More

  ತ್ಯಾಜ್ಯ ಘಟಕ ರಹಿತ ಫ್ಲಾಟ್‌ಗೆ ದಂಡ, ಹಳೇ ನಿಯಮದ ಕಟ್ಟುನಿಟ್ಟಿನ ಜಾರಿಗೆ ಮುಂದಾದ ನಗರಪಾಲಿಕೆ

  ಶ್ರವಣ್‌ಕುಮಾರ್ ನಾಳ ಮಂಗಳೂರು

  ಮಂಗಳೂರು ಮಹಾನಗರ ಪಾಲಿಕೆ ಮತ್ತೆ ದಂಡಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. 25ಕ್ಕಿಂತ ಹೆಚ್ಚು ವಸತಿ ಬಡಾವಣೆ, 30ಕ್ಕಿಂತ ಹೆಚ್ಚು ್ಲ್ಯಾಟ್ ಹೊಂದಿರುವ ಸಮುಚ್ಚಯಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸದಿದ್ದರೆ ಪಾಲಿಕೆ ದಂಡ ಹೇರಲಿದೆ.

  ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016ರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಬೈಲಾ ಪ್ರಕಾರ ಪಾಲಿಕೆಯು 30ಕ್ಕಿಂತ ಹೆಚ್ಚು ಮನೆ, ್ಲ್ಯಾಟ್ ಹೊಂದಿರುವ ಸಮುಚ್ಚಯಗಳಲ್ಲಿ ಮತ್ತು ಇತರ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುವ ಹೋಟೆಲ್, ಆಸ್ಪತ್ರೆ, ಲಾಡ್ಜ್, ಕಲ್ಯಾಣ ಮಂಟಪ, ಕ್ಯಾಟರಿಂಗ್ ಮುಂತಾದವುಗಳಲ್ಲಿ ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್ ಘಟಕವನ್ನು ಕಡ್ಡಾಯವಾಗಿ ನಿರ್ಮಿಸಿ ಅಲ್ಲೇ ಸಂಸ್ಕರಣೆ ಮಾಡುವಂತೆ ಮಂಗಳೂರು ಪಾಲಿಕೆ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅನುಷ್ಠಾನ ಪೂರ್ಣಪ್ರಮಾಣದಲ್ಲಿ ಜಾರಿ ಆಗಿರಲಿಲ್ಲ. ಇದೀಗ ತನ್ನ ಹಳೇ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮಂಗಳೂರು ನಗರಪಾಲಿಕೆ ಮುಂದಾಗಿದೆ.

  ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ: ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಇನ್ನು ಮುಂದೆ ಕಡ್ಡಾಯ. ಈಗಾಗಲೇ ಮಂಗಳೂರು ಪಾಲಿಕೆ ಸೂಚನೆ ಮೇರೆಗೆ 111 ಅಪಾರ್ಟ್‌ಮೆಂಟ್, ಮನೆ, ಮಳಿಗೆಯಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದ್ದು, ಘನತ್ಯಾಜ್ಯ ಕರ ಶೇ.50ರ ರಿಯಾಯಿತಿ ಪಡೆಯುತ್ತಿದ್ದಾರೆ. ರಾಮಕೃಷ್ಣ ಮಠದ ನೇತೃತ್ವದಲ್ಲಿ ನಗರದ ವಿವಿಧ ಅಪಾರ್ಟ್‌ಮೆಂಟ್, ಮನೆ, ಮಳಿಗೆಯಲ್ಲಿ ತ್ಯಾಜ್ಯ ಸಂಸ್ಕರಣೆಯನ್ನು ಮಾದರಿ ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಆದರೆ, ಉಳಿದಂತೆ ಬಹುತೇಕ ಅಪಾರ್ಟ್‌ಮೆಂಟ್ ಸಹಿತ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗುವ ಪ್ರದೇಶದಲ್ಲಿ ಪ್ರತ್ಯೇಕವಾಗಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿಲ್ಲ. ಇಲ್ಲಿನ ತ್ಯಾಜ್ಯ ಪಚ್ಚನಾಡಿಗೆ ಕೊಂಡೊಯ್ದು ಅಲ್ಲಿ ಸಂಸ್ಕರಣೆ ನಡೆಸುವ ಪ್ರಮಾಣ ಅಧಿಕವಾಗುತ್ತಿದೆ, ಇದನ್ನು ನಿಯಂತ್ರಿಸುವ ದೃಷ್ಟಿಯಿಂದ ಅಪಾರ್ಟ್‌ಮೆಂಟ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಕಡ್ಡಾಯ ಸೂತ್ರ ಜಾರಿಗೆ ಪಾಲಿಕೆ ಮುಂದಾಗಿದೆ.

  ಹಳೇ ಯೋಜನೆ ಜಾರಿ ಯಾಕೆ?

  ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಸರಾಸರಿ 330 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರಲ್ಲಿ 300 ಟನ್ ಹಸಿಕಸ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್, ಮನೆ ಸೇರಿದಂತೆ ಸುಮಾರು 99 ಸಾವಿರ ಕಟ್ಟಡಗಳಿವೆ. 1,180 ಕಿ.ಮೀ.ಉದ್ದದ ರಸ್ತೆಗಳಿವೆ. 800ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯ ಪಚ್ಚನಾಡಿ ತಲುಪುತ್ತದೆ. ಪಚ್ಚನಾಡಿಯಲ್ಲಿ ಹಸಿಕಸದಿಂದ ಕಾಂಪೋಸ್ಟ್ ತಯಾರಿ ಘಟಕ, ಉರ್ವಾದಲ್ಲಿ ಹಸಿಕಸದಿಂದ ಬಯೋಗ್ಯಾಸ್ ತಯಾರಿ ಘಟಕವಿದ್ದರೂ ಪ್ರಯೋಜನವಿಲ್ಲ. ಈ ಕಾರಣಕ್ಕಾಗಿ ತ್ಯಾಜ್ಯ ನಿರ್ವಹಣೆಯನ್ನು ಮೂಲದಿಂದಲೇ ನಡೆಸುವ ಉದ್ದೇಶದಿಂದ ಹಳೇ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾಲಿಕೆ ತೀರ್ಮಾಸಿದೆ.

  ಅಪಾರ್ಟ್‌ಮೆಂಟ್, ಮನೆ ಹಾಗೂ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016ರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಬೈಲಾ ಪ್ರಕಾರವೇ ಸಮುಚ್ಚಯಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

  ಜಯಾನಂದ ಅಂಚನ್, ಮಂಗಳೂರು ಮೇಯರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts