ಪ್ರೀತಿ, ವಿಶ್ವಾಸದಿಂದ ಯಶಸ್ಸುರೋಟರಿ ಕ್ಲಬ್ ದೇರಳಕಟ್ಟೆ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಡಾ.ದೇವದಾಸ್ ರೈ

2 Min Read
ಪ್ರೀತಿ, ವಿಶ್ವಾಸದಿಂದ ಯಶಸ್ಸುರೋಟರಿ ಕ್ಲಬ್ ದೇರಳಕಟ್ಟೆ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಡಾ.ದೇವದಾಸ್ ರೈ

ಮಂಗಳೂರು: ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾರ್ಯನಿರ್ವಹಿಸಿದರೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ದೇವದಾಸ್ ರೈ ಅಭಿಪ್ರಾಯ ಪಟ್ಟರು.


ತೊಕ್ಕೊಟ್ಟು ಪ್ರದೇಶದ ಗಟ್ಟಿ ಸಮಾಜದ ಸಭಾಂಗಣದಲ್ಲಿ ಶನಿವಾರ ಜರಗಿದ ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣದ ವಿಧಿ ವಿಧಾನವನ್ನು ನೇರವೇರಿಸಿ, ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಿ, ಯಶಸ್ಸು ಕೋರಿದರು.


ಲೇಖಕಿ ಹಾಗೂ ಸಂಪಾದಕಿ ಭಾರತಿ ಶೇವಗುರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆರ್ಥಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ರೋಟರಿ ಸಂಸ್ಥೆಯು ಸಲ್ಲಿಸುವ ನಿಸ್ವಾರ್ಥ ಸೇವಾ ಮನೋಭಾವ ಪ್ರಶಂಸನೀಯ ಎಂದರು.


ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ.ರಂಜನ್ ಸಂಸ್ಥೆಯ ವಾರ್ತಾ ಪತ್ರಿಕೆ ನ್ಯೂ ಹೋರೈಜನ್ಸ್ ಬಿಡುಗಡೆಗೊಳಿಸಿ ಸಂಸ್ಥೆಯ ಚಟುವಟಿಕೆಗಳಿಗೆ ತಮ್ಮ ಪೂರ್ಣ ಸಹಕಾರ ನೀಡುವ ಆಶ್ವಾಸನೆ ನೀಡಿದರು.


ನಿರ್ಗಮನ ಅಧ್ಯಕ್ಷೆ ಲತಾ ವಿಕ್ರಮ್ ಸ್ವಾಗತಿಸಿ, ತಮ್ಮ ಆಡಳಿತ ಅಧಿಕಾರವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಸುಜಾತ ಶೆಟ್ಟಿಯವರು ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ನೂತನ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿದ ಸೌಮ್ಯ ಶೆಟ್ಟಿ ಅವರು ಪ್ರಸ್ತುತ ಸಾಲಿನಲ್ಲಿ ಹಲವಾರು ಜನಪರ ಸೇವಾ ಯೋಜನೆಗಳನ್ನು ಹಮ್ಮಿಗೊಂಡಿದ್ದು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವಸದಸ್ಯರ ಸಹಕಾರ ಕೋರಿದರು.


ನೂತನ ಕಾರ್ಯದರ್ಶಿ ಡಾ.ಅನಿತಾ ರವಿಶಂಕರ್ ಸಂಸ್ಥೆಯು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹರಿದಾಸ್ ಮತ್ತು ಅರುಣಾ ಶೆಟ್ಟಿಯವರನ್ನು ನೂತನ ಸದಸ್ಯರಾಗಿ ಸಂಸ್ಥೆಗೆ ಸೇರ್ಪಡಿಸಲಾಯಿತು. ಪಿ.ಡಿ. ಶೆಟ್ಟಿಯವರು ಪದಾಧಿಕಾರಿಗಳ ಪರಿಚಯ ನೀಡಿದರು. ಜೆ.ಪಿ. ರೈ ಯವರು ಆಮಂತ್ರಿತ ಅತಿಥಿಗಳ ಉಪಸ್ಥಿತಿಯನ್ನು ಗುರುತಿಸಿದರು. ಚುನಾಯಿತ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಮಾಜಿ ಅಧ್ಯಕ್ಷೆ ತಿ ಸೀತಾಲಕ್ಷ್ಮಿ, ವಲಯ ಅಧಿಕಾರಿ ಡಾ. ಯತೀಶ್ ಉಪಸ್ಥಿತರಿದ್ದರು. ತಪಸ್ಯಾ ರವಿಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ವಂದಿಸಿದರು.

See also  ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!


ನೂತನ ಪದಾಧಿಕಾರಿಗಳು
ಉಪಾಧ್ಯಕ್ಷೆ ಪ್ರಫುಲ್ಲ ರೈ, ಕೋಶಾಧಿಕಾರಿ ಜೆ.ಪಿ. ರೈ, ದಂಡಾಧಿಕಾರಿ ರೂಪಾ ಶೆಟ್ಟಿ, ನಿರ್ದೇಶಕರು : ಕ್ಲಬ್ ಸೇವೆ ಸುಜಾತ ಶೆಟ್ಟಿ, ವೃತಿಪರ ಸೇವೆ ವಾಣಿ ಲೋಕಯ್ಯ, ಸಮುದಾಯ ಸೇವೆ ಪ್ರಭಾಕರ್ ರೈ, ಅಂತರಾಷ್ಟ್ರೀಯ ಸೇವೆ ಡಾ.ಅನಂತನ್, ಯುವಜನ ಸೇವೆ ಪ್ರಸಾದ್ ಆಳ್ವ.

Share This Article