ ಚೀಟಿ ಪತ್ರ ಪಡೆದು ಪರಿಶೀಲನೆ ನಡೆಸಿದ ಬಳಿಕ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಗ್ಯೌಪ ಸ್ಥಳಕ್ಕೆ ರವಾನೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts