ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಶನಿವಾರ ಮಧ್ಯಾಹ್ನ ವೈಭವದ ರಥಾರೋಹಣ,ರಾತ್ರಿ ವೈಭವದ ರಥೋತ್ಸವ ನೆರವೇರಿತು.
ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ದೇವಿಯ ಉತ್ಸವ ಮೂರ್ತಿಯನ್ನು ನಾದಸ್ವರ, ಚೆಂಡೆ ಬಿರುದು ಬಾವಲಿಗಳೊಂದಿಗೆ ಕ್ಷೇತ್ರದ ರಥ ಬೀದಿಯಲ್ಲಿ ಸರ್ವಾಲಂಕೃತ ತೇರಿನತ್ತ ಕರೆತರಲಾಯಿತು. ಬಳಿಕ ರಥಾರೋಹಣಕ್ಕೆ ಸಂಬಂಧಿಸಿದ ವಿವಿಧ ವೈದಿಕ ವಿಧಿ ವಿಧಾನಗಳು ನೆರವೇರಿತು. ಕೊನೆಯಲ್ಲಿ ದೇವಿ ಉತ್ಸವ ಮೂರ್ತಿಯನ್ನು ರಥದಲ್ಲಿ ವಿರಾಜಮಾನಳಾಗುವಂತೆ ಇರಿಸಲಾಯಿತು. ರಥಾರೋಹಣದ ಈ ಮಹಾ ವೈಭವಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು. ಸಂಜೆಯವರೆಗೆ ರಥದಲ್ಲಿದ್ದು ಭಕ್ತರಿಗೆ ಹರಸಿದ ದೇವಿಯ ರಥೋತ್ಸವ ರಾತ್ರಿ ನೆರವೇರಿತು.
ಇದಕ್ಕೂ ಮುನ್ನ ದೇವಳದಲ್ಲಿ ಬೆಳಗ್ಗೆ ಪ್ರಾತಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಪೂಜೆಯಾಗಿ ರಥಾರೋಹಣ ಅನಂತರ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ರಥೋತ್ಸವ, ಬಲಿ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ, ಶಯನ ನಡೆಯಿತು.
* ಇಂದು ಅವಭೃತ ಸ್ನಾನ: 23 ರಂದು ಬೆಳಗ್ಗೆ ಸೂರ್ಯೋದಯಕ್ಕೆ ಕವಾಟೊದ್ಘಾಟನೆ ನಡೆಯಲಿರುವುದು, ಸಾಯಂಕಾಲ 7ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ. 24ರಂದು ಸಂಪ್ರೋಕ್ಷಣೆ, ರಾತ್ರಿ ಗಂಟೆ 8.30ಕ್ಕೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿರುವುದು,