ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ

ಮಂಗಳೂರು: ಉತ್ತರ ಕರ್ನಾಟಕ್ಕೆ ವಿರೇಂದ್ರ ಹೆಗ್ಗಡೆಯವರು ಅಪಾರ ಕೊಡುಗೆ ನೀಡಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಒಳ್ಳೆಯತನವನ್ನು ನಾವೂ ಕಲಿಯಬೇಕು. ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ ಎಂದು VRL ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ್‌ ಹೇಳಿದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನನ್ನ ಮಗ ಆನಂದ ಸಂಕೇಶ್ವರ್‌ ಹೆಗ್ಗಡೆಯವರ ಜತೆ ಪ್ರವಾಸ ಮಾಡಿ ಅವರ ಜತೆಗಿನ ಅನುಭವಗಳನ್ನು ಹೇಳಿದ್ದಾನೆ. ಎಲ್ಲರಿಗೂ ಹಂಚಿ ತಿನ್ನುವ ಸ್ವಭಾವ ವಿರೇಂದ್ರ ಹೆಗ್ಗಡೆಯವರದ್ದು. ಚಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ದೊಡ್ಡ ಸಾಧನೆ ಸಾಧ್ಯ. ಧರ್ಮಸ್ಥಳಕ್ಕೆ ಬಂದು ನಾವೂ ಒಳ್ಳೆಯ ಚಿಂತನೆ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಕಾರ್ ಮ್ಯೂಸಿಯಂ ನೋಡಿದೆ. ನೋಡಿ ತುಂಬಾ ಸಂತೋಷವಾಗಿದೆ. ಹೆಗ್ಗಡೆಯವರು ಸಮಾಜದ ಕೆಳವರ್ಗದ ಜನರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾವಲಂಬಿ ಜೀವನವನ್ನು ನಡೆಸಲು ಸಹಾಯ ಮಾಡಿದ್ದಾರೆ. ನಾನೂ ಕೂಡ 40 ವರ್ಷಗಳ ಹಿಂದೆ‌ 50 ಸಾವಿರ ರೂ. ಸಾಲ ಪಡೆದವನೆ. ಸಾಲ ಪಡೆಯುವುದು, ಕಟ್ಟುವುದು ಬಹಳ ಕಷ್ಟ. ಸಣ್ಣ ಸಾಲ ಕೊಟ್ಟವರ ಸಂಪರ್ಕ ಈಗಲೂ ಇಟ್ಟುಕೊಂಡಿದ್ದೇನೆ. ಈಗ ಸಾವಿರ ಕೋಟಿ ಸಾಲ ಕೊಡುವವರೂ ಇದ್ದಾರೆ. ಶೇ. 99.8 ಸಾಲದ ರಿಕವರಿ ನೋಡಿದ್ದು ಧರ್ಮಸ್ಥಳದಲ್ಲಿ ಮಾತ್ರ ಎಂದರು.

86ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

ಲಕ್ಷದೀಪೋತ್ಸವದ ಪ್ರಯುಕ್ತ 86ನೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಅಧ್ಯಕ್ಷತೆಯನ್ನ ಸಾಹಿತಿ ಪ್ರೊ.ಟಿ.ಪಿ.ಅಶೋಕ್ ವಹಿಸಿದ್ದರು. ಡಾ.ವಿಜಯ ಸಂಕೇಶ್ವರ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧರ್ಮಸ್ಥಳ ಧರ್ಮಾಧಿಕಾರಿಯಾಗಿ ಪಟ್ಟಾಭಿಷಕ್ತರಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವೀರೇಂದ್ರ ಹೆಗ್ಗಡೆಯವರ ಸಾಧನೆ ಕುರಿತ ಸುವರ್ಣ ಸಂಚಯ ಪುಸ್ತಕವನ್ನು ಡಾ.ವಿಜಯ ಸಂಕೇಶ್ವರ ಅವರು ಬಿಡುಗಡೆ ಮಾಡಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *