28 C
Bengaluru
Thursday, January 23, 2020

ಮಂಗಳೂರು ದಸರಾ ಸಂಪನ್ನ

Latest News

ಸಾರ್ವಜನಿಕರ ಎದುರು ರೆವೆನ್ಯೂ ಇನ್ಸ್​ಪೆಕ್ಟೆರ್​ಗೆ ಕಪಾಳ ಮೋಕ್ಷ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಪ್ರವಾಹ ವೇಳೆ ಜಿಲ್ಲಾಡಳಿತ ವರ್ತಕರಿಂದ ಖರೀದಿಸಿದ್ದ ಪಡಿತರಕ್ಕೆ ಹಣ ಪಾವತಿ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರ ಎದುರು ರೆವೆನ್ಯೂ ಇನ್ಸ್​ಪೆಕ್ಟರ್​ಗೆ ಕಪಾಳ...

ಇ-ಕೆವೈಸಿ ಸರ್ವರ್ ಸಮಸ್ಯೆ ಸರಿಪಡಿಸಲು ಆಗ್ರಹ

ಬೆಳಗಾವಿ: ಆಧಾರ್ ಸಂಖ್ಯೆ ಮೂಲಕ ಗ್ರಾಹಕರ ಮಾಹಿತಿ ಪಡೆಯುವ (ಇ-ಕೆವೈಸಿ) ವ್ಯವಸ್ಥೆಗೆ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ...

ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳಿ

ಅಥಣಿ: ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳಬೇಕು. ಸಾರಿಗೆ ಘಟಕಕ್ಕೆ ಆದಾಯದ ಮೂಲವಾಗಿರುವುದರಿಂದ ಮಳಿಗೆ ನಿರ್ಮಾಣದಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರ ವಹಿಸಬೇಕು ಎಂದು ಡಿಸಿಎಂ...

ಆಸ್ಸಾಂನಲ್ಲಿ 644 ಉಗ್ರರು ಪೊಲೀಸರಿಗೆ ಶರಣು; ರಾಜ್ಯದ ಅಭಿವೃದ್ಧಿಗಾಗಿ ಮುಖ್ಯವಾಹಿನಿಗೆ ಬಂದ ಇವರೆಲ್ಲರ ಬಗ್ಗೆ ಸಂತೋಷವಿದೆ ಎಂದ್ರು ಸಿಎಂ

ಗುವಾಹಟಿ: ಆಸ್ಸಾಂನಲ್ಲಿ ಇಂದು ಎಂಟು ಉಗ್ರ ಸಂಘಟನೆಗಳ ಒಟ್ಟು 644 ಉಗ್ರರು ಶರಣಾಗಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಔಪಚಾರಿಕವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುಎಲ್​ಎಫ್​ಎ(ಐ), ಎನ್​ಡಿಎಫ್​ಬಿ, ಆರ್​ಎನ್​ಎಲ್​ಎಫ್​, ಕೆಎಲ್​ಒ, ಸಿಪಿಐ(ಮಾವೋವಾದಿ),...

ರಾಮನಗರದ ಎಸಿ ನೀಡಿದ ಸುಳ್ಳು ವರದಿ ಹಿಡಿದುಕೊಂಡು ನನ್ನ ವಿರುದ್ಧ ಗೋಮಾಳ ಕಬಳಿಕೆ ಆರೋಪ ಮಾಡುತ್ತಿದ್ದಾರೆ: ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು : ರಾಮನಗರದ ವಿಭಾಗಾಧಿಕಾರಿಯಾಗಿದ್ದ ಸಿದ್ದಪ್ಪ ನನ್ನ ಮೇಲೆ ಕೋಪಗೊಂಡು ಸುಳ್ಳು ವರದಿ ಕೊಟ್ಟು ಹೋಗಿದ್ದಾರೆ. ಇದನ್ನು ಹಿಡಿದುಕೊಂಡು ಸಾಮಾಜಿಕ ಕಾರ್ಯಕರ್ತರಾದ ಹಿರೇಮಠ್​...

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬೀದಿಯುದ್ದಕ್ಕೂ ಝಗಮಗಿಸುವ ವಿದ್ಯುತ್ ದೀಪ, ತಾಸೆ ಪೆಟ್ಟಿಗೆ ಕುಣಿಯುವ ಹುಲಿ ವೇಷಧಾರಿಗಳ ತಂಡ, ವೈವಿಧ್ಯಮಯ ಕಥೆ, ಘಟನೆಗಳನ್ನು ಪ್ರಸ್ತುತಪಡಿಸುವ ಸ್ತಬ್ಧಚಿತ್ರಗಳು ಹಿಂದಿನಿಂದ ಸರ್ವಾಲಂಕೃತ ವಾಹನದಲ್ಲಿ ಸಾಗಿ ಬರುವ ಶಾರದಾ ಮೂರ್ತಿ, ನವದುರ್ಗೆಯರು…ಭಕ್ತ ವೃಂದದ ಜಯಕಾರ…
– ಇದು ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಆರಂಭಗೊಂಡ ಮಂಗಳೂರು ದಸರಾ ಮೆರವಣಿಗೆಯ ವೈಭವ.
ನವದುರ್ಗೆಯರ ಸಂಭ್ರಮದ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಕುದ್ರೋಳಿ ದೇವಸ್ಥಾನದಿಂದ ಎಂ.ಜಿ.ರೋಡ್‌ವರೆಗೆ ಜನ ಸಾಗರವೇ ನೆರೆದಿತ್ತು. ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ ಶಿವಪೂಜೆ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವಗಳು ನಡೆದು ಶಾರದಾ ಮೂರ್ತಿ ವಿಸರ್ಜನೆಗೆ ಚಾಲನೆ ನೀಡಲಾಯಿತು.
‘ಗೋವಿಂದಾ ಅನ್ನಿ ಗೋವಿಂದ’ ಎನ್ನುವ ಭಕ್ತ ಸಮೂಹದ ಜಯಘೋಷದೊಂದಿಗೆ ಮಹಾಗಣಪತಿಯ ವಿಗ್ರಹಕ್ಕೆ ಪೂಜೆ ನೆರವೇರಿಸಿ ಶೋಭಾಯಾತ್ರೆಯ ಮುಂಚೂಣಿಯ ಅಲಂಕೃತ ವಾಹನದಲ್ಲಿ ಇರಿಸಲಾಯಿತು. ಬಳಿಕ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಲಾರಿಗಳಲ್ಲಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿಯರೊಂದಿಗೆ ಶಾರದಾ ಮಾತೆ ಮತ್ತು ನಾರಾಯಣಗುರುಗಳ ಚಿತ್ರಗಳನ್ನು ಇಟ್ಟು ಮೆರವಣಿಗೆ ಆರಂಭಿಸಲಾಯಿತು. ದೇವಿಯರ ವಿಗ್ರಹ ಮಂಟಪದಿಂದ ಹೊರ ತರುತ್ತಿದ್ದಂತೆ ಸೇರಿದ್ದ ಭಕ್ತ ಸಮೂಹ ಜಯಘೋಷ ಹೊರಡಿಸಿದರು.
ಕ್ಷೇತ್ರ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು. ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರು, ಕೆ.ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿಯ ಜಯ ಸಿ.ಸುವರ್ಣ, ಊರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ. ಸುವರ್ಣ ಮತ್ತಿತರರಿದ್ದರು.

ವರ್ಣಾಲಂಕೃತ ಮೆರವಣಿಗೆ:  ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಿಸಿಕೊಳ್ಳುತ್ತಿರುವ ಮಂಗಳೂರು ದಸರಾ ಮೆರವಣಿಗೆ ಈ ಬಾರಿಯೂ ಜನತೆ ಸಂಭ್ರಮ ಸಡಗರಗಳಿಂದ ಪಾಲ್ಗೊಳ್ಳುವಂತೆ ಮಾಡಿತು. ಮೆರವಣಿಗೆ ಸಾಗಿ ಬರುವ ಬೀದಿಗಳೆಲ್ಲವೂ ವರ್ಣರಂಜಿತ ದೀಪಗಳ ಸಾಲು, ನಾರಾಯಣಗುರು ಭಾವಚಿತ್ರವಿರುವ ಹಳದಿ ಬಣ್ಣದ ಪತಾಕೆಗಳ ತೋರಣ, ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ ಆವರಿಸಿತ್ತು. ಸಾಲುಸಾಲು ಕೇರಳ ಶೈಲಿ ಕೊಡೆಗಳು, ವಿವಿಧ ಬೊಂಬೆಗಳು, ಕರ್ನಾಟಕದ ಜಾನಪದ ವೈವಿಧ್ಯ ಸಾರುವ ಡೊಳ್ಳುಕುಣಿತ, ನರ್ತನಗಳೊಂದಿಗೆ ಕೇರಳ ಚೆಂಡೆ, ಸ್ಥಳೀಯ ಚೆಂಡೆಗಳು, ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕತೆಗಳ ಸಂದರ್ಭಗಳನ್ನು ವ್ಯಕ್ತಪಡಿಸುವ 75ಕ್ಕೂ ಹೆಚ್ಚು ಸ್ತಬ್ಧಚಿತ್ರ, ಬ್ಯಾಂಡ್‌ಸೆಟ್‌ಗಳು ಮೆರವಣಿಗೆ ಹುರುಪು ಹೆಚ್ಚಿಸಿದವು. ಮೆರವಣಿಗೆಯಲ್ಲಿ ಸೇರಿದವರಲ್ಲದೆ ಇಕ್ಕೆಲಗಳಲ್ಲಿರುವ ಕಟ್ಟಡಗಳಲ್ಲೂ ಜನ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. 100ಕ್ಕೂ ಅಧಿಕ ವೇಷಭೂಷಣ, ವಾದ್ಯಮೇಳ ತಂಡ, ಭಜನಾ ತಂಡಗಳು, ಗೊಂಬೆ ಕುಣಿತದ ತಂಡಗಳು, ಹುಲಿ ಕುಣಿದ ತಂಡ, ಭಾಗವಹಿಸಿದ್ದವು. ವಿವಿಧೆಡೆ ಆರ್ಕೆಸ್ಟ್ರಾ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಂಜಾನೆ ವಿಸರ್ಜನೆ:  ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಭಾಗ್, ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ವಿ.ವಿ.ಕಾಲೇಜು, ಜಿ.ಎಚ್.ಎಸ್.ರಸ್ತೆ, ರಥಬೀದಿ, ಅಳಕೆ ಮೂಲಕ ಸುಮಾರು 9 ಕಿ.ಮೀ. ಸಾಗಿ ಮತ್ತೆ ಕುದ್ರೋಳಿ ಕ್ಷೇತ್ರ ತಲುಪುವಾಗ ಮುಂಜಾನೆಯಾಗುತ್ತದೆ. 9 ದಿನ ಲಕ್ಷಾಂತರ ಭಕ್ತರ ಪೂಜೆ-ಪುನಸ್ಕಾರ ಸ್ವೀಕರಿಸಿದ ನವ ದುರ್ಗೆಯರ ಮೂರ್ತಿ ಅ.20 ವಿಸರ್ಜನೆ ಮುಂಜಾನೆ 4 ಗಂಟೆ ವೇಳೆಗೆ ವಿಸರ್ಜನೆಗೊಳ್ಳಲಿದೆ.

ಮಾತನಾಡದ ಜನಾರ್ದನ ಪೂಜಾರಿ:  ಪ್ರತಿ ವರ್ಷ ಕುದ್ರೋಳಿ ದಸರಾಕ್ಕಾಗಿ ಶ್ರಮಿಸಿದವರಿಗೆ ಜನಾರ್ದನ ಪೂಜಾರಿಯವರು ಸನ್ಮಾನ ನೆರವೇರಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾರೆ. ಆದರೆ ಈ ಬಾರಿ ಎಲ್ಲರನ್ನೂ ಸನ್ಮಾನಿಸಿ, ಪ್ರಸಾದ ನೀಡಿ ಹಾರೈಸಿದರೇ ಹೊರತು ಬೇರೆ ಮಾತನಾಡಲಿಲ್ಲ. ನಿರೂಪಕರು ಒತ್ತಾಯಿಸಿದರೂ ಮಾತನಾಡಿದರೆ ತಡವಾಗುತ್ತದೆ ಮುಂದಿನ ವರ್ಷ ಮಾತನಾಡುತ್ತೇನೆ ಎಂದರು. ವಿವಿಧ ಜಾತಿ, ಧರ್ಮದವರು ಒಂದಾಗಿ ದಸರಾಕ್ಕಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಬಳಿಕ ಮುಖ್ಯದ್ವಾರದವರೆಗೆ ಶಾರದಾ ಮಾತೆಯ ಮೂರ್ತಿಗೆ ಹೆಗಲುಕೊಟ್ಟು ನಡೆದರು.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...