ಎಂಡಿಎಂಎ ಮಾದಕ ವಸ್ತು ಮಾರಾಟ ಆರು ಮಂದಿಯ ಬಂಧನ

blank

 

ಮಂಗಳೂರು: ನಗರದಲ್ಲಿ ನಿಷೇಧಿತ ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ನಗರ ಬಂದರು ಠಾಣಾ ಪೊಲೀಸರು ಬಂಧಿಸಿ, ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಂಡೇಶ್ವರ ಗ್ರೀನ್‌ಲ್ಯಾಂಡ್ ಲೇಔಟ್ ನಿವಾಸಿ ಧನಿಶ್ ಡಿ. ಕಾಂಚನ್ (19), ಪಾಂಡೇಶ್ವರ ನಿವಾಸಿ ಪೃಥ್ವಿಕ್ (18), ಬಾವುಟಗುಡ್ಡ ನಿವಾಸಿ ೈಜ್ ಅಂಬರ್ (23), ಜಲ್ಲಿಗುಡ್ಡೆ ನಿವಾಸಿ ತುಷಾನ್ ಡಿ. ಸುವರ್ಣ (19), ಳ್ನೀರ್ ನಿವಾಸಿ ಮೊಹಮ್ಮದ್ ರಾಜಿನ್ (21), ಳ್ನೀರ್ ಸ್ಟರಕ್ ರೋಡ್ ನಿವಾಸಿ ಮೊಹಮ್ಮದ್ ಅ್ಘಾನ್ (20) ಬಂಧಿತ ಆರೋಪಿಗಳು.

ಆರೋಪಿಗಳಿಂದ 20.52ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಕಾರು-1, ಆಕ್ಟೀವಾ ಸ್ಕೂಟರ್ -1 ಸೇರಿದಂತೆ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ೆ.8ರಂದು ಸಂಜೆ 5.30ರ ಸುಮಾರಿಗೆ ಳ್ನೀರ್ ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ಒಂದು ಕಾರು ಮತ್ತು ದ್ವಿಚಕ್ರ ವಾಹನದಲ್ಲಿ 6 ಮಂದಿ ಯುವಕರು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಹಿನ್ನಲೆಯಲ್ಲಿ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಗೆ ಯತ್ನಿಸಿದಾಗ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಸಂದರ್ಭ ಆರೋಪಿಗಳನ್ನು ವಿಚಾರಿಸಿದಾಗ ಧನಿಶ್ ಡಿ. ಕಾಂಚನ್ ಎಂಬಾತ ತನಗೆ ಬೆಂಗಳೂರಿನ ವಾಸಿ ರಿಶಾನ್ ಎಂಬಾತನು ಸುರತ್ಕಲ್‌ನ ೈಜಲ್ ಎಂಬಾತನಿಗೆ ಮಾದಕ ವಸ್ತು ಎಂಡಿಎಂಎ ನೀಡಿದ್ದನ್ನು ಮಾರಾಟ ಮಾಡಲು ೈಜಲ್ ತನಗೆ ಮಂಗಳೂರಿನ ರೈಲ್ವೇ ಸ್ಟೇಷನ್ ಬಳಿಯಲ್ಲಿ ನೀಡಿದ್ದನ್ನು ಪಡೆದುಕೊಂಡು ಬಂದಿದ್ದಾನೆ. ಬಳಿಕ ಇತರರ ಜತೆ ಸೇರಿ ಮಾರಾಟ ಮಾಡಲು ನಿರ್ಧರಿಸಿದ್ದರು. ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article

ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್​ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್​ | Summer Tips

Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು? Health Tips

Health Tips: ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ. ಇದು…