24.9 C
Bangalore
Wednesday, December 11, 2019

ಲಕ್ಷದ್ವೀಪ ವಹಿವಾಟಿಗೆ ವಾಣಿಜ್ಯ ದಕ್ಕೆ

Latest News

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಹುಣಸೂರು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಮೊದಲೇ ಘೋಷಿಸಿದ್ದೆ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್​.ವಿಶ್ವನಾಥ್​ ಅವರನ್ನು ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದು ಶಾಸಕ...

ಹರೀಶ್ ಮೋಟುಕಾನ, ಮಂಗಳೂರು
ಮಂಗಳೂರು-ಲಕ್ಷದ್ವೀಪ ನಡುವಿನ ವ್ಯವಹಾರವನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ 65 ಕೋಟಿ ರೂ. ವೆಚ್ಚದಲ್ಲಿ ಬೆಂಗರೆಯಲ್ಲಿ ವಾಣಿಜ್ಯ ದಕ್ಕೆ ನಿರ್ಮಾಣವಾಗಲಿದೆ. ಇದಕ್ಕೆ ಸಿಆರ್‌ಜಡ್ ಹಾಗೂ ಪರಿಸರ ಇಲಾಖೆಯಿಂದ ಶೀಘ್ರದಲ್ಲೇ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಸಾಗರಮಾಲ ಯೋಜನೆಯಡಿ ವಾಣಿಜ್ಯ ದಕ್ಕೆ ನಿರ್ಮಾಣವಾಗಲಿದ್ದು, ಕೇಂದ್ರ ಸರ್ಕಾರ 25 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 40 ಕೋಟಿ ರೂ. ವ್ಯಯಿಸಲಿದೆ. ಕೇಂದ್ರ ಸರ್ಕಾರ ಈಗಾಗಲೇ 12.50 ಕೋಟಿ ರೂ. ಬಿಡುಗಡೆಗೊಳಿಸಿದೆ. ಇದರ ವಿನ್ಯಾಸ ರಚಿಸಲಾಗಿದೆ. ಎಲ್ಲ ಪೂರಕ ಪ್ರಕ್ರಿಯೆಗಳನ್ನು ಕ್ಷಿಪ್ರವಾಗಿ ನಡೆಸಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಬಂದರು ಇಲಾಖೆ ಶ್ರಮಿಸುತ್ತಿದೆ.

ಶೀಘ್ರ ಟೆಂಡರ್ ಪ್ರಕ್ರಿಯೆ: ಬೆಂಗರೆಯಲ್ಲಿ 350 ಮೀಟರ್ ಉದ್ದದ ಜೆಟ್ಟಿ, 500 ಮೀಟರ್ ಉದ್ದದ ಮುಖ್ಯ ಸಂಪರ್ಕ ರಸ್ತೆ, 490 ಚದರ ಮೀಟರ್‌ನ ಪ್ರಯಾಣಿಕರ ವಿಶ್ರಾಂತಿ ಕೊಠಡಿ, 440 ಚದರ ಮೀಟರ್‌ನ 2 ಗೋದಾಮು ಕಟ್ಟಡ, 1 ಸಾರ್ವಜನಿಕ ಶೌಚಾಲಯ, ಆವರಣ ಗೋಡೆ, ಜೆಟ್ಟಿ ಮುಂಭಾಗ 7 ಮೀಟರ್ ಡ್ರೆಜ್ಜಿಂಗ್ ಕಾಮಗಾರಿ ನಡೆಯಲಿದೆ.

ಪ್ರಸ್ತುತ ಸಿಆರ್‌ಜಡ್ ಹಾಗೂ ಪರಿಸರ ಇಲಾಖೆಯ ಪರಿಶೀಲನೆ ಅಂತಿಮ ಹಂತದಲ್ಲಿದ್ದು, ಕ್ಲಿಯರೆನ್ಸ್ ಸಿಕ್ಕಿದ ಕೂಡಲೇ ಜಾಗತಿಕ ಟೆಂಡರ್ ಆಗಲಿದೆ. ಟೆಂಡರ್ ವಹಿಸಿಕೊಳ್ಳುವ ಕಂಪನಿ ಕಾಮಗಾರಿ ಆರಂಭಿಸಲಿದೆ ಎಂದು ಬಂದರು ಇಲಾಖೆಯ ಸಹಾಯಕ ಇಂಜಿನಿಯರ್ ಮನೋಹರ ಆಚಾರ್ಯ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಆರ್ಥಿಕಾಭಿವೃದ್ಧಿಗೆ ಪೂರಕ:  ಸ್ವಾತಂತ್ರೃ ಪೂರ್ವದಲ್ಲೇ ಲಕ್ಷದ್ವೀಪ ಮಂಗಳೂರು ಜತೆ ನಂಟು ಹೊಂದಿತ್ತು. ಈಗಲೂ ಆ ನಂಟು ಮುಂದುವರಿದಿದೆ. ವ್ಯಾಪಾರ, ಆರೋಗ್ಯ, ಶಿಕ್ಷಣ ಮೊದಲಾದವುಗಳಿಗೆ ದ್ವೀಪದ ಜನರು ಮಂಗಳೂರನ್ನು ಅವಲಂಬಿಸಿದ್ದಾರೆ. ಆದರೆ, ಸುಸಜ್ಜಿತ ಜೆಟ್ಟಿಯ ಅವಶ್ಯಕತೆ ಇತ್ತು. ವಾಣಿಜ್ಯ ದಕ್ಕೆ ನಿರ್ಮಾಣದ ಬಳಿಕ ಈ ಕೊರತೆ ನೀಗಲಿದೆ. 7 ಮೀಟರ್ ಡ್ರೆಜ್ಜಿಂಗ್ ನಡೆದರೆ ಮಿನಿ ನೌಕೆಗಳು ಆತಂಕವಿಲ್ಲದೆ ಬಂದು ಹೋಗಬಹುದು. ಹೂಳು ತುಂಬಿರುವುದರಿಂದ ಪ್ರಸ್ತುತ ಇಂತಹ ನೌಕೆಗಳಲ್ಲಿ ಅರ್ಧದಷ್ಟು ಮಾತ್ರ ಸರಕುಗಳನ್ನು ತುಂಬಿಸಲಾಗುತ್ತದೆ. ಹೆಚ್ಚಿನ ತೂಕ ಹಾಕಿದರೆ ನೆಲ ತಾಗುತ್ತದೆ. ಅರ್ಧದಷ್ಟು ಸಾಮಗ್ರಿಗಳ ಸಾಗಾಟ ನೌಕೆಗಳಿಗೆ ಆರ್ಥಿಕ ಲಾಭ ತರುವುದಿಲ್ಲ. ಪ್ರಸ್ತುತ ಶೇ.75ರಷ್ಟು ಮಿನಿ ನೌಕೆಗಳು ಕೇರಳದತ್ತ ಮುಖ ಮಾಡಿದ್ದು, ಅಲ್ಲಿಂದಲೇ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿವೆ. ಹೊಸ ಜೆಟ್ಟಿ ನಿರ್ಮಾಣ ಮೂಲಕ ಲಕ್ಷದ್ವೀಪದ ವ್ಯವಹಾರ ವೃದ್ಧಿಯಾಗಿ ಮಂಗಳೂರಿನ ಆರ್ಥಿಕಾಭಿವೃದ್ಧಿಗೆ ಪೂರಕವಾಗಲಿದೆ. ಪ್ರವಾಸೋದ್ಯಮವೂ ಬೆಳೆಯಲಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಜೆ.ಆರ್.ಲೋಬೊ ಶಾಸಕರಾಗಿದ್ದ ಸಂದರ್ಭ ಲಕ್ಷದ್ವೀಪ-ಮಂಗಳೂರು ನಡುವೆ ವ್ಯಾಪಾರ ಬಾಂಧವ್ಯ ವೃದ್ಧಿಸಲು ಶ್ರಮ ವಹಿಸಿದ್ದರು. ನಿಯೋಗ ತೆರಳಿ ಲಕ್ಷದ್ವೀಪದ ಆಡಳಿತದ ಜತೆ ಮಾತುಕತೆ ನಡೆಸಿದ್ದರು. ಶೀಘ್ರದಲ್ಲೇ ಜೆಟ್ಟಿ ನಿರ್ಮಾಣಕ್ಕೆ ಸರ್ಕಾರಕ್ಕೆ ಒತ್ತಡ ಹಾಕಿದ್ದರು.

ಬೆಂಗರೆಯಲ್ಲಿ ವಾಣಿಜ್ಯ ದಕ್ಕೆ ನಿರ್ಮಾಣ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಸಿಆರ್‌ಜಡ್ ಮತ್ತು ಪರಿಸರ ಇಲಾಖೆಯಿಂದ ಒಪ್ಪಿಗೆಯ ನಿರೀಕ್ಷೆ ಹೊಂದಲಾಗಿದೆ. ಬಳಿಕ ಜಾಗತಿಕ ಟೆಂಡರ್ ನಡೆದು ಕಾಮಗಾರಿ ಆರಂಭಗೊಳ್ಳಲಿದೆ. ಇದರಿಂದ ಮಂಗಳೂರು-ಲಕ್ಷದ್ವೀಪದ ನಡುವೆ ವ್ಯಾಪಾರ, ವಹಿವಾಟು ಹೆಚ್ಚಳವಾಗಿ ಆರ್ಥಿಕ ಅಭಿವೃದ್ಧಿಯಾಗಲಿದೆ.
ಮನೋಹರ ಆಚಾರ್ಯ ವಿ.ಕೆ., ಸಹಾಯಕ ಇಂಜಿನಿಯರ್, ಬಂದರು ಇಲಾಖೆ

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...