ಜನ ಸಾಮಾನ್ಯರು ಮೆಚ್ಚುವ ಪುಸ್ತಕ ಪ್ರಕೃತಿಯೇ ಮಹಾಮಾತೆ ಕೃತಿ ಬಿಡುಗಡೆಗೊಳಿಸಿ ಡಾ.ದೇವರಾಜ್ ಅಭಿಮತ

ಮಂಗಳೂರು:‘ಪ್ರಕೃತಿಯೇ ಮಹಾಮಾತೆ’ ಜನ ಸಾಮಾನ್ಯರು, ಪ್ರಕೃತಿಯ ಕಾಳಜಿ ಇರುವವರು ಮೆಚ್ಚುವ ಕೃತಿಯಾಗಿದೆ. ಪರಿಸರಕ್ಕೆ ಸಂಬಂಧಿಸಿದ ಲೇಖನಗಳು ಇದರಲ್ಲಿವೆ ಎಂದು ಎಸ್‌ಡಿಎಂ ಪಿ.ಜಿ. ಸೆಂಟರ್‌ನ ನಿರ್ದೇಶಕ ಡಾ.ದೇವರಾಜ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಅಮೃತ ಪ್ರಕಾಶ ಪತ್ರಿಕೆಯ ಸಾರಥ್ಯದಲ್ಲಿ ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಅವರ ‘ಪ್ರಕೃತಿಯೇ ಮಹಾಮಾತೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರು ಅಧ್ಯಯನ ಶೀಲರಾಗಿದ್ದು, ಗ್ರಂಥಾಲಯಗಳಿಗೆ ತೆರಳಿ ಹೆಚ್ಚಿನ ಓದುವಿಕೆಯನ್ನು ಮೈಗೂಡಿಸಿಕೊಂಡ ಕಾರಣದಿಂದ ಅವರು … Continue reading ಜನ ಸಾಮಾನ್ಯರು ಮೆಚ್ಚುವ ಪುಸ್ತಕ ಪ್ರಕೃತಿಯೇ ಮಹಾಮಾತೆ ಕೃತಿ ಬಿಡುಗಡೆಗೊಳಿಸಿ ಡಾ.ದೇವರಾಜ್ ಅಭಿಮತ