More

    ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್: ಸರ್ಕಾರಕ್ಕೆ ವರದಿ ಸಲ್ಲಿಕೆ, ಬಾಂಬರ್​ ಜತೆ ಸ್ಥಳ ಮಹಜರು ಮಾಡಲಿರುವ ಪೊಲೀಸರು

    ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಐಆರ್ ವರದಿ ಸಲ್ಲಿಕೆಯಾಗಿದೆ.

    ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಇಲಾಖೆ ಸುದೀರ್ಘ ವರದಿ ಸಲ್ಲಿಸಿದೆ. ಇಂದು ಸಂಜೆ ಒಳಗೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರ ವರದಿಯನ್ನು ರವಾನಿಸಲಿದೆ.

    ಬಾಂಬ್​ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಂಬರ್​ ಆದಿತ್ಯರಾವ್ ತನಿಖೆ ಇನ್ನು ಮುಂದುವರಿಯುತ್ತಿದೆ. ಫಿಂಗರ್ ಪ್ರಿಂಟ್ ಸಂಗ್ರಹಿಸಿ, ಎಲ್ಲ ವಿಧದಲ್ಲೂ ತನಿಖಾಧಿಕಾರಿಗಳು ಫೋಟೋ ತೆಗೆದಿದ್ದಾರೆ.

    ಬಾಂಬ್ ಇಟ್ಟ ಸ್ಥಳಮಹಜರು ಪ್ರಕ್ರಿಯೆಯನ್ನು ಪೊಲೀಸರು ಇಂದು ನಡೆಸಲಿದ್ದಾರೆ. ಮಂಗಳೂರು ಏರ್ ಪೋರ್ಟ್ ಮತ್ತು ಸುತ್ತ ಮಹಜರು ನಡೆಸಲಿದ್ದಾರೆ.

    ಅಲ್ಲದೆ ಬಾಂಬರ್​ ಆದಿತ್ಯರಾವ್ ಕೆಲಸ ಮಾಡಿರುವ ಹೊಟೇಲ್​ನಲ್ಲಿಯೂ ಮಹಜರು ನಡೆಸಲಾಗುತ್ತದೆ. ನಗರದ ಬಲ್ಮಠದ ಕ್ವಾಲಿಟಿ ಕುಡ್ಲ ಹೊಟೇಲ್​ಗೆ ಬಾಂಬರ್​ ಆದಿತ್ಯರಾವ್​ನನ್ನು ಕರೆತಂದು ಸ್ಥಳ ಮಹಜರು ನಡೆಸಲಾಗುತ್ತದೆ.

    ಪೊಲೀಸರ ಕಸ್ಟಡಿಯಲ್ಲಿರುವ ಬಾಂಬರ್ ಆದಿತ್ಯರಾವ್​ನನ್ನು ಸ್ಥಳ ಮಹಜರಿಗೆ ಉಡುಪಿಗೂ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts